ಬೆಂಗಳೂರು; ಸಿದ್ದರಾಮಯ್ಯ ಅವರನ್ನು ಇಳಿಸುವುದು ಕಷ್ಟ, ಹೆಚ್.ಡಿಕೆ ಹೇಳಿಕೆ ವಿಚಾರ: ನಾನು ಚಿಕ್ಕವನು, ಇದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ವಿ ಸೋಮಣ್ಣ ಹೇಳಿದ್ದಾರೆ.
ನಂಗೇನು ಗೊತ್ತಿಲ್ಲ, ನಾನು ಎಲ್ ಬೋರ್ಡ್. ಎರಡು ಬಾರಿ ಹೆಚ್‌ಡಿಕೆ ಸಿಎಂ ಆಗಿದ್ದರು. ಅವರ ತಂದೆ ಪ್ರಧಾನಮಂತ್ರಿಯಾಗಿದ್ದವರು. ಅವರು ಯಾವ ಮಾಹಿತಿ ಮೇಲೆ ಮಾತಮಾಡಿದ್ದಾರೆ ಗೊತ್ತಿಲ್ಲ. ನಾನು ಚಿಕ್ಕವನು, ಇದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆಗೆ ಕೇಂದ್ರ ಸಚಿವ ವಿ.ಸೋಮಣ್ಣ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸಕ್ಕೂ ಮುನ್ನ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು ಸೌತ್ ಆಫ್ರಿಕಾಕ್ಕೆ 6 ದಿನಗಳ ಪ್ರವಾಸ ತೆರಳುತ್ತಿದ್ದೇನೆ. ಕೇಂದ್ರ ಸರ್ಕಾರದ ಪರವಾಗಿ ನಾನು ರಾಷ್ಟ್ರಪತಿ ಜೊತೆಗೆ ತೆರಳುತ್ತಿದ್ದೇನೆ. ಈ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಕೃಜ್ಞತೆ ಸಲ್ಲಿಸುತ್ತೇನೆ ಎಂದರು.
ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ವಿ ಸೋಮಣ್ಣ ಸಿಎಂ ಸಿದ್ಧರಾಮಯ್ಯ ಈ ಕೆಲಸ ಮುಂಚೆಯೇ ಮಾಡಬೇಕಿತ್ತು. ರೈತರ ಪ್ರತಿಭಟನೆಗೂ ಮುನ್ನ ಮಾಡಬೇಕಿತ್ತು. ಇಚ್ಛಾಶಕ್ತಿ ಕೊರೆತೆ ಎಷ್ಟಿದೆ ಎಂದು ಗೊತ್ತಾಗುತ್ತಿದೆ. ರೈತರಿಗೆ ಅನಗತ್ಯ ತೊಂದರೆ ಕೊಡುವ ಬದಲು ಮುಂಚೆಯೇ ಮಾಡಬೇಕಿತ್ತು. ಕಬ್ಬಿನ ಇತರೆ ಉತ್ಪನ್ನಗಳಿಂದ ಬರುವ ಆದಾಯ ವನ್ನು ರೈತರಿಗೆ ನೀಡಬೇಕು. ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಅನ್ಯಾಯ ಆಗದಹಾಗೇ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ, ಪ್ರಧಾನಿ ಕಡೆಗೆ ಬೊಟ್ಟು ಮಾಡುವುದು ನಿಲ್ಲಿಸಬೇಕು.ರಾಜ್ಯ ಸರ್ಕಾರ ಏನ್ ಮಾಡಬಹುದು ಅದನ್ನು ಮಾಡಿ ಆಮೇಲೆ ಕೇಂದ್ರಕ್ಕೆ ಮನವಿ ಮಾಡಿ ಎಂದು ತಿಳಿಸಿದರು.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಐಷರಾಮಿ ಜೀವನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಹಿಂದೆ ನಾನು ಕಾರಗೃಹ ಮಂತ್ರಿಯಾಗಿದ್ದಾಗ ಪರಪ್ಪನ ಅಗ್ರಹಾರ ನಿರ್ಮಾಣ ಮಾಡಲಾಯಿತು. ಇವತ್ತು ಸೆಂಟ್ರಲ್‌ಜೈಲ್ ಮುಂದುವರಿಸಿದರೆ ಕೈದಿಗಳೇ ಜೈಲು ಒಡೆದು ಹಾಕುತ್ತಿದ್ದರು. ಪರಪ್ಪನ ಅಗ್ರಹಾರ ಅಚ್ಚುಕಟ್ಟಾಗಿ ನಿರ್ಮಿಸಲಾಯಿತು.ಕೈದಿಗಳಿಗೆ ಅಲ್ಲಿ ಐಷರಾಮಿ ಜೀವನಕ್ಕೆ ಅವಕಾಶ ನೀಡಿದರೆ ತಪ್ಪು. ಕಾನೂನು ಪಾಲಿಸಬೇಕಾದ ಸ್ಥಳ ಅದು. ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳಬೇಕು.ಇಂತಹ ಅಪಚಾರಗಳನ್ನು ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದರು.











