ಮನೆ Blog ಗ್ಯಾರಂಟಿಯನ್ನ ಯಾರಿಂದಲೂ ನಿಲ್ಲಿಸಲು ಆಗಲ್ಲ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಗ್ಯಾರಂಟಿಯನ್ನ ಯಾರಿಂದಲೂ ನಿಲ್ಲಿಸಲು ಆಗಲ್ಲ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು:ಗ್ಯಾರಂಟಿಯನ್ನ ಯಾರಿಂದಲೂ ನಿಲ್ಲಿಸಲು ಆಗಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಸಿಎಂ ಸಿಟಿ ರೌಂಡ್ಸ್ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಸಹ ಅದರಲ್ಲಿ ಇರಬೇಕಿತ್ತು. ಆದರೆ ನನಗೆ ಒಂದು ಮೀಟಿಂಗ್ ಇತ್ತು. ಗ್ಯಾರಂಟಿ ಸಮಿತಿ ಅವರಿಗೆ ಟ್ರೈನಿಂಗ್ ಕೊಡಬೇಕಿತ್ತು.ಹೀಗಾಗಿ ಸಿಎಂ ಗೆ ತಡವಾಗುತ್ತೆ ಎಂದು‌ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಮೀಕ್ಷೆ ಮಾಡ್ತಿರೋರು ಗ್ಯಾರಂಟಿ ನಿಲ್ಲಿಸಲು ಎನ್ನುವ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಗ್ಯಾರಂಟಿಯನ್ನ ಯಾರಿಂದಲೂ ನಿಲ್ಲಿಸಲು ಆಗಲ್ಲ. ಹಿಂದೇನೂ ನಿಲ್ಲಿಸೋಕಾಗಲ್ಲ ಮುಂದೆನೂ ನಿಲ್ಲಿಸಲು ಆಗಲ್ಲ. ಯಾವ ಸರ್ಕಾರದಿಂದಲೂ ಗ್ಯಾರಂಟಿ‌ ನಿಲ್ಲಿಸೋಕಾಗಲ್ಲ. ಗ್ಯಾರಂಟಿಯಿಂದಲೇ ಬದುಕು.ಕಾಂಗ್ರೆಸ್ ಗ್ಯಾರಂಟಿ ದೇಶಕ್ಕೆ ಒಂದು ಗ್ಯಾರಂಟಿ ಎಂದಿದ್ದಾರೆ.

ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಿನ್ನೆ ರಾತ್ರಿ ತಮಿಳುನಾಡಿನಲ್ಲಿ ನಡೆದ ದುರಂತ ನಮಗೆಲ್ಲಾ ದುಖಃ ತಂದಿದೆ.ಮಕ್ಕಳು ತಾಯಂದಿರು ಸಾವು ನೋವುಂಟು ಮಾಡಿದೆ.ಎಲ್ಲಾ ರಾಜಕೀಯ ಪಕ್ಷಗಳು ಎಚ್ಚರಿಕೆಯಿಂದಿರಬೇಕು.ಎಚ್ಚರಿಕೆ ಇಟ್ಟು ಕೆಲಸ ಮಾಡಬೇಕು. ದೇಶವೇ ದಿಗ್ಬ್ರಮೆಗೊಂಡಿದೆ.ಸಾವನ್ನಪ್ಪಿದವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ  ಭಾಗದಲ್ಲಿ ಪ್ರವಾಹ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಅವರು ಈಗಾಗಲೇ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ. ಮೊದಲ ಭಾರಿಗೆ ನ್ಯಾಷನಲ್ ಹೈವೇ ಬಂದ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.ಜನರ ರಕ್ಷಣೆ ಮಾಡಲು ಕ್ರಮ ಕೈಗೊಳ್ತೇವೆ .ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಪ್ರಕೃತಿಯನ್ನ ತಡೆಯಲು ಯಾರಿಂದೂ ಸಾಧ್ಯವಿಲ್ಲ . ನಾವು ರಕ್ಷಣೆ ಕಾರ್ಯಾಚರಣೆಯನ್ನ ಮಾಡ್ತಿದ್ದೇವೆ. ನಾವು ಈಗಾಗಲೇ ಜನಸಂದಣಿ ಬಿಲ್ ತಂದಿದ್ದೇವೆ.ನಾನೇ ಇದನ್ನು ಮೊದಲಿಗೆ‌ ಮೂವ್ ಮಾಡಿದ್ದೆ. ಹೆಚ್ ಕೆ ಪಾಟೀಲ್ ಅವರಿಗೆ ಸರ್ಕಾರ ಸೂಚನೆ ನೀಡಿತ್ತು. ಮುಂದೆ ಈ ರೀತಿಯ ತೊಂದರೆ ಆಗಬಾರದು ಅಂತ ಮಾಡಿದ್ದೇವೆ.ನಮ್ಮಲ್ಲಿ ಸ್ಟೇಡಿಯಂ ನಲ್ಲಿ ಘಟನೆ ಆಗಿತ್ತು. ಅದಾದ ಮೇಲೆ ನಾವು ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದ್ದಾರ

ರಸ್ತೆ ಗುಂಡಿ ವಿಚಾರದ ಬಗ್ಗೆ ಮಾತನಾಡಿದ ಅವರು ಎಷ್ಟೇ ಮಾಡಿದ್ರೂ ಗುಂಡಿ ಇದ್ದೇ ಇರುತ್ತೆ. ಗಾಡಿಗಳ ದಟ್ಟಣೆ ಇರುತ್ತೋ ಲಾರಿ ಎಲ್ಲಾ ಹೆಚ್ಚು ಇರೋದ್ರಿಂದ ಇದ್ದೇ ಇರುತ್ತೆ .ಎಷ್ಟೇ ದಪ್ಪ‌ ರಸ್ತೆ ಮಾಡಿದ್ರು ಗುಂಡಿ ಇರುತ್ತೆ . ಬೆಂಗಳೂರನ್ನ ಕಂಪ್ಲೀಟ್ ವೈಟ್ ಟಾಪಿಂಗ್ ಮಾಡೋ ವರೆಗೂ ಗುಂಡಿ ಇರುತ್ತೆ. ಎಲ್ಲಾ ರಾಜ್ಯದ ಸಿಟಿಯ ಡಾಟಾ ನೀವ್ ತರೆಸಿಕೊಳ್ಳಿ,ಹೇಳ್ತಾರೆ .ನಮ್ಮ ಹತ್ರ ಏನಾಗುತ್ತೋ ಅದನ್ನ ಮಾಡ್ತಿದ್ದೇವೆ. ಡೆಡ್ ಲೈನ್ ಪಿಕ್ಸ್ ಮಾಡಿದ್ದೇವೆ. ಗುತ್ತಿಗೆದಾರರಿಗೆ ಶಿಕ್ಷೆಗೆ ಒಳಪಡಿಸೋದಾಗಿ ಹೇಳಿದ್ದೇವೆ. ನಾನು ನಿರಂತರವಾಗಿ ಐದು ಕಾರ್ಪೋರೇಷನ್ ಬಗ್ಗೆ ನಿಗಾ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.