ಮನೆ Latest News ಜೆಡಿಎಸ್ ಪಕ್ಷಕ್ಕೆ 25 ವರ್ಷ ಪೂರೈಸಿದ ಹಿನ್ನೆಲೆ; ಜೆಪಿ ಭವನದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ

ಜೆಡಿಎಸ್ ಪಕ್ಷಕ್ಕೆ 25 ವರ್ಷ ಪೂರೈಸಿದ ಹಿನ್ನೆಲೆ; ಜೆಪಿ ಭವನದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ

0

ಬೆಂಗಳೂರು; ಜೆಡಿಎಸ್ ಪಕ್ಷಕ್ಕೆ 25 ವರ್ಷ ಪೂರೈಸಿದ ಹಿನ್ನೆಲೆ  ಜೆಪಿ ಭವನದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ನಡೆಯಿತು. 25ನೇ ವರ್ಷದ ರಜತ ಮಹೋತ್ಸವ ಹಿನ್ನೆಲೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ‌ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ , ಜೆಡಿಎಲ್ ಪಿ ನಾಯಕ ಸುರೇಶ್ ಬಾಬು ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಹಾರಾಷ್ಟ್ರ, ಕೇರಳ, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾತನಾಡಿ ಅನೇಕ ರಾಜ್ಯಗಳಲ್ಲಿ ನಮ್ಮ ಪಕ್ಷದ ಸಕ್ರೀಯ ನಾಯಕರಿದ್ದಾರೆ. ಮಹಾರಾಷ್ಟ್ರ, ಉ.ಪ್ರದೇಶಗಳಲ್ಲಿ ನಮ್ಮ ಪಕ್ಷದ ನಾಯಕರಿದ್ದಾರೆ. ನಿಂತು ಮಾತನಾಡುವುದಕ್ಕೆ ಕಷ್ಟ, ಹೀಗಾಗಿ ಕೂತು ಮಾನಾಡುತ್ತಿದ್ದೇನೆ. ಇಂದು ರಾತ್ರಿ ಕಾರ್ಯಕ್ರಮ ಮುಗಿಯುವವರೆಗೆ ಇರುತ್ತೇನೆ. ನಾಳೆಯೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. 1999ರಲ್ಲಿ ಪಕ್ಷ ಪಕ್ಷ ಹೊಡೆದು ಹೋಯ್ತು. ಜಾತ್ಯಾತೀತ ಜನತಾದಳ ಪಕ್ಷ ಹೊಡೆದು ಹೋಯ್ತು. ಇಡೀ ಮುಖಂಡರು ಸೇರಿ ದೆಹಲಿಯ ನಮ್ಮ ಮನೆಯಲ್ಲಿ ಸಭೆ ಮಾಡಿದ್ವಿ. ಎಲ್ಲರೂ ಸೇರಿ ನನಗೆ ಪಕ್ಷದ ಜವಾಬ್ದಾರಿ ಕೊಟ್ಟರು. 25 ವರ್ಷ ನಡೆದು ಬಂದ ದಾರಿಯ ಬಗ್ಗೆ ಅವಲೋಕಿಸಬೇಕು. ನಿಖಿಲ್ ಕುಮಾರಸ್ವಾಮಿ ವಿಷಯ ತಿಳಿದುಕೊಳ್ಳಬೇಕು. ನೋವು ಅನುಭವಿಸಿಕೊಂಡು ನಡೆದುಕೊಂಡ ಬಂದ ಹಾದಿ ನೆನೆಸಿಕೊಳ್ಳಬೇಕು. ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ 19 ಜನ ಗೆದ್ದು 20% ಮತ ಗಳಿಸಿದ್ದಾರೆ. ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡಿದ್ದೇವೆ. ಒಂದು ವರ್ಷ ಇಡೀ ರಾಜ್ಯಾದ್ಯಂತ ಸುತ್ತಾಟ ಮಾಡಿದ್ರು ಎಂದರು.

ಜನರ ಬೆಂಬಲ ಬಹಳ ಉತ್ಸಾಹದಿಂದ ತೋರಿಸಿದ್ರು. ಚುನಾವಣೆಯ ಕೊನೆ ದಿನದಲ್ಲಿ ಗ್ಯಾರೆಂಟಿಯಿಂದ ಬಡವರ ಸಮಸ್ಯೆ ಬಗೆಹರಿದಿದೆ ಅಂತೇಳಿ. ಆಳುವ ಪಕ್ಷದ ಮುಖಂಡರು ಹೇಳಿದ್ದಾರೆ. ಹಳ್ಳಿಗಳಲ್ಲಿ ಜನರ ಸ್ಥಿತಿ ಹೋಗಿ ನೋಡಬೇಕು. ಜನರ ಸಂಕಷ್ಟಕ್ಕೆ ಅರಿಯಲು ಹಳ್ಳಿಗಳಿಗೆ ಹೋಗಿ ನೋಡಬೇಕು. ಗುಲ್ಬರ್ಗಕ್ಕೆ ಹೋಗಿ ಸಮಸ್ಯೆ ಆಲಿಸಲು ಹೋಗಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣ ಆಗಲಿಲ್ಲ, ಆದ್ರೂ ಮುಂದೆ ಹೋಗ್ತೀನಿ. ದೇವೇಗೌಡರು ಮುಗಿದೇ ಹೋದ್ರು ಅಂತಲ್ಲ. ನನಗೆ ಜ್ಞಾಪಕಶಕ್ತಿ ಇದೆ. ಯಾರೆಲ್ಲಾ ಏನೇನು ಮಾಡಿದ್ರು ಅಂತ ಗೊತ್ತು. 93ನೇ ವಯಸ್ಸಿನಲ್ಲಿ ಧ್ವಜಾರೋಹಣ ಮಾಡ್ತಿದ್ದೇನೆ. ದೇವೇಗೌಡರು ಮುಗಿದೇ ಹೋಯ್ತು ಅಂತ ಅನೇಕರು ತಿಳಿದುಕೊಂಡಿದ್ರು. ಪಕ್ಷಕ್ಕೆ ಹೋರಾಡುವ ಶಕ್ತಿ ನನಗಿದೆ. ಡಯಾಲಿಸಿಸ್ ಮಾಡಿಸಿಕೊಳ್ತಿದ್ದೇನೆಯ ದಿನಕ್ಕೆ ನಾಲ್ಕೈದು ಬಾರಿ, its not a big issue. ಸವಿಸ್ತಾರವಾಗಿ ಮಾತನಾಡುವ ಶಕ್ತಿ ಪರಮಾತ್ಮನು ಕೊಟ್ಟಿದ್ದಾನೆ. ಜೆಡಿಎಸ್ ಮತ್ತೊಮ್ಮೆ ತಲೆ ಎತ್ತಿ ನಿಲ್ಲಬೇಕು. ನಾವು ಎನ್ ಡಿಎ ನಲ್ಲಿದ್ದೇವೆ. ನಾನೇ ಕುಮಾರಸ್ವಾಮಿ ಅವ್ರನ್ನ ಹೇಳಿದೆ.20 ಸಾವಿರ ಕೋಟಿ ರೂ. ಅವರೇ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ಹಿಂದಿನ ಮೈತ್ರಿ ಸರ್ಕಾರ ಪಥನ ವಿಚಾರದ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿ ಆಗಿದ್ದಾರೋ ಅವರೇ ಅವತ್ತು ನಮ್ಮ ಸರ್ಕಾರ ತೆಗೆದದ್ದು. 18 ಜನರನ್ನ ದೆಹಲಿಗೆ ಕಳುಹಿಸಿದ್ರು. ಸತ್ಯಕ್ಕೆ ಬೆಲೆ ಇದೆ, ಸತ್ಯ ಮುಚ್ಚಿಡಲು ಆಗಲ್ಲ. ಯಾರೂ ತಪ್ಪಿಸಿಕೊಳ್ಳೋಕೆ ಆಗಲ್ಲ, ದೈವದ ಅನುಗ್ರಹ ಇರುತ್ತೆ. ಜಯಪ್ರಕಾಶ್ ನಾರಾಯಣ್ ದೇಶಕ್ಕೆ ಹೋರಾಡಿದ್ರು. ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿನಲ್ಲಿದ್ರಿ. ನಾಳೆ ಮತ್ತೆ ಪುನಃ ಮಾತನಾಡುತ್ತೇನೆ. ಎರಡು ಬಾರಿ ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಅನುಭವ ಪಡೆದುಕೊಂಡಿದ್ದಾರೆ. ರಾಜ್ಯದ ಸಮಸ್ಯೆ ಅವರಿಗೆ ಗೊತ್ತಿದೆ. ಜೆಡಿಎಸ್ ಮತ್ತೆ ತಲೆ‌ ಎತ್ತಿ ನಿಲ್ಲಬೇಕು. ಬಾಕಿ ವಿಚಾರ ನಾಳೆ ಮಾತನಾಡಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ.  ಪಕ್ಷದ ಬೆಳವಣಿಗೆಗೆ ನೀವೆಲ್ಲ ಶ್ರಮಿಸುತ್ತಿದ್ದೀರಿ.ರಾಜ್ಯದ ಜನತೆ ಮುಂದೆ ಶಕ್ತಿ ತುಂಬುವ ಭಾವನೆ ಇದೆ ಎಂದರು.