ಬೆಂಗಳೂರು; ಜಾತಿ ಜನಗಣತಿ ಸಮೀಕ್ಷೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದ ಎಲ್ಲಾ ಡಿಸಿಗಳು, ಸಿಇಒ ಗಳ ಜೊತೆಗೆ ವೀಡಿಯೋ ಸಂವಾದದಲಮೂಲಕ ಭಾಗಿಯಾದ್ರೆ ಉಳಿದಂತೆ
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್, ಭೈರತಿ ಸುರೇಶ್, ಮಧು ಬಂಗಾರಪ್ಪ, ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್, ಸಿಎಸ್ ಶಾಲಿನಿ ರಜನೀಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಸಿಎಂ ಇವತ್ತು ಡಿಸಿಗಳು, ಸಿಇಒ ಗಳ ಜೊತೆ ವಿಡಿಯೋ ಸಂವಾದ ಮಾಡಿದ್ದೇವೆ.ನಾನು , ಡಿಸಿಎಂ, ಹೆಚ್ ಕೆ ಪಾಟೀಲ್, ಹಿಂದುಳಿದ ವರ್ಗಗಳ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು, ತಂಗಡಗಿ , ಬೋಸರಾಜ್ ಅವರು ಸಭೆ ಮಾಡಿದ್ವಿ. ಸರ್ವೇ ಕೆಲಸ ನಡೀತಿದೆ, ನಾಲ್ಕು ದಿನ ಸ್ವಲ್ಪ ತಾಂತ್ರಿಕ ಸಮಸ್ಯೆ ಯಿಂದ ನಡೀತು. ಸರ್ವೇ ಕಾರ್ಯ ಕುಂಠಿತ ಆಗಿತ್ತು. ತಾಂತ್ರಿಕ ಸಮಸ್ಯೆ ಗಳು ಎಲ್ಲಾ ಡಿಸಿಹೇಳೋ ಪ್ರಕಾರ ೯೦% ರಷ್ಟು ಪರಿಹಾರ ಆಗಿದ್ದಾವೆ. ಉಳಿದಿರೋ ಸಮಸ್ಯೆ ಪರಿಹಾರ ಆಗುತ್ತದೆ, ಇಂದೇ ಆಗುತ್ತದೆ. ನಾನು ಕಮಿಷನರ್ ಅವರಿಗೂ ಹೇಳಿದ್ದೇನೆ, ಕಾರ್ಯದರ್ಶಿ ಗೂ ಹೇಳಿದ್ದೇನೆ. ಏನೇನು ತೊಡಕು ಇದ್ದಾವೆ, ಅದನ್ನ ನಿವಾರಣೆ ಮಾಡಬೇಕು. ನಿವಾರಣೆ ಆಗುತ್ತದೆ ಎಂದ ಹೇಳಿದ್ದಾರೆ. ಸಮಸ್ಯೆ ಬಗೆ ಹರಿಯುತ್ತದೆ. ಇಂದಿನಿಂದ ಸರ್ವೇ ಕೆಲಸ ಚುರುಕಾಗಿ ಆಗುತ್ತದೆ.ನಿರೀಕ್ಷೆ ತಕ್ಕಂತೆ ಸರ್ವೇ ಕೆಲಸ ಆಗುತ್ತದೆ ಎಂದರು.
ಸೆ ೨೨ ರಿಂದ ಅ ೭ ರ ವರೆಗೆ ಸರ್ವೇ ಕೆಲಸ ಮುಗೀಬೇಕು ಅಂತ ತೀರ್ಮಾನ ಮಾಡಿದ್ವಿ. ಆಯೋಗ ಕೂಡ ತೀರ್ಮಾನ ಆಗಿತ್ತು. ಆದ್ರೆ ನಾಲ್ಕು ದಿನ ಸರ್ವೇ ಸರಿಯಾಗಿ ನಡೆದಿಲ್ಲ. ಉಳಿದಿರೋ ದಿನಗಳಲ್ಲಿ ಅದನ್ನ ಕವರ್ ಮಾಡಬೇಕು. ಪ್ರತೀ ದಿನ ೧೦% ಹೌಸ್ ಹೋಲ್ಡ್ ಸರ್ವೇ ಅಗ್ಬೇಕು. ನಾವು ಮಾಡುತ್ತೇವೆ ಎಂದು ಎಲ್ಲಾ ಡಿಸಿ ಒಪ್ಪಿಕೊಂಡಿದ್ದಾರೆ. ಶಿಕ್ಷಕರು ಕೆಲ ತಪ್ಪು ಕಲ್ಪನೆಗಳಿಂದ ಸಮಸ್ಯೆ ಆಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಇದ್ದಾರೆ. ಎಲ್ಲರೂ ಕೂಡ ಒಪ್ಪಿಕೊಂಡು ಸರ್ವೇ ಕೆಲಸ ಶುರು ಮಾಡಿದ್ದಾರೆ ಎಂದು ತಿಳಿಸಿದರು.
ಡಿಸಿ, ಸಿಇಒ ಗಳಿಗೆ ಸೂಚನೆ ಕೊಟ್ಟಿದ್ದೇನೆ.ಇದು ಸರ್ಕಾರದ ಕೆಲಸ, ಸರ್ಕಾರ ಸರ್ವೇ ಮಾಡಿಸ್ತಿರೋದು. ಈ ವಿಚಾರವನ್ನ ಗಂಭೀರ ವಾಗಿ ಪರಿಗಣಿಸಲು ಸೂಚನೆ ನೀಡಿದ್ದೇನೆ.ಪ್ರತೀ ದಿನ ಡಿಸಿಗಳು, ಸಿಇಒ ಗಳು ರಿವ್ಯೂ ಮೀಟಿಂಗ್ ಮಾಡಬೇಕು.ಏನಾದರೂ ಸಮಸ್ಯೆ ಇದ್ದರೆ ಅದನ್ನ ಬಗೆಹರಿಸಬೇಕು.ನಿಗದಿತ ಸಮಯದಲ್ಲಿ ಸರ್ವೇ ಕೆಲಸ ಮಾಡಿದ್ದಾರೋ ಇಲ್ವೋ ಅಂತ ನೋಡಬೇಕು ಎಂದರು.
ಎಲ್ಲರೂ ಕೂಡ ಸಮೀಕ್ಷೆ ಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ಕೊಟ್ಟಿದ್ದೇನೆ.ಇಲ್ಲಿಯವರೆಗೆ ೪% ಸರ್ವೇ ಆಗಿದೆ.ಪ್ರತೀ ದಿನ ಕನಿಷ್ಠ ೧೦ % ಸರ್ವೇ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ.ಹಿಂದಿನ ಸರ್ವೇ ಗೌರವ ಧನ ಬಿಡುಗಡೆ ಮಾಡಿದ್ದೇವೆ.ಯಾರಿಗೂ ಅನುಮಾನ ಆಗದಂತೆ ಸರ್ವೇ ಆಗೋ ಗೌರವ ಧನ ಕೊಡುತ್ತೇವೆ, ರಿಲೀಸ್ ಮಾಡಿದ್ದೇವೆ. ಯಾರಿಗೂ ಸಂಶಯ ಪಡೋ ಅಗತ್ಯ ಇಲ್ಲ. ಒಟ್ಟಾರೆಯಾಗಿ ಸುಮಾರು ೨ ಕೋಟಿ ಹೌಸ್ ಹೋಲ್ಡ್ ಇದ್ದಾವೆ, ಬೆಂಗಳೂರು ಸೇರಿ ಎಲ್ಲಾ ಮನೆ ಗಳಲ್ಲೂ ಸರ್ವೇ ಮಾಡಬೇಕು. ಎಲ್ಲಾ ಮಾಹಿತಿ ಗಳನ್ನ ತಿಳಿದುಕೊಳ್ಳಬೇಕು.ನಿಗದಿತ ಅವಧಿ ಒಳಗೆ ಸರ್ವೇ ಕೆಲಸ ಮುಗೀಬೇಕು..ಆನ್ ಲೈನ್ ನಲ್ಲೂ ಮಾಹಿತಿ ಕೊಡಬೇಕು. ಯಾರಾದರೂ ಮನೇಯಲ್ಲಿ ಇಲ್ಲದಿದ್ರೂ ನಾವು ಸ್ಟಿಕ್ಕರ್ ಅಂಟಿಸುತ್ತೇವೆ ಎಂದು ತಿಳಿಸಿದರು.
ದೂರದ ಗುಡ್ಡದಲ್ಲಿ ವಾಸಿಸುವವರು ಸಮೀಪದ ಶಾಲೆಯಲ್ಲಿ ಸರ್ವೇ ಮಾಹಿತಿ ನೀಡಬೇಕು. ಎಲ್ಲಾ ಸೌಕರ್ಯ ಒದಗಿಸೋ ಕೆಲಸ ಮಾಡುತ್ತೇವೆ. ಶಿಕ್ಷಕರ ಸಮಸ್ಯೆ ಇದೆ ಅಂತ ಕೇಳಿ ಬರ್ತಿದೆ, ಆದ್ರೆ ಅದು ತಪ್ಪು ಕಲ್ಫನೆ ಇತ್ತು. ಯಾರಾದರೂ ಶಿಕ್ಷಕರು ಸಹಕರಿಸದಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಜಿಲ್ಲಾ ಮಂತ್ರಿ ಗಳಿಗೂ ನಿನ್ನೆ ಕ್ಯಾಬಿನೆಟ್ ನಲ್ಲಿ ಹೇಳಿದ್ದೇನೆ. ಎಲ್ಲರೂ ಸಹಕರಿಸಿಕೊಂಡು ಸರ್ವೇ ಮಾಡಬೇಕು. ಸಾಮಾಜಿಕ, ಶೈಕ್ಷಣಿಕ ಸರ್ವೇ ೭ ಕೋಟಿ ಜನ ಸರ್ವೇ ಮಾಡುತ್ತಿದ್ದೇವೆ.ಬೆಂಗಳೂರಲ್ಲಿ ಸೀರಿಯಸ್ ಆಗಿ ಸರ್ವೇ ನಡೆಯುತ್ತದೆ. ಕೋರ್ಟ್ ಹೇಳಿದಂತೆ ಸರ್ವೇ ಮಾಡುತ್ತೇವೆ. ಹೆಚ್ಚು ದಿನ ಕೊಡೋ ಅವಶ್ಯಕತೆ ಇಲ್ಲ. ಇಂದಿನಿಂದ ಎಲ್ಲಾ ಕಡೆ ಗಳಲ್ಲೂ ಸರ್ವೇ ಶುರು ವಾಗುತ್ತದೆ ಎಂದು ಹೇಳಿದರು.











