ಮನೆ Blog ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೆ ಗುಂಡಿಗಳು ಬಿದ್ದಿದ್ವು; ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೆ ಗುಂಡಿಗಳು ಬಿದ್ದಿದ್ವು; ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

0

ಬೆಂಗಳೂರು: ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೆ ಗುಂಡಿಗಳು ಬಿದ್ದಿದ್ವು ಎಂದಿದ್ದಾರೆ.

 

ಸೆ.20ರಿಂದ ಪತ್ರಿಕೆಗಳಲ್ಲಿ ನಾನು ಗಮನಿಸುತ್ತಿದ್ದೇನೆ. ವಿಜಯೇಂದ್ರ ನಗರದಲ್ಲಿ ರಸ್ತೆ ಗುಂಡಿಗಳು ಜಾಸ್ತಿ ಆಗಿದೆ. ಪ್ರತಿಭಟನೆ ಮಾಡಬೇಕು ಅಂತ ಕರೆ ಕೊಟ್ಟರು. ಡಿಕೆ‌ಶಿ ಮನೆ ಬಳಿ ಗುಂಡಿ ಮುಚ್ಚಿ ಹೋರಾಟ ಮಾಡಿದ್ರು. ಕಾಮಗಾರಿ ಪರಿಶೀಲನೆ ಮಾಡಿದ್ರು. ಆರ್.ಅಶೋಕ್ ಗುಂಡಿಗಳಿಗೆ ಮಣ್ಣು ಹಾಕಿದ್ದಾರೆ. ಕನಿಷ್ಠ ಪಕ್ಷ ಗುಂಡಿಗೆ ಚಲ್ಲಿಕಲ್ಲು ಆದ್ರೂ ಹಾಕಬೇಕಿತ್ತು. ಗುಂಡಿಗಳಿವೆ ಇಲ್ಲ ಅಂತ ಹೇಳಿಲ್ಲ. ಮಳೆಗಾಲದಲ್ಲಿ ಸಹಜವಾಗಿ ಗುಂಡಿ ಬೀಳುತ್ತೆ.ಮಹಾನಗರ,‌ಸರ್ಕಾರದ ಜವಾಬ್ದಾರಿ ಗುಂಡಿ ಬೀಳದಂತೆ ನೋಡಿಕೊಳ್ಳಬೇಕು. 17 ಜನ ದ್ವಿಚಕ್ರ ವಾಹನ ಸವಾರರು ಬಿಜೆಪಿ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೆ ಗುಂಡಿಗಳು ಬಿದ್ದಿದ್ವು. ಆಗ ತುಷಾರ್ ಗಿರಿನಾಥ್ ನ‌ ಕರೆದು ನ್ಯಾಯಾಧೀಶರು ಪ್ರಶ್ನೆ ಮಾಡ್ತಿದ್ದರು. ನಮ್ಮನ್ನ ನ್ಯಾಯಾಧೀಶರು ಕೇಳಿಲ್ಲ, ಆದ್ರೂ ನಾವು ಗುಂಡಿ ಮುಚ್ಚುತ್ತೇವೆ.

ಸಿಎಂ ಸಹ ಪ್ರತ್ಯೇಕ ಸಭೆ ಕರೆದು ಗುಂಡಿ ಮುಚ್ಚಲು ಗಡುವು ಕೊಟ್ಟಿದ್ದಾರೆ ಎಂದರು.

 

2019ರಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟಿತ್ತು. 6116 ಕೋಟಿ ರೂ. ಅನುದಾನ ಕೊಟ್ಟಿದ್ರು. ನಮ್ಮ ಪಕ್ಷದವರಿಗೆ 1105 ಕೋಟಿ ರೂ. ಆಗ ಕೊಟ್ಟಿದ್ರು . ಎರಡು ವರ್ಷಕ್ಕೆ ರಸ್ತೆಗಳು ಹಾಳಾಗುವುದಿಲ್ಲ. ನಾವು ಅಧಿಕಾರಕ್ಕೆ ಬಂದು‌ ಎರಡು ಕಾಲು ವರ್ಷ ಆಗಿದ್ಯಷ್ಟೆ. ನನ್ನ ಕ್ಷೇತ್ರದ BTM ರಸ್ತೆಗಳು 10 ವರ್ಷ ಇರುತ್ತೆ. ಇಷ್ಟು ಅನುದಾನ ತೆಗೆದುಕೊಂಡು ಯಾಕೆ ರಸ್ತೆ ಹಾಳಾಯ್ತು. ವಿಜಯೇಂದ್ರ ಇದಕ್ಕೆಲ್ಲ ಉತ್ತರ ಕೊಡಬೇಕು. ಬೆಂಗಳೂರಿನ ಬಿಜೆಪಿ ಶಾಸಕರು ಉತ್ತರ ಕೊಡಬೇಕು. ಯಾಕೆ ಇಷ್ಟು ಬೇಗ ರಸ್ತೆ ಹಾಳಾಯಿತು . ಬಿಜೆಪಿ ಅವಧಿಯಲ್ಲಿ ಸಮರ್ಪಕವಾಗಿ ರಸ್ತೆಗುಂಡಿಗಳು ಮುಚ್ಚದೇ ಇದ್ದಿದ್ದೇ ಕಾರಣ. ಒಂದು ತಿಂಗಳೊಳಗೆ ಗುಂಡಿ ಮುಚ್ಚುವುದಾಗಿ ಸಿಎಂ ಹೇಳಿದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡಿದಿದ್ರೆ ಗುಂಡಿ ಆಗ್ತಾ ಇರಲಿಲ್ಲ ಎಂದು ಆರೋಪಿಸಿದರು.

 

ನಗರೋತ್ಥಾನ ಯೋಜನೆಯಡಿ ಸಾವಿರಾರು ಕೋಟಿ ರೂ. ಬಿಡುಗಡೆ ಆಗಿದೆ. ಬಿಬಿಎಂಪಿ ಅನುದಾನದ ಬಗ್ಗೆ ನಾನು ಮಾಹಿತಿ ಕೊಟ್ಟಿಲ್ಲ. ಅದು ಸೇರಿದ್ರೆ ಇನ್ನೂ ಎರಡು ಸಾವಿರ ಕೋಟಿ ರೂ. ಜಾಸ್ತಿ ಆಗುತ್ತೆ. ಇದರ ಬಗ್ಗೆ ತನಿಖೆ ಆಗಿದೆ, ಸಿಎಂ-ಡಿಸಿಎಂ ಕ್ರಮ ತೆಗೆದುಕೊಳ್ತಾರೆ ಎಂದ ಅವರು, ರಸ್ತೆ ಗುಂಡಿಗಳಿಂದ ಬಿಎಂಟಿಸಿ ಬಸ್ ಅಪಘಾತದ ಬಗ್ಗೆ ಅನಂತ್ ಸುಬ್ಬುರಾವ್ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ ಅಪಘಾತದ ಆಗೋಕೆ ಮೂರು ಕಾರಣಗಳಿವೆ.

ಒಂದು ನಮ್ಮ ಚಾಲಕರ ತಪ್ಪು, ಮತ್ತೊಂದು ಎದುಗಡೆಯ ವಾಹದ ತಪ್ಪು, ಇನ್ನೊಂದು ಎದುರಾಳಿ ವಾಹನದ ತಪ್ಪು. ರಸ್ತೆ ಗುಂಡಿಯಿಂದಲೂ ಅಪಘಾತ ಆಗುತ್ತೆ. ಆಗಲ್ಲ ಅಂತ ನಾನು ಹೇಳ್ತಿಲ್ಲ. ನಗರದಲ್ಲಿ ಒಂದು‌ ಕೋಟಿ ಲಕ್ಷ ವಾಹನಗಳಿವೆ . ನಮ್ಮ ಕ್ಷೇತ್ರಗಳಲ್ಲಿ ಗುಂಡಿಗಳ ಸಂಖ್ಯೆ ಕಡಿಮೆ ಇದೆ. ಪೊಲೀಸರು ಸರಿಯಾಗಿದ್ರೆ ಕಳ್ಳರು ಓಡಿ ಹೋಗ್ತಾರೆ. ಗುತ್ತಿಗೆದಾರರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು.

 

ಸಿಎಂ, ಡಿಸಿಎಂ ಗುಂಡಿ ಮುಚ್ಚಲು ಹೇಳಿದ್ದಾರೆ. ವಾರ್ಡ್ ನ ಹಿರಿಯರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಗುಂಡಿ ಮುಚ್ಚದಿದ್ರೆ ಕ್ರಮ ಆಗಲಿದೆ. ಇಲಾಖೆಗಳ ಸಮನ್ವಯತೆ ಕೊರತೆ ಇದೆ. ಖಾಸಗಿ ಕೇಬಲ್ ಸಂಸ್ಥೆಗಳು ಅಗೆಯುತ್ತಿದ್ದಾರೆ. ಬಿಜೆಪಿಗೆ ನಾವು ಕೌಂಟರ್ ಕೊಡಬೇಕು. ಕೊಡದಿದ್ದರೆ ಅವರ ಆರೋಪ ನಿಜ ಆಗಿಬಿಡುತ್ತೆ ಎಂದರು. ಶಾಸಕರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿ ರಸ್ತೆ ಗುಂಡಿಗಳಿಗೆ ಪ್ರತ್ಯೇಕ ಅನುದಾನ ಬೇಕಾಗುತ್ತೆ.

ಇತರೆ ಕಾಮಗಾರಿಗೆ ಬೇರೆ ಹಣ ಬೇಕಾಗುತ್ತದೆ. ನಾವು ಐದು ವರ್ಷಕೊಮ್ಮೆ ಚುನಾವಣೆಯಲ್ಲಿ‌ ಸ್ಪರ್ಧಿಸಿ ಗೆಲ್ಲಬೇಕು. ಅಧಿಕಾರಿಗಳು ಹಾಗಲ್ಲ, ಅವರ ಅವಧಿ ದೀರ್ಘಕಾಲ ಇರುತ್ತೆ ಎಂದು ಹೇಳಿದರು.

ಸ್ವತಂತ್ರ ಪೂರ್ವದಲ್ಲಿ ಅನುವಂಶಿಕ ಇತ್ತು. ಬ್ರಿಟೀಷರ ಕಾಲದಲ್ಲಿ ಮುಜರಾಯಿ ಇಲಾಖೆ ಇರಲಿಲ್ಲ. ಅವರ ನಂತರ ಮುಜರಾಯಿ ಇಲಾಖೆ ಬಂತು . ಮೋದಿಯವರೇ ಕಾನೂನು ತರಲಿ. ಯಾವ ದೇವಸ್ಥಾನವನ್ನೂ ಮುಜರಾಯಿಗೆ ತೆಗೆದುಕೊಳ್ಳಬಾರದು ಅಂತ. ಪಾರ್ಲಿಮೆಂಟ್ ನಲ್ಲಿ ಆದೇಶ ಆಗಲಿ ಎಂದರು.

ಧರ್ಮಸ್ಥಳ ದೇವಸ್ಥಾನವನ್ನ ಮುಜರಾಯಿಗೆ ಒಳಪಡಿಸುವ ವಿಚಾರದ ಬಗ್ಗೆ ಮಾತನಾಡಿ ಯಾವುದೇ ಕಾರಣಕ್ಕೂ ಇಲ್ಲ. 35,500 ದೇವಾಲಯಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕು. C ಗ್ರೇಡ್ ದೇವಸ್ಥಾನದ ಬಗ್ಗೆ ಯಾರೂ ಪ್ರಾಧಾನ್ಯತೆ ಕೊಟ್ಟಿಲ್ಲ. ಬಜೆಪಿಯವರಿಗೆ ಇದೆಲ್ಲ ಕಾಣುವುದಿಲ್ಲ ಎಂದ ಅವರು ಶಕ್ತಿ ಯೋಜನೆಯಿಂದ ಸಾಲ ಆಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ ಸ್ವಲ್ಪ ಬಾಕಿ ಇದೆ. 2 ಸಾವಿರ ಕೋಟಿ ಸಿಎಂ ಕೊಟ್ಟಿದ್ದಾರೆ. ಹೊರೆ ಅಂತ ಹೇಳೋಕೆ ಆಗಲ್ಲ. ನಿಗಮಗಳಿಗೆ ಸರ್ಕಾರದಿಂದ ಬರುವುದು ಕೊಟ್ಟರೆ ಲಾಭ ಇರುತ್ತೆ. ಕೊಟ್ಟರೆ 3 ಸಾವಿರ ಕೋಟಿ ರೂ. ಕೊಡಬೇಕು ಎಂದು ಹೇಳಿದರು.