ಮನೆ Latest News ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ತಗೋತಾರೆ,ಚನ್ನಪಟ್ಟಣ ಪ್ರಕರಣದಲ್ಲಿ ಯಾಕೆ ಕ್ರಮ ಇಲ್ಲ?; ಸರ್ಕಾರಕ್ಕೆ...

ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ತಗೋತಾರೆ,ಚನ್ನಪಟ್ಟಣ ಪ್ರಕರಣದಲ್ಲಿ ಯಾಕೆ ಕ್ರಮ ಇಲ್ಲ?; ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆ

0

ಬೆಂಗಳೂರು: ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ತಗೋತಾರೆ,ಚನ್ನಪಟ್ಟಣ ಪ್ರಕರಣದಲ್ಲಿ ಯಾಕೆ ಕ್ರಮ ಇಲ್ಲ? ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಯಲಹಂಕದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್ ಆರ್‌ಎಸ್‌ಎಸ್ ಅಂತ ಹೇಳ್ತಾರೆ ಸರ್ಕಾರ. ಇದು ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡೋ ಸಂದರ್ಭನಾ?. ನಿನ್ನೆ ಚನ್ನಪಟ್ಟಣದಲ್ಲಿ ಖವ್ವಾಲಿ ಕಾರ್ಯಕ್ರನದಲ್ಲಿ ಪೊಲೀಸರ ಮೇಲೆ ಹಣ ಎರಚಿದ ಘಟನೆ ನಡೆದಿದೆ. ಚನ್ನಪಟ್ಟಣದಲ್ಲಿ ಡಾನ್ಸ್ ಮಾಡ್ತಾರೆ, ಹಣ ಎರಚ್ತಾರೆ, ಇದರ ಮೇಲೆ ಯಾಕೆ ಕ್ರಮ ಇಲ್ಲ. ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ

ರಸ್ತೆ ಗುಂಡಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಿರಣ್ ಮುಜುಂದಾರ್ ಷಾ ಅವರ ಟ್ವೀಟ್ ಗೆ ಈ ಸರ್ಕಾರ ಟೀಕೆ ಮಾಡಿದೆ. ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಮುಖ್ಯ. ವಾಸ್ತವಾಂಶವನ್ನು ಮಾಧ್ಯಮಗಳೇ ತೋರಿಸ್ತಿದ್ದೀರಿ. ಕಿರಣ್ ಮುಜುಂದಾರ್ ಷಾ ಅವರನ್ನು ಟೀಕಿಸೋದ್ರಲ್ಲಿ ಅರ್ಥ ಇಲ್ಲ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ ಸಾಕಷ್ಟು ಸಮಸ್ಯೆ ಆಗ್ತಿದೆ. ನಾನು ಇದ್ದಾಗ ನನ್ನ ಕಾಲದ ಎರಡೂ ಅವಧಿಯಲ್ಲೂ ಗುಂಡಿಗಳ ಬಗ್ಗೆ ಯಾವ ಉದ್ಯಮಿಗಳೂ ಟೀಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಆಗಿನ ಪರಿಸ್ಥಿತಿಯಲ್ಲಿ 59 ರಸ್ತೆಗಳ ಅಗಲೀಕರಣ ಐದಾರು ತಿಂಗಳಲ್ಲೇ ಮುಗಿಸಲಾಗಿತ್ತು. ಈಗ ಇವ್ರು ಚರ್ಚೆ ಮಾಡ್ತಿರುವ ಕೆಲಸಗಳು ನಮ್ಮ‌ ಅವಧಿಯಲ್ಲಿ ಆಗಲೇ ಆಗಿದ್ವು. ಬೇರೆ ರಾಜ್ಯಗಳಲ್ಲಿ ಉದ್ಯಮಿಗಳಿಗೆ ಕೊಡುವ ಸವಲತ್ತು, ರಿಯಾಯ್ತಿಗಳ ಬಗ್ಗೆ ಹೇಳಿದರೆ ಅಲ್ಲಿಗೇ ಹೋಗಲಿ, ಇಲ್ಲಿಗ್ಯಾಕೆ ಬಂದ್ರು ಅಂತಾರೆ. ಹೀಗೆ ಹೇಳಿದರೆ ಯಾವ ಉದ್ಯಮ ಬರುತ್ತೆ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಹಾಸನಾಂಬೆ ದರ್ಶನ ವೇಳೆ ಸರ್ಕಾರದಿಂದ ಪ್ರೋಟೋಕಾಲ್ ಪಾಲಿಸದ ಆರೋಪದ ಬಗ್ಗೆ ಮಾತನಾಡಿದ ಅವರು ನಾನು ಪ್ರೋಟೋಕಾಲ್ ಗೆ ಹೆಚ್ಚಿನ ಆದ್ಯತೆ ಕೊಡಲ್ಲ. ಅಧಿಕಾರಿಗಳಿಗೇಕೆ ತೊಂದರೆ ಕೊಡಬೇಕು?. ದೇವಿ ದರ್ಶನ ಮುಖ್ಯ, ಅದಾಗಿದೆ ಎಂದರು. ಇದೇ ವೇಳೆ ಯಾವ ಕ್ರಾಂತಿಯೂ ನಡೆಯಲ್ಲ, ನವೆಂಬರ್ ಕ್ರಾಂತಿಯೂ ನಡೆಯಲ್ಲ ಎಂದು ಕ್ರಾಂತಿ ಬಗ್ಗೆ ಹೆಚ್ಡಿಕೆ ಭವಿಷ್ಯ ನುಡಿದಿದ್ದಾರೆ. ಯಾವ ಕ್ರಾಂತಿಯೂ ನಡೆಯಲ್ಲ. ಜನರಿಗೆ ಅಭಿವೃದ್ಧಿ ಕ್ರಾಂತಿ ಮಾಡಲಿ ಸಾಕು ಎಂದಿದ್ದಾರೆ.