ಮನೆ Latest News ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಹಿರಿಯ ಶಾಸಕ ಶಾಸಕ ಮಾಗಡಿ...

ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಹಿರಿಯ ಶಾಸಕ ಶಾಸಕ ಮಾಗಡಿ ಬಾಲಕೃಷ್ಣ ಹೇಳಿಕೆ

0

ಬೆಂಗಳೂರು; ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹಿರಿಯ ಶಾಸಕ ಶಾಸಕ ಮಾಗಡಿ ಬಾಲಕೃಷ್ಣ ಹೇಳಿದ್ದಾರೆ.

ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇದರ ಬಗ್ಗೆ ಹೈಕಮಾಂಡ್ ಒಂದು ಇತ್ಯರ್ಥ ಮಾಡಬೇಕು. ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಆಗುತ್ತೆ. ಗೊಂದಲ ಈಗಾಗಲೇ ಆಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಹೈಕಮಾಂಡ್ ಒಂದು ಅಂತಿಮ ರೂಪ ಕೊಡಬೇಕು. ನಾನು ಖರ್ಗೆಯವರನ್ನು ಭೇಟಿ ಮಾಡ್ತೇನೆ. ಆದ್ರೆ ಈ ಭೇಟಿ ಸೌಹಾರ್ದಯುತವಾಗಿ ‌ಇರುತ್ತೆ. ಅಧಿಕಾರ ಹಂಚಿಕೆ ಬಗ್ಗೆ ನಾನು ಅವರ ಜತೆ ಮಾತಾಡುವಷ್ಟು ಸೀನಿಯರ್ ಅಲ್ಲ ಎಂದಿದ್ದಾರೆ.

ಅಧಿಕಾರ ಹಂಚಿಕೆ ಶಾಸಕರ ನಂಬರ್ ಗೇಮ್ ಮೇಲೆ ನಿಂತಿಲ್ಲ. ಹೈಕಮಾಂಡ್ ತೀರ್ಮಾನದ ಮೇಲೆ ಅದು ನಿಂತಿದೆ.  ಡಿಕೆಶಿ ಅವರು ಯಾರಿಗೂ ತಮಗೆ ಬೆಂಬಲ ಕೊಡಿ ಅಂತ ಸೂಚಿಸಿಲ್ಲ. ಶಾಸಕರ ಬೆಂಬಲ ಕೋರುವ ಕೆಲಸ ನಡೀತಿಲ್ಲ, ಇದೆಲ್ಲ ಸುಳ್ಳು. ಕೆಲವರು ವೈಯಕ್ತಿಕ ಹೇಳಿಕೆ ಕೊಡ್ತಿರಬಹುದು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಶಾಸಕರ ಬೆಂಬಲ ಪಡೆಯುವ ಕೆಲಸ ನಡೀತಿಲ್ಲ.ಪಕ್ಷಕ್ಕೆ ಮುಜುಗರ ಆಗದಂತೆ ನಡೆದುಕೊಳ್ಳಿ ಅಂತನೇ ಡಿಕೆಶಿ ಅವರು ಯಾವಾಗಲೂ ಹೇಳೋದು ಎಂದು ತಿಳಿಸಿದ್ದಾರೆ,

ದೆಹಲಿಗೆ ನನ್ನ ನೇತೃತ್ವದಲ್ಲಿ ಹೋಗ್ತಿಲ್ಲ. ಇಲ್ಲಿ ಯಾರ ನೇತೃತ್ವವೂ ಅವಶ್ಯಕತೆ ಇಲ್ಲ. ಡಿಕೆಶಿ ಅವರಿಗೆ ಸಿಎಂ ಆಗೋದಿಕ್ಕೆ ಅವರದ್ದೇ ಆದ ಶಕ್ತಿ ಇದೆ.ಯಾರೋ ಹೋಗಿ ಅಥವಾ ನಾನೇ ಹೋಗಿ ಸಿಎಂ ಮಾಡಿಸ್ತೀನಿ ಅಂತ ಬಿಲ್ಡಪ್ ಕೊಡಕ್ಲಾಗಲ್ಲ. ಮಾಂಡ್ ತೀರ್ಮಾನ ಮಾಡುತ್ತೆ. ಪಕ್ಷಕ್ಕೆ ಮುಜುಗರ ಆಗದಂತೆ ಹೈಕಮಾಂಡ್ ಇದನ್ನು ಇತ್ಯರ್ಥ ಮಾಡಲಿ. ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು. ಇಲ್ಲದಿದ್ರೆ ಪಕ್ಷಕ್ಕೆ ತುಂಬಾ ಹಾನಿ ಆಗುತ್ತೆ. ಶಾಸಕರಿಗೂ, ಜನರಿಗೂ ಒಂದು ಕ್ಲಾರಿಟಿ ಸಿಗಬೇಕಾದರೆ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು. ಇಲ್ಲಾಂದ್ರೆ ಪಕ್ಷಕ್ಕೆ ಹಾನಿ ಆಗುತ್ತೆ, ಹಂತಹಂತವಾಗಿ ಪಕ್ಷ ಕ್ಷೀಣಿಸುತ್ತೆ  ಎಂದು ಎಚ್ಚರಿಸಿದ್ದಾರೆ.

ಇನ್ನುಜೆಡಿಎಸ್‌ ಪಕ್ಷದ ರಜತ ಮಹೋತ್ಸವವನ್ನು ಮಾಗಡಿ ಬಾಲಕೃಷ್ಣ ಲೇವಡಿ ಮಾಡಿದ್ದಾರೆ. ಜೆಡಿಎಸ್ ಇನ್ನೂ ಸದೃಢವಾಗಿ ಬೆಳೆಯಲಿ ಅಂತ ಆಶಿಸ್ತೇನೆ. ನಮಗಂತೂ ಅಲ್ಲಿದ್ದಾಗ ಒಳ್ಳೆದಾಗಲಿಲ್ಲ. ಉಳ್ಕೊಂಡಿರೋರಿಗಾದರೂ ಒಳ್ಳೆದಾಗಲಿ. ಜೆಡಿಎಸ್ ನಲ್ಲಿ ಅಧಿಕಾರ ಕುಟುಂಬದಲ್ಲೇ ಇರುತ್ತೆ, ಅದು ಹಾಗೇನೇ. ಮೊದಲಿಂದಲೂ ಅದು ಹಾಗೇನೇ, ಈಗಲೂ ಹಾಗೇನೇ. ಹಾಗಿರೋರಿಗೆ ಇದು ಹೇಗೆ ಅಂತ ಕೇಳಿದರೆ ಅವರೂ ಅದು ಹಾಗೇ ಅಂತಾರೆ. ಈಗ ನಿಖಿಲ್ ಕುಮಾರಸ್ವಾಮಿಗೆ ಟ್ರೈನಿಂಗ್ ಕೊಡ್ತಿದ್ದಾರೆ. ಟ್ರೈನಿಂಗ್ ಮುಗಿದ ಮೇಲೆ ನಿಖಿಲ್ ರಾಜ್ಯಾಧ್ಯಕ್ಷ ಆಗ್ತಾರೆ ಭವಿಷ್ಯ ನುಡಿದಿದ್ದಾರೆ.