ಮನೆ Latest News ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ

0

ಬೆಳಗಾವಿ;  ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಪಕ್ಷ ನಾಯಕ ಅಶೋಕ್ ಚರ್ಚೆ ನಡೆಸಿದ್ರು.

ಈ ವೇಳೆ ಮಾತನಾಡಿದ ಅವರು ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗ್ಯಾರಂಟಿ ಬೇಡ, ರಸ್ತೆ ಕೊಡಿ ಅಂತಾ ಕೇಳಿದ್ದಾರಂತೆ. ನಾವು ಕಾರಿನಲ್ಲಿ ಮಳೆ ಹಾನಿ ವೀಕ್ಷಣೆ ಮಾಡಿದರೆ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ.

ಕಾರಿನಲ್ಲಿ ಹೋಗಿದ್ದರೆ ರೈತರನ್ನು ಭೇಟಿ ಮಾಡಲು ಆಗುತ್ತಿರಲಿಲ್ಲವೇ? . ಅವರ ಅಹವಾಲು ಕೇಳಿದ್ದರೆ ನಿಜ ಸ್ಥಿತಿ ತಿಳಿಯುತ್ತಿತ್ತು. ವೈಮಾನಿಕ ಸಮೀಕ್ಷೆಯಲ್ಲಿ ಯಾರು ಕೂರುತ್ತಾರೆ?. ಆ ಕಡೆ ಒಬ್ಬ ಐಎಎಸ್, ಈ ಕಡೆ ಒಬ್ಬ ಐಎಎಸ್. ನಾಟಕದಲ್ಲಿ ಕೇಳಿದಂತೆ. ಮಂತ್ರಿಗಳೆ ಹೆಂಗಿದೆ ಅಂದರೆ ಸಕಲ ಸವಲತ್ತು ದೊರತಿದೆ ಅಂತಾರೆ. ಅಧಿಕಾರಿಗಳು ಯಾವಾಗಲೂ ಸರಿಯಿದೆ ಅಂತಾನೇ ಹೇಳುವುದು. ರೈತರ ಸಮಸ್ಯೆಗಳ ಬಗ್ಗೆ ಅವರಿಗೆ ಏನು ಗೊತ್ತಿರುತ್ತದೆ?.

ಕಬ್ಬಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಲಾಭ ಇದೆ ಅಂತಾ ಸರ್ಕಾರ ತಿಳಿದುಕೊಂಡಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ನಷ್ಟ ಅಂತಾರೆ, ಮತ್ತೆ 32 ಹೊಸ ಕಾರ್ಖಾನೆಗಳಿಗೆ ಅರ್ಜಿ ಸಲ್ಲಿಸಿದ್ದಾರಂತೆ ಎಂದರು.

 

ಇದೇ ವೇಳೆ ಮಾತನಾಡಿದ  ಸಕ್ಕರೆ ಸಚಿವ ಶಿವಾನಂದ ಪಾಟೀಲ್. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರು ಇಬ್ಬರಿಗೂ ನಷ್ಟ ಇದೆ, ಅದಕ್ಕೆ ಕಾರಣ ಕೇಂದ್ರ ಸರ್ಕಾರ. ರಫ್ತು ಕೋಟಾ ಜಾಸ್ತಿ ಮಾಡಿದರೆ ಕಾರ್ಖಾನೆಗಳಿಗೆ ಲಾಭ ಎಂದರು. ಚರ್ಚೆ ಮುಂದುವರಿಸಿದ ವಿಪಕ್ಷ ನಾಯಕ ಅಶೋಕ್  ಯಾರಾದರೂ ಒಬ್ಬ ಸಚಿವರು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೀರಾ?. ಸಚಿವರ ಹಾಜರಾತಿ ಬಗ್ಗೆ ಸಿಎಂ ಒಮ್ಮೆಯಾದರು ಕೇಳಿದ್ದಾರಾ?. ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲವೋ ಆ ಸಚಿವರನ್ನು ಹೊರಗೆ ಹಾಕಬೇಕಿತ್ತು. ಕೆಲಸ ಮಾಡದಿರುವ ಮಂತ್ರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಟ್ವೀಟ್ ವಿಚಾರ, ಸಚಿವ ಭೈರತಿ ಸುರೇಶ್ ಕಿಂಗ್ ಈಸ್ ಅಲೈವ್ ಎಂಬ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದರು.  ನಾಯಕತ್ವದ ಬಗ್ಗೆ ನಾವ್ಯಾರೂ ಪ್ರಶ್ನೆ ಮಾಡಿಲ್ಲ ಎಂದು ಅಶೋಕ್ ಹೇಳಿದರು.

ಈ ವೇಳೆ ಕಿಂಗ್ ಈಸ್ ಅಲೈವ್ ಅಂದರೆ ಏನು ತಪ್ಪು ಎಂದು ಸಚಿವ ಭೈರತಿ ಸುರೇಶ್ ಕೇಳಿದರು. ಆಗ ನಾಯಕತ್ವ ಸರಿ ಇಲ್ಲದಿದ್ದರೆ ಉತ್ತರ ಕರ್ನಾಟಕದ ಗತಿ ಗೋವಿಂದ ಆಗುತ್ತದೆ ಎಂದು ಅಶೋಕ್ ಹೇಳಿದರು.  ಕೊಡಬೇಕು ಎಂಬ ಅಶೋಕ್ ಮಾತಿಗೆ ಹೈಕಮಾಂಡ್ ಕೊಡುತ್ತದೆ ಎಂದ ಸಚಿವ ಸುರೇಶ್. ಕಿಂಗ್ ಈಸ್ ಅಲೈವ್ ಮಾತಿಗೆ ಸದನದಲ್ಲಿ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ಕೊಟ್ಟರು. ಆಗ  ನಿಯತ್ತು ಅಂದರೆ ಸುರೇಶ್ ಎನ್ನಬಹುದಾ ಎಂದು ಅಶೋಕ್ ಕೇಳಿದರು. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಯತ್ತು ಎಂದರು. ಈ ವೇಳೆ ಬಿಜೆಪಿ ಶಾಸಕರು. ನಾಟಿ ಕೋಳಿ ವಿಚಾರ ಪ್ರಸ್ತಾಪಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸ್ವಾಗತ ಮಾಡಿದ ಟ್ವೀಟ್ ಉಲ್ಲೇಖ ಮಾಡಿದರು ಅಶೋಕ್. ಕಾಂಗ್ರೆಸ್ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಡಿಸಿಎಂ ಬದಲಾಗಿ ಸಿಎಂ ಡಿಕೆ ಶಿವಕುಮಾರ್ ಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದರು. ಹಟ್ಟಿಹೊಳಿ ಮಾಡಿದ್ದ ಟ್ವೀಟ್ ಉಲ್ಲೇಖಿಸಿ ಅಶೋಕ್ ಕಾಲೆಳೆದರು. ಕಣ್ತಪ್ಪಿನಿಂದ ಆಗಿದೆ ಎಂದು ಸಮರ್ಥನೆ ಕೊಡಲಾಗುತ್ತಿದೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಲಿ ಎಂದು ಅಶೋಕ್ ಆಗ್ರಹಿಸಿದರು.