ಮನೆ Latest News ಯಾವ ಆಯೋಗದಲ್ಲೂ ಇಲ್ಲದ ಕ್ರಿಶ್ಚಿಯನ್ ಈಗ ಯಾಕೆ ಹುಟ್ಟಿತು?: ವಿಧಾನ ಪರಿಷತ್ ವಿಪಕ್ಷ ನಾಯಕ...

ಯಾವ ಆಯೋಗದಲ್ಲೂ ಇಲ್ಲದ ಕ್ರಿಶ್ಚಿಯನ್ ಈಗ ಯಾಕೆ ಹುಟ್ಟಿತು?: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

0

ಬೆಂಗಳೂರು: ಯಾವ ಆಯೋಗದಲ್ಲೂ ಇಲ್ಲದ ಕ್ರಿಶ್ಚಿಯನ್ ಈಗ ಯಾಕೆ ಹುಟ್ಟಿತು? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಜಾತಿ ಜನಗಣತಿಯಲ್ಲಿ ಕ್ರಿಶ್ಚಿಯನ್ ಧರ್ಮ ಸೇರ್ಪಡೆ ವಿಚಾರದ ಬಗ್ಗೆ ಮಾತಾಡಿದ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ. ಹೆಚ್ಚುವರಿ ಜಾತಿ ಪಟ್ಟಿಯನ್ನು
ಪ್ರಬಲ ಸಮುದಾಯಗಳು ವಿರೋಧಿಸಿದಾಗ ಅದನ್ನು ಹೈಡ್ ಮಾಡಿದ್ದೇವೆ ಎಂದರು. ದಲಿತ ಸಮುದಾಯಕ್ಕೆ ಟ್ಯಾಗ್ ಮಾಡಿರುವ ಧರ್ಮವನ್ನು ಹೈಡ್ ಮಾಡಿಲ್ಲ.ಆಯೋಗದವನ್ನು ನಿಯಂತ್ರಣ ಮಾಡುವ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವೇ? ಎಂದಿದ್ದಾರೆ.

ಇಂದು ಹಿಂದುತ್ವ ವಿರೋಧಿ ನೀತಿ ಎಂಬುದು ಸ್ಪಷ್ಟ.
ಇದೇ ರೀತಿ ಮುಂದುವರಿಸಿ ಕೇರಿಗಳಲ್ಲಿ ಬಂದರೆ ಅಲ್ಲಿ ನಮ್ಮ ಜನ ಬಿಡುವುದಿಲ್ಲ. ನೀವು ಆಗ ಏನೂ ಬರೆದುಕೊಳ್ಳಲು ಆಗುವುದಿಲ್ಲ. ಯಾವ ಆಯೋಗದಲ್ಲೂ ಇಲ್ಲದ ಕ್ರಿಶ್ಚಿಯನ್ ಈಗ ಯಾಕೆ ಹುಟ್ಟಿತು?. ಇದು ಷಡ್ಯಂತ್ರದ ಭಾಗ. ಇಂದು‌ ಸಂಜೆಯೇ ತೀರ್ಮಾನ ತೆಗೆದುಕೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ತೀರ್ಮಾನ ಮಾಡದಿದ್ದರೆ ಮುಂದಾಗುವ ಅನಾಹುತಕ್ಕೆ ಆಯೋಗವೇ ಹೊಣೆಯಾಗುತ್ತದೆ. ನಮ್ಮ ಜನರ ನೋವಿನ ಕಾರಣಕ್ಕೆ ನಾವು ಏರಿದ ಧ್ವನಿಯಲ್ಲಿ ಮಾತಾಡಿದ್ದೇವೆ.ಷಡ್ಯಂತ್ರವನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.

ಯಾವ ದಾಖಲೆಗಳ ಆಧಾರದಲ್ಲಿ ಸರ್ಕಾರ 1400 ಜಾತಿಗಳ ಪಟ್ಟಿ ಮಾಡಿ ಸಮೀಕ್ಷೆಗೆ ಹೋಗಿದೆ?. ಆಡು ಭಾಷೆಯಲ್ಲಿರುವ ಜಾತಿಗಳನ್ನು ಪಟ್ಟಿಯಲ್ಲಿ ಮಾಡಿದ್ದೇವೆ ಎಂದು ಆಯೋಗದ ಅಧ್ಯಕ್ಷ ಹೇಳುತ್ತಾನೆ ಅಂದರೆ?. ಹಿಂದುಗಳ ಜನಸಂಖ್ಯೆ ಕಡಿಮೆ ಮಾಡಲು ಇಂದು‌ ಜಾತಿ ಗಣತಿ ಆಗುತ್ತಿದೆ. ಆಡುಭಾಷೆಯಲ್ಲಿ ಇರುವ ಜಾತಿಗಳನ್ನೆಲ್ಲಾ ಜಾತಿ ಪಟ್ಟಿಗೆ ಸೇರಿಸಿದ್ದಾರೆ.ಕ್ರಿಶ್ಚಿಯನ್ ಎಂದು ಹಿಂದೂ ಯಾವುದೇ ಜಾತಿ ಬರೆದರೂ, ಹಿಂದೂ ಧರ್ಮದಿಂದ ಅವರ ಹೆಸರನ್ನು ತೆಗೆಯಲಾಗುತ್ತದೆ. ಈ ಮಾತನ್ನು ಆಯೋಗದ ಅಧ್ಯಕ್ಷ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಹೆಸರು ಬರೆದರೆ ಅದಕ್ಕೆ ಸೇರಿಸಲಾಗುತ್ತದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡುವ ಉದ್ದೇಶ ಇದು. ದಲಿತರು ಜಾಗೃತರಾಗಬೇಕು. ಇಲ್ಲದಿದ್ದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸುತ್ತಾರೆ. ಮೀಸಲಾತಿಯಿಂದ ನಿಮ್ಮನ್ನು ತೆಗೆಯುತ್ತಾರೆ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಈ ಕೆಲಸ ಎಂದಿದ್ದಾರೆ.