ಮನೆ Blog ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌...

ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

0

ಬೆಂಗಳೂರು; ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿದ್ದಾರೆ. ಬೆಂಗಳೂರು ಸೇರಿ ಬಹುತೇಕ ಪ್ರದೇಶದಲ್ಲಿ ಗುಂಡಿಗಳೇ ಕಾಣುತ್ತಿವೆ. ಎಷ್ಟು ಗುಂಡಿಗಳು ಇವೆ ಅಂತಾ ಅಧಿಕಾರಿಗಳು ಲೆಕ್ಕ ಹಾಕಿಕೊಂಡು ಬಂದಿದ್ದಾರೋ ಗೊತ್ತಿಲ್ಲ. ನಿನ್ನೆ ಗುಂಡಿ ಮುಚ್ಚುವ ಮೂಲಕ ಸರ್ಕಾರಕ್ಕೆ ಪರಿಸ್ಥಿತಿ ತಿಳಿಸುವ ಕೆಲಸ ಮಾಡಿದ್ದೇವೆ. ಇನ್ನಾದರೂ ಸರ್ಕಾರ ಪುಕ್ಸಟ್ಟೆ ಭಾಷಣ ಬಿಟ್ಟು ಬೆಂಗಳೂರಿನ ಮಾನ ಉಳಿಸಬೇಕು ಎಂದಿದ್ದಾರೆ.

ಸರ್ಕಾರದಿಂದ ನಾಗಮೋಹನ್ ದಾಸ್ ಅಯೋಗದ ಅವಧಿ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಯಾವುದೇ ಆಯೋಗಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ನಾಗಮೋಹನ್ ದಾಸ್ ಆಯೋಗ, ಕಾಂತರಾಜ್  ಆಯೋಗ ಎಲ್ಲಾ ಇದೇ ರೀತಿ ಆಗಿದೆ. ಕಾಂತರಾಜ್ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಹಾಕಿದರು. ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಅಪ್ರಚಾರ ಮಾಡಿ ಅಧಿಕಾರಕ್ಕೆ  ಬಂದಾಗಿದೆ. ಇನ್ನಾದರೂ ಅಪಪ್ರಚಾರ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಜಾತಿ ಜನಗಣತಿ ಗೊಂದಲ ಸೃಷ್ಟಿ, ಸಮಸ್ಯೆಗಳ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವಾಗ ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾದಾಗ, ಜನ ಉಗಿಯುವಾಗ ಈ ರೀತಿ ಜಾತಿ ಗಣತಿ ಅಂತಾ ಗೊಂದಲ ಸೃಷ್ಟಿ ಮಾಡುತ್ತಾರೆ. ಸರ್ಕಾರಕ್ಕೆ ಜಾತಿಗಳ ಮಧ್ಯೆ ಗೊಂದಲ ಸೃಷ್ಟಿ ಮಾಡಿ ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.