ಮನೆ Latest News ಕೇಂದ್ರದಲ್ಲಿ ಬಿಜೆಪಿ ಬರಲ್ಲ, ನಾನೂ ಭವಿಷ್ಯ ನುಡಿಯುತ್ತೇನೆ : ಸಚಿವ ಸಂತೋಷ್ ಲಾಡ್ ಹೇಳಿಕೆ

ಕೇಂದ್ರದಲ್ಲಿ ಬಿಜೆಪಿ ಬರಲ್ಲ, ನಾನೂ ಭವಿಷ್ಯ ನುಡಿಯುತ್ತೇನೆ : ಸಚಿವ ಸಂತೋಷ್ ಲಾಡ್ ಹೇಳಿಕೆ

0

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಬರಲ್ಲ, ನಾನೂ ಭವಿಷ್ಯ ನುಡಿಯುತ್ತೇನೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂಬ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕೇಂದ್ರದಲ್ಲಿ ಬಿಜೆಪಿ ಬರಲ್ಲ. ನಾನೂ ಭವಿಷ್ಯ ನುಡಿಯುತ್ತೇನೆ. ಆ ಸ್ವಾಮೀಜಿ ಬಳಿ‌ ಕೇಳಿ ಎಂದಿದ್ದಾರೆ.

ಪಪ್ಪಿ ಬಂಧನದ ಬಗ್ಗೆ ರಾಜಕೀಯ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅಜಿತ್ ಪವರ್ ‌ಕರರೆದುಕೊಂಡು ವಾಷಿಂಗ್ ಪೌಂಡರ್ ಮಾಡಿಕೊಂಡರು. ಅವರನ್ನೂ‌ ಚುನಾವಣೆಗೆ ಬಳಸಿಕೊಂಡಿಲ್ವಾ ?ಎಂದರು. ಸಿಎಂ ಔತಣಕೂಟ ವಿಚಾರದ ಬಗ್ಗೆ ಮಾತನಾಡಿದ ಪ್ರತಿ ವರ್ಷ ಕರೆಯುತ್ತಾರೆ. ಸಂಪುಟ ಪುನರ್ ರಚನೆ ಬಗ್ಗೆ‌ ಹೈಕಮಾಂಡ್, ಸಿಎಂ ಕ್ರಮ‌ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಮಾತನಾಡಿದ ಅವರು ನಿತಿನ್ ಗಡ್ಕರಿ ಪ್ರಧಾನಿ ಆಗ್ತಾರೆ. ಇದೇ ನವೆಂಬರ್ ಕ್ರಾಂತಿ. ಬಿಜೆಪಿಯವರು ಒತ್ತಾಯಪೂರ್ವಕವಾಗಿ ಪ್ರಧಾನಿ ಬಗ್ಗೆ ಸಮರ್ಥನೆ ಮಾಡಿಕೊಳ್ತಾರೆ ಎಂದು ಹೇಳಿದ್ದಾರೆ.

10 ಸಾವಿರ ರೂ. ಹೆಣ್ಣು ಮಕ್ಕಳಿಗೆ ಕೊಟ್ಟು ಚುನಾವಣೆಗೆ ಮತ ಹಾಕಿಸಿಕೊಳ್ತಾರೆ. 12 ರಜೆ ಕೊಟ್ಟು ಹೆಚ್ಚುವರಿ ಕೆಲಸ ಮಾಡಿಸಬಹುದೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಹೆಚ್ಚುವರಿ ಕೆಲಸ ಮಾಡಿಸೋಕೆ‌ ಆಗಲ್ಲ. ಮುಂದೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡೋಣ ಜ್ವರ ಬರುವುದಕ್ಕಿಂತ ಮುನ್ನ ಗುಳಿಗೆ ಬೇಡ. ಜಾರಿ ಆದ್ಮೇಲೆ ಮುಂದೆ ನೋಡೋಣ ಎಂದಿದ್ದಾರೆ.

ಋತುಚಕ್ರದ ರಜೆಯ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರದ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ಸಿಎಂ, ಸಚಿವರು ಮನ್ನಣೆ ಕೊಟ್ಟಿದ್ದಾರೆ ರಂಜಿತಾ ಪ್ರಿಯದರ್ಶಿನಿ ಅಂತ ಇದ್ದಾರೆ,‌ ಅವರು ಒರಿಸ್ಸಾದವರು. ಋತುಚಕ್ರ ರಜೆ ಬಗ್ಗೆ ಅವರು ಇದನ್ನ ಗಮನಕ್ಕೆ ತಂದ್ರು. ಕ್ಯಾಬಿನೆಟ್ ನಲ್ಲಿ ಈ ವಿಚಾರ ಇಟ್ಟಿದ್ದೆವು. ನಂತರ ಒಂದು ಕಮಿಟಿ ರಚನೆ ಮಾಡಿದ್ವಿ. ಸಪ್ನಾ ಕಮಿಟಿ ಒಂದು ವರದಿಯನ್ನ ಕೊಡ್ತು. ಆ ವರದಿಯನ್ನ ಕ್ಯಾಬಿನೆಟ್ ಗೆ ಇಟ್ಟಿದ್ದೆವು. ಕ್ಯಾಬಿನೆಟ್ ಈ ಬಿಲ್ ಗೆ ಒಪ್ಪಿಗೆ ಕೊಟ್ಟಿದೆ. ಡೀಪ್ ಆಗಿ ಅಧ್ಯಯನ ಮಾಡಿ ವರದಿ ಕೊಟ್ಟಿದ್ರು. ಈಗ ಅವರನ್ನ ಅಭಿನಂದಿಸಬೇಕು ಕಾರ್ಯಕ್ರಮದ ಮೂಲಕ ಅನುಷ್ಠಾನ ಮಾಡ್ತೇವೆ. ಎರಡು ತಿಂಗಳೊಳಗೆ ಇದನ್ನ ಜಾರಿ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಹಂತ ಹಂತವಾಗಿ ಹೊಸ ಆಲೋಚನೆ ಬಂದಾಗ ಹೆಣ್ಣು ಮಕ್ಕಳ ಪರ ಮಾಡ್ತೀವಿ. ಸರ್ಕಾರ ಈ ಬಗ್ಗೆ ಚಿಂತನೆ ಮಾಡುತ್ತೆ. ಕ್ಯಾಬಿನೆಟ್ ಇದೆ, ಪ್ರೊಸೀಜರ್ ಪಾಲಿಸಿ ಕ್ರಮ. ಮನೆಗೆಲಸದ ಹೆಣ್ಣುಮಕ್ಕಳಿಗೂ ಕನಿಷ್ಠ ವೇತನದ ಬಗ್ಗೆ ಚರ್ಚೆ ಮಾಡ್ತೀವಿ. ಕಡಿಮೆ‌ ಅವಧಿಯಲ್ಲಿ ಹೆಚ್ಚು ಮನೆಗಳಲ್ಲಿ‌ ಮಹಿಳೆಯರು ಕೆಲಸ ಮಾಡ್ತಾರೆ. ಅವರ ಪರವಾಗಿ ಕಾನೂನು ತರುತ್ತೇವೆ. ಆ ರೀತಿಯ ಒಂದು ಬಿಲ್ ಬರುತ್ತೇವೆ ಎಂದಿದ್ದಾರೆ.

ಎಲ್ಲ‌ ಕಂಪನಿಗಳು ಪಾಲನೆ ಮಾಡಬೇಕು. ಅವರು ಪಾಲನೆ ಮಾಡಿಲ್ಲ‌ ಅಂದ್ರೆ ಕ್ರಮ. ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮೊದಲು ರೂಲ್ಸ್ ಅಪ್ಲೈ ಆಗಬೇಕು. ಕಾನೂನು ತಂದಾಗ ಎಲ್ಲರು ಅಳವಡಿಸಿಕೊಳ್ಳಬೇಕು. ನಾವು ಥ್ರೆಟ್ ಮಾಡೋಕೆ ಆಗಲ್ಲ. ಯಾರು ಅಳವಡಿಸಿಕೊಳ್ಳಲ್ಲ ಅಂತವರ ಮೇಲೆ ಕ್ರಮ ತೆಗೆದುಕೊಳ್ತೇವೆ. ನಾವು ಕಾನೂನು ತರ್ತೇವೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಪರ ವಿರೋಧ ಇದೆ. ನಾನು ಎಲ್ಲರಿಗೆ ಯಾಕೆ ಉತ್ತರ ಕೊಡಬೇಕು. ಯಾವ ಮಹಿಳೆ ಅಂತಹ ಸಂದರ್ಭದಲ್ಲಿ ತುಂಬ ನೋವಿರುತ್ತೆ. ಸಾಹುಕಾರರ ಹೆಣ್ಣು ಮಕ್ಕಳಿಗೆ ಸವಲತ್ತು ಇರುತ್ತೆ. ವರ್ಕಿಂಗ್ ಕ್ಲಾಸ್ ಹೆಣ್ಣು ಮಕ್ಕಳ ಕಥೆ ಹೇಗೆ?. ಅವರು ಮಲ್ಟಿಪಲ್ ರೋಲ್ ಮಾಡಬೇಕು ಅಂತವರಿಗೆ ಒಂದು ದಿನ ರಜೆ ಕೊಟ್ಟರೆ ತಪ್ಪೇ?. ಇದರ ಅನುಷ್ಠಾನ ಆಗಲಿ. ಒಂದೆರಡು ಮೂರು ವರ್ಷ ಆಗಲಿ. ನಾವು ಆಮೇಲೆ ಏನು ಒಪಿನಿಯನ್ ಬರುತ್ತೆ ನೊಡೋಣ. ಆಮೇಲೆ ಅದರ ಬಗ್ಗೆ ಯೋಚಿಸೋಣ ಎಂದು ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ಮಾಡಿದ್ದಾರೆ.