ಮನೆ Latest News ಕರ್ನಾಟಕ ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಇಷ್ಟು ಹೊಲಸಿರೋದು ಇದೇ ಮೊದಲ ಬಾರಿ; ಕೊಪ್ಪಳದಲ್ಲಿ...

ಕರ್ನಾಟಕ ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಇಷ್ಟು ಹೊಲಸಿರೋದು ಇದೇ ಮೊದಲ ಬಾರಿ; ಕೊಪ್ಪಳದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿಕೆ

0

ಕೊಪ್ಪಳ; ಕರ್ನಾಟಕ ರಾಜ್ಯದಲ್ಲಿ  ಎಲ್ಲ ರಾಜಕೀಯ ಪಕ್ಷಗಳಲ್ಲಿ ಇಷ್ಟು ಹೊಲಸಿರೋದು ಇದೇ ಮೊದಲ ಬಾರಿ ಎಂದು ಕೊಪ್ಪಳದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು ನನ್ಮ ರಾಜಕೀಯ ಜೀವನದಲ್ಲಿ ಇಷ್ಟು ಹೊಲಸು ನೋಡಿರಲಿಲ್ಲ. ರಾಜಕೀಯದಲ್ಲಿ ಅಸಹ್ಯ ಬರೋ ಹಾಗಾಗಿದೆ ಎಂದಿದ್ದಾರೆ. ನಾಟಿಕೋಟಿ, ಇಡ್ಲಿ ಎಲ್ಲವೂ ನಡೆದಿದೆ. ಒಂದು ಟೀಮ್ ದೆಹಲಿಗೂ ಹೋಗಿದೆ. ಸಿಎಂ,  ಡಿಸಿಎಂ ಅಭಿವೃದ್ಧಿ ಬಗ್ಗೆ ಮಾತಡೋದು ಬಿಟ್ಟು, ಇಡ್ಲಿ ನಾಟಿಕೋಳಿ,ಅದ್ಯಾವದೋ ಫ್ರೈ ಅಂತೆ. ನಾನು ಕುರುಬ ಆಗಿ ಆ ಮಾತು ಕೇಳಿರಲಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಟಿವಿಗಳಲ್ಲಿ ಊಟದ ಮೆನು ಚರ್ಚೆಯಾಗ್ತಿದೆ. ಇದು ಕಾಂಗ್ರೆಸ್ ನ ಹೊಲಸು ರಾಜಕಾರಣ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ನಮ್ಮ ಸರ್ಕಾರ ಇದ್ದಾಗಲೇ ಹಣ ಬಂದಿರೋದು. ಇವರಿಗೆ ಬಡವರಿಗೆ ಮನೆ ಕೊಡೋದರ ಬಗ್ಗೆ ಗಮನ ಇಲ್ಲ. ಯಾರಾದರೂ ಸಿಎಂ ಆಗಲಿ,ನಮಗೆ ಬೇಕಾಗಿಲ್ಲ. ಆದ್ರೆ ಅಭಿವೃದ್ಧಿ ಬೇಕು ಎಂದು ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.

ಜನರಿಗೆ ವಿಶ್ವಾಸ ತರೋ ಕೆಲಸ ಕಾಂಗ್ರೆಸ್ ಮಾಡಬೇಕು.ಸಿದ್ದರಾಮಯ್ಯ ಐದು ವರ್ಷ ನಾನೇ ಅಂತಿದ್ರು. ಡಿ ಕೆ ಶಿವಕುಮಾರ್ ಯಾರೂ ಕೂಡಾ ಮುಖ್ಯಮಂತ್ರಿ ಕುರಿತು ಮಾತಾಡಬಾರದು ಎಂದಿದ್ದರು‌.. ಇದೀಗ ಒಂದು ಕಡೆ ಡಿಕೆ ಡಿಕೆ, ಇನ್ನೊಂದು ಕಡೆ ಸಿದ್ದು ಸಿದ್ದು ಎಂದು ಕೂಗುತ್ತಿದ್ದಾರೆ. ಎಲ್ಲರೂ ಅಧಿಕಾರಕ್ಕೋಸ್ಕರಾಗಿ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯನೂ ಬಂಢ, ಡಿ ಕೆ ಶಿವಕುಮಾರ್ ನೂ ಬಂಢ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.