ಮನೆ Latest News ವಿಧಾನಸೌಧದಲ್ಲಿಯೇ ಟೆರರಿಸ್ಟ್ ಇದ್ದಾರೆ, ನಾವು ಅದನ್ನ ಬಿಟ್ಟು ಜೈಲಿನಲ್ಲಿ ಟೆರರಿಸ್ಟ್ ಬಗ್ಗೆ ಮಾತನಾಡ್ತಿದ್ದೇವೆ; ಕೇಂದ್ರ ಸಚಿವ...

ವಿಧಾನಸೌಧದಲ್ಲಿಯೇ ಟೆರರಿಸ್ಟ್ ಇದ್ದಾರೆ, ನಾವು ಅದನ್ನ ಬಿಟ್ಟು ಜೈಲಿನಲ್ಲಿ ಟೆರರಿಸ್ಟ್ ಬಗ್ಗೆ ಮಾತನಾಡ್ತಿದ್ದೇವೆ; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು: ವಿಧಾನಸೌಧದಲ್ಲಿಯೇ ಟೆರರಿಸ್ಟ್ ಇದ್ದಾರೆ, ನಾವು ಅದನ್ನ ಬಿಟ್ಟು ಜೈಲಿನಲ್ಲಿ ಟೆರರಿಸ್ಟ್ ಬಗ್ಗೆ ಮಾತನಾಡ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಜೈಲಿನಲ್ಲಿ  ಸೌಲಭ್ಯ ನೀಡಿರೋದು ಬಗ್ಗೆ  ಚರ್ಚೆ ಆಗಿದೆ. ಇದು ಏನು ಹೊಸದಾಗಿ ನಡಿತ್ತಿಲ್ಲ. ಈ ಹಿಂದೆ ಹಿರಿಯ ಅಧಿಕಾರಿಗಳ ವಿಚಾರದಲ್ಲಿ ಘರ್ಷಣೆ ಆಗಿದೆ. ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ. ವಿಧಾನಸೌಧದಲ್ಲಿಯೇ ಟೆರರಿಸ್ಟ್ ಇದ್ದಾರೆ. ನಾವು ಅದನ್ನ ಬಿಟ್ಟು ಜೈಲಿನಲ್ಲಿ ಟೆರರಿಸ್ಟ್ ಬಗ್ಗೆ ಮಾತನಾಡ್ತೀದ್ದೇವೆ. ಗೃಹ ಸಚಿವರು ಹೇಳಿದ್ದಾರೆ ತನಿಖೆ ಮಾಡ್ತೇವೆ ಅಂತಾ.ಏನು ತನಿಖೆ ಮಾಡ್ತೀರಾ?. ನೀವೆಲ್ಲಾ ಅಲ್ಲಿ ನಡೆಯುತ್ತಿರುವ ಸೌಲಭ್ಯ ಬಗ್ಗೆ ನೀವು ತೋರಿಸಿದ್ದೀರಾ. ಈಗ ಮತ್ತೆ ತನಿಖೆ ಮಾಡಿ ಏನು ಮಾಡ್ತೀರಾ?. ಸುಮ್ಮನೇ ಕಾಲ ಹರಣ ಮಾಡ್ತೀರಾ. ಇದೆಲ್ಲವೂ ಸಿಎಂ ಗೃಹ ಸಚಿವರನ್ನೇ ಕೇಳಬೇಕು. ಆಡಳಿತ ವೈಫಲ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ. ಸಿಎಂ ಅವರು ಬಿಜೆಪಿ ಅವರಿಗೆ ಮಾನ ಮರ್ಯದೆ  ಇಲ್ಲ ಅಂದಿದ್ರು . ಈಗ ನಿಮ್ಮೆಗೆ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.

ಅದೇನೋ ಸಿಎಂ  ಮಾಹಿತಿ ತಿಳಿದುಕೊಳ್ಳುತ್ತಾರೆ ಅಂತಾರೆ. ನಿನ್ನೆ ಹೇಳಿಕೆ ನೀಡಿದ್ರು ನಾನು ನೋಡಿದೆ. ಮಾಹಿತಿ ತಗೊಂಡು ಮಾತನಾಡ್ತಾರೆ ಅಂತೆ. ಇವರಿಗೆ ಇಂಟಲಿಜೆನ್ಸ್ ಇರಲ್ವಾ? ಎಂದಿದ್ದಾರೆ.  ಗೃಹ ಸಚಿವರ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು  ಗೃಹ ಸಚಿವರು ರಾಜೀನಾಮೆ ಕೊಡೋವರೆಗೂ  ನೈತಿಕತೆ ಇಟ್ಟುಕೊಂಡಿದ್ದರಾ ಗೊತ್ತಿಲ್ಲ ಎಂದಿದ್ದಾರೆ .

ವಿಧಾನಸೌಧದಲ್ಲಿ ಇರೋ ಟೆರರಿಸ್ಟ್ಗೂ ಪರಪ್ಪನ ಅಗ್ರಹಾರದಲ್ಲಿರೋ ಟೆರರಿಸ್ಟ್ ಯಾವುದೇ ವ್ಯತ್ಯಾಸ ಇಲ್ಲ.ವಿಧಾನಸೌಧದ ಟೆರರಿಸ್ಟ್ ಯಾರೆಂದು ನನ್ನಗಿಂತ ನಿಮ್ಮಗೆ ಚೆನ್ನಾಗಿ ಗೊತ್ತಿದೆ. ಅದು ಜನರಿಗೂ ಕೂಡ ಗೊತ್ತಿದೆ.ವಿಧಾನಸೌಧದಲ್ಲಿರೋ ಟೆರರಿಸ್ಟ್ ಇವರಿಗಿಂತ ತುಂಬಾ ಡೇಂಜರ್ ಎಂದು ಹೇಳಿದ್ದಾರೆ. ಏರ್ ಪೋರ್ಟ್ನಲ್ಲಿ ನಮಾಜ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಬೇರೆ ದೇಶದಲ್ಲಿ ಪ್ರತ್ಯೇಕ ಕೊಠಡಿ ಕೊಡ್ತಾರೆ. ಬೆಂಗಳೂರು ನಗರ ಇಂಟರ್ನ್ಯಾಷನಲ್ ನಗರ. ಇಲ್ಲಿ ಹಲವಾರು ಧರ್ಮದ ಜನರು ಬರ್ತಾರೆ. ಅವರವರ ಧರ್ಮ ಅವರು ಪಾಲಿಸಬೇಕು.ಇದಕ್ಕೆಲ್ಲಾ ಒಂದು ಸಿಸ್ಟಂ ಇರಬೇಕು ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.

ಆರ್ ಎಸ್ ಎಸ್ ಬ್ಯಾನ್ ಮಾಡ್ತಾರೆ ಇವರು ಎಲ್ಲೆಲ್ಲೊ ನಮಾಜ್ ಮಾಡ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ಅವೆಲ್ಲಾ ಅವಶ್ಯಕತೆ ಇಲ್ಲ. ನಾನು ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ದೇನೆ,‌ಇಲ್ಲಾ ಅಂತಾ ಹೇಳೊಲ್ಲ.ಆದ್ರೆ ಸಿಸ್ಟಮ್ ಸರಿಯಾದ ರೀತಿ, ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ತೀರ್ಮಾನ ಆಗಬೇಕು ಎಂದಿದ್ದಾರೆ.

ವಿಧಾನಸೌದದಲ್ಲಿರುವ ಟೆರೆರಿಸ್ಟ್ ಗಳಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ವಿಧಾನಸೌದದಲ್ಲಿರುವ ಟೆರರಿಸ್ಟ್ ಗಳಿಗೂ ಪರಪ್ಪನ ಅಗ್ರಹಾರದಲ್ಲಿ ಇರುವ ಟೆರರಿಸ್ಟ್ ಗಳಿಗೂ ವ್ಯತ್ಯಾಸ ಇಲ್ಲ. ವಿಧಾನಸೌದದಲ್ಲಿರುವ ಟೆರರಿಸ್ಟ್ ಗಳು ಯಾರು ಅನ್ನೋದು ನನಗಿಂತ ಹೆಚ್ಚಾಗಿ ನಿಮಗೆ ಚೆನ್ನಾಗಿ ಗೊತ್ತು . ಜನರು ಮಾತಾಡ್ತಾರೆ, ಜನರು ಅವರನ್ನು ಕಂಡರೆ‌  ಭಯನೂ ಬೀಳ್ತಾರೆ. ಅದ್ರಿಂದ ಪರಪ್ಪನ ಅಗ್ರಹಾರದಲ್ಲಿ ಇರುವಂತಹ ಟೆರರಿಸ್ಟ್ ಗಳಿಗಿಂತ ಇವರು ಇನ್ನೂ ಡೇಂಜರ್ಸ್ ಎಂದಿದ್ದಾರೆ.