ಮನೆ Latest News ನಾಳೆಯಿಂದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಬಗ್ಗೆ ಅಧಿವೇಶನದಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡೋಣ;...

ನಾಳೆಯಿಂದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಬಗ್ಗೆ ಅಧಿವೇಶನದಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡೋಣ; ಸುವರ್ಣಸೌಧದಲ್ಲಿ‌‌ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ

0

 

ಬೆಂಗಳೂರು; ನಾಳೆಯಿಂದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಬಗ್ಗೆ ಅಧಿವೇಶನದಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡೋಣ ಎಂದು  ಸುವರ್ಣಸೌಧದಲ್ಲಿ‌‌ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಚರ್ಚೆ ಆಗ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆಯಿಂದ ಅಧಿವೇಶನ ಆರಂಭ ಆಗುತ್ತೆ. ಚರ್ಚೆ ಹೇಗೆ ಆಗುತ್ತೆ ಅನ್ನೋದನ್ನ ನೋಡೋಣ. ನಾಳೆಯಿಂದ ಸರಿಯಾದ ದಿಕ್ಕಿನಲ್ಲಿ ಹೋದ್ರೆ ಸರಿ ಆಗುತ್ತೆ ಎಂದಿದ್ದಾರೆ. ನಾಯಕತ್ವ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ಡೇ ಒನ್ ನಿಂದ ಹೇಳ್ತಿದ್ದಾರೆ. ಇವಾಗ ಇನ್ನೂ ಮೂರು, ಆರು ತಿಂಗಳು ಅಂತ ಹೇಳ್ತಿದ್ದಾರೆ. ಸಿಎಂ-ಡಿಸಿಎಂ ಇದ್ದಾರೆ, ನಾವು ಇದ್ದೇವೆ. ಸರ್ಕಾರ ನಡೆಯುತ್ತಿದೆ, ಅವರ ಹೇಳಿಕೆಗೆ ಸಂಬಂಧ ಇಲ್ಲ ಎಂದಿದ್ದಾರೆ.

ನಾಳೆ ರೈತರೊಂದಿಗೆ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ರೈತರಿಗೆ ಬೆಂಬಲ‌ ಕೊಡಲಿ.ನ್ಯಾಯಸಮ್ಮತ ಹೋರಾಟ ಇರಲಿ ಎಂದ ಅವರು ಅಹಿಂದ ನಾಯಕತ್ವದ‌ ಸಾರಥ್ಯ ವಿಚಾರದ ಬಗ್ಗೆ ಮಾತನಾಡಿ ಅವಕಾಶ ಸಿಕ್ಕಾಗ ನೋಡೋಣ, ಅದರ‌ ಭಾಗವಾಗಿ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ. ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಪರಿಣಾಮ ಶೂನ್ಯ ಅಷ್ಟೇ. ಈ ರೀತಿ ಬಹಳಷ್ಟು ಬಾರಿ ಮಾಡಿದ್ದಾರೆ. ಎಷ್ಟು ಬಾರಿ ಮಾಡಿದ್ರು ಈಗ ಇರದ ಫಲಿತಾಂಶ ಶೂನ್ಯ ಎಂದು ತಿಳಿಸಿದ್ದಾರೆ.

ಆರಂಭದಲ್ಲಿಯೇ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಬಿಜೆಪಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಆದ್ರೆ ಒಳ್ಳೆಯದು,‌ ಸ್ಪೀಕರ್ ಅವರು ನಿಯಮಾವಳಿ ಪ್ರಕಾರ ಮಾಡ್ತಾರೆ. ನಾವು ಕೂಡ ಒತ್ತಡ ಮಾಡುತ್ತೇವೆ ಎಂದರು. ಬೆಳಗಾವಿ ಜಿಲ್ಲೆ ವಿಭಜನೆ ವಿಚಾರದ ಬಗ್ಗೆ ಮಾತನಾಡಿ  ಈಗಾಗಲೇ ಸಿಎಂ ಸಭೆ ಮಾಡುತ್ತೇನೆ ಎಂದಿದ್ದಾರೆ. ಇದೇ ಅಧಿವೇಶನದಲ್ಲಿ ಸಭೆ ಮಾಡುತ್ತೇನೆ ಎಂದಿದ್ದಾರೆ. ಸಭೆಯಲ್ಲಿ ಶಾಸಕರ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯತೀಂದ್ರ ಈಗಾಗಲೇ ಹೇಳಿದ್ದಾರಲ್ಲ . ಎಲ್ಲರೂ ಹೇಳಿದ್ದಾರೆ ಅದರಲ್ಲಿ ವಿಶೇಷ ಏನಿಲ್ಲ. ಮಹಾದೇವಪ್ಪ,ಪರಮೇಶ್ವರ್,ಯತಿಂದ್ರ,ಜಮೀರ್ ಈಗಾಗಲೇ ಹೇಳಿದ್ದಾರೆ. ಹೈಕಮಾಂಡ್‌ ಹೇಳ್ಬೇಕು ಅದೆಲ್ಲ. ಅವರೆಲ್ಲ ಹೇಳಿದ್ಮೇಲೆ ಆಯ್ತಲ್ಲ ನಮ್ಮದೇನು ಎಂದಿದ್ದಾರೆ.