ಮನೆ Latest News ಪವರ್ ಶೇರಿಂಗ್ ವಿಚಾರದ ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಕೆ ಎನ್...

ಪವರ್ ಶೇರಿಂಗ್ ವಿಚಾರದ ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಕೆ ಎನ್ ರಾಜಣ್ಣ..

0

ತುಮಕೂರು: ಪವರ್ ಶೇರಿಂಗ್ ವಿಚಾರದ ಬಗ್ಗೆ  ಮಾಜಿ ಸಚಿವ ಕೆ ಎನ್ ರಾಜಣ್ಣ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ.

ತುಮಕೂರಿನ ಮಧುಗಿರಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಿಎಂ ಬದಲಾವಣೆ ವಿಷ್ಯ ಸಂಪುಟ ಪುನಾರಚನೆ ಮೇಲೆ ನಿಂತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಂಪುಟ ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವರೇ ಸಿಎಂ ಆಗಲಿದ್ದಾರೆ. ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಸಂಪುಟ ಪುನಾರಚನೆ ಅಧಿಕಾರ ಕೊಟ್ಟರೆ ಸಿದ್ದರಾಮಯ್ಯನವರೇ ೫ ವರ್ಷ  ಸಿಎಂ ಆಗಿ ಇರಲಿದ್ದಾರೆ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಸಂಪುಟ ಪುನಾರಚನೆ ಅಧಿಕಾರ ಕೊಟ್ಟರೆ ಸಿದ್ದರಾಮಯ್ಯನವರೇ ೫ ವರ್ಷ  ಸಿಎಂ ಆಗಿ ಇರಲಿದ್ದಾರೆ . ಇಲ್ಲದಿದ್ದರೆ ರಾಜಕೀಯ ಸ್ಥಿತ್ಯಂತರ ನಡೆಯೋದು ಗ್ಯಾರಂಟಿ ಎಂದಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶ ಬರೋವರೆಗೂ ಏನೂ ಆಗಲ್ಲ.. ಫಲಿತಾಂಶದ ಬಳಿಕ ಎಲ್ಲಾ ಬೆಳವಣಿಗೆ ನಡೆಯಲಿದೆ. ರಿಶಫಲ್ ಮಾಡಲು ಸಿದ್ದರಾಮಯ್ಯಗೆ ಹೈಕಮಾಂಡ್ ಒಪ್ಪಿಗೆ ಕೊಡದೇ ಇದ್ದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ. ಇದು ನನ್ನ ಅಸೆಸ್ ಮೆಂಟ್ ಎಂದು ನವೆಂಬರ್ ಕ್ರಾಂತಿಯ ಸುಳಿವು ಕೊಟ್ಟಿದ್ದಾರೆ ರಾಜಣ್ಣ.

ಈ ಬೆಳವಣಿಗೆ ಕೇವಲ ಕಾಂಗ್ರೆಸ್ ನಲ್ಲಿ ಮಾತ್ರ ಅಲ್ಲ. ಬಿಜೆಪಿಯಲ್ಲೂ ಕೇಂದ್ರದಲ್ಲಿ ಬದಲಾವಣೆ ಆಗಲಿದೆ. ಮಂತ್ರಿ ಮಂಡಲ ರಿಶಫಲ್ ಆಗಲಿದೆ.ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಇರುವಂತೆ. ಒಬಿಸಿಗಳಿಗೆ ಲೋಕಸಭೆ, ವಿಧಾನ ಸಭೆ ಚುನಾವಣೆಯಲ್ಲಿ ಮೀಸಲಾತಿ ಕೊಡಬೇಕು…ಹೇಗೆ ಲೋಕಸಭೆ, ವಿಧಾನ ಸಭೆಗೆ ಎಸ್ಸಿ‌ಎಸ್ಟಿಗೆ ಮೀಸಲು ಕ್ಷೇತ್ರ ಇರುತ್ತದೋ..ಅದೇ ರೀತಿ ಒಬಿಸಿ ವರ್ಗದವರಿಗೂ ಮೀಸಲಾತಿ ಕೊಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದ ಮಾಜಿ ಸಚಿವ ರಾಜಣ್ಣ. ಹೇಳಿದ್ದಾರೆ.