ಮನೆ Latest News ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆಎಂ ರಾಮಚಂದ್ರಪ್ಪ ಹೇಳಿಕೆ

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆಎಂ ರಾಮಚಂದ್ರಪ್ಪ ಹೇಳಿಕೆ

0

ಬೆಂಗಳೂರು; ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ಎಂ ರಾಮಚಂದ್ರಪ್ಪ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಈ ಸಮೀಕ್ಷೆ ೧೦ ವರ್ಷಗಳ ಹಿಂದೆ ಕೂಡ ನಡೆದಿತ್ತು. ೨೦೧೫ ರಲ್ಲಿ ನಡೆದ ವರದಿಯನ್ನು ಸರ್ಕಾರ ಹೋದ ನಂತರ ಯಾವುದೇ ಸರ್ಕಾರವೂ ಸ್ವೀಕಾರ ಮಾಡಲಿಲ್ಲ. ಈಗ ೧೦ ವರ್ಷದ ನಂತರ ವರದಿ ಸ್ವೀಕಾರ ಮಾಡುವುದಕ್ಕೆ ಬರಲ್ಲ ಎಂದಿದ್ದಾರೆ. ಹಿಂದಿನ ವರದಿಯನ್ನು ಸ್ವೀಕಾರವೂ ಮಾಡಲ್ಲ ತಿರಸ್ಕಾರವೂ ಮಾಡಲ್ಲ ಎಂದಿದ್ದಾರೆ. ಇದೆಲ್ಲ ಆಗಿದ್ದು ಪ್ರಬಲ ವರ್ಗದ ಮೇಲ್ವರ್ಗದ ಜನರ ಷಡ್ಯಂತ್ರ ದಿಂದ  ಅದೇ ಜನ ಪ್ರಬಲ ವರ್ಗದ ಜನ ಈಗಲೂ ಸಮೀಕ್ಷೆಗೆ ಷಡ್ಯಂತ್ರ ಮಾಡ್ತಿದ್ದಾರೆ. ಸರ್ಕಾರಕ್ಕೆ ನಾವು ಒತ್ತಾಯ ಮಾಡಿದ್ದೆವು. ಕಾಂತರಾಜು ವರದಿಯ ದತ್ತಾಂಶವನ್ನು ಬಿಡುಗಡೆ ಮಾಡಿ ಅಂತ ನಾವು ಬಹಳ ಒತ್ತಾಯ ಮಾಡಿದೆವು. ಆದರೆ ಷಡ್ಯಂತ್ರ ಗಳಿಗೆ ಸರ್ಕಾರ ಮಣಿದಂತೆ ಕಾಣುತ್ತಿದೆ. ಈಗಲೂ ಸಮೀಕ್ಷೆಗೆ ಅದೇ ಜನ ಸಮೀಕ್ಷೆ ಮಾಡಬಾರದು ಅಂತ ಕೂಗು ಹಾಕ್ತಿದ್ದಾರೆ. ಯಾರು ಕಾಂತರಾಜು ವರದಿ ವಿರೋಧಿಸಿ ಷಡ್ಯಂತ್ರ ಮಾಡಿದರೋ ಅವರೇ ಈಗಲೂ ಸಮೀಕ್ಷೆ ತಡೆಯುತ್ತಿದ್ದಾರೆ. ಸರ್ಕಾರಕ್ಕೂ ಸಮೀಕ್ಷೆಗೂ ಸಂಬಂಧವೇ ಇಲ್ಲ ಎಂದರು.

ಪ್ರಬಲ ಜಾತಿಗಳಾದ ಬ್ರಾಹ್ಮಣ ಲಿಂಗಾಯತ ಒಕ್ಕಲಿಗರು ವಿರೋಧಿಸುತ್ತಲೇ ಬಂದಿದ್ದಾರೆ. ಮೊದಲಿನಿಂದಲೂ ಸಮೀಕ್ಷೆ ಗೆ ಇವರ ವಿರೋಧವಿದೆ. ನಾಗನಗೌಡ ವರದಿ, ಹಾವನೂರ್ ವರದಿಗೂ ಈ ಪ್ರಬಲ ಜಾತಿಗಳು ವಿರೋಧ ಮಾಡಿಕೊಂಡೇ ಬಂದರು. ಆದರೆ ದೇವರಾಜ ಅರಸು ಧೈರ್ಯ ದಿಂದ ಈ ವರದಿ ಜಾರಿಗೆ ಬಂತು. ಪ್ರಬಲ ಜಾತಿಗಳ ವಿರೋಧಕ್ಕೆ ನಾವು ಸುಮ್ಮನೆ ಕೂರಲ್ಲ. ನಾವೂ ಕೂಡ ನ್ಯಾಯಾಲಯಕ್ಕೆ ಹೋಗಿದ್ದೇವೆ. ಯಾವುದೇ ಕಾರಣಕ್ಕೂ ಹಿಂದುಳಿದ ಆಯೋಗ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿಯಬಾರದು ಸಮೀಕ್ಷೆಯನ್ನು ಮುಂದೂಡದೇ ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.

ಕಾಂತರಾಜು ವರದಿ ವಿರೋಧಿಸುವುದಕ್ಕೆ ಕಾರಣ ಅವರ ಸಂಖ್ಯೆ ಕಡಿಮೆ ಇದೆ. ಅವರೀಗ ಕುತಂತ್ರದಿಂದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹುನ್ನಾರ ನಡೆಯುತ್ತಿದೆ. ಶಿಕ್ಷಣದಲ್ಲಿ ಮುಂದುವರಿದಿಲ್ಲ ಅಂತ ತೋರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಮೀಕ್ಷೆ ಮುಗಿದ ಬಳಿಕ ರ್ಯಾಂಡಮ್ ಪರೀಶೀಲನೆ ನಡೆಯಬೇಕು. ತಪ್ಪು ಮಾಹಿತಿ ಕೊಟ್ಟವರಿಗೆ ಶಿಕ್ಷೆ ನೀಡುವ ಕಾನೂನು ತರಬೇಕು. ಇದನ್ನು ನಾವು ಸರ್ಕಾರಕ್ಕೆ ಹೇಳಿದ್ದೇವೆ ಎಂದು ಹೇಳಿದರು.

ಕಾಂತರಾಜ ಹಾಗೂ ಜಯಪ್ರಕಾಶ್ ವರದಿ ವಿರೋಧ ಮಾಡಿದ್ರು. ಜನಸಂಖ್ಯೆ ಕಡಿಮೆ ಮಾಡಿ ಆರ್ಥಿಕ ಪ್ರಬಲವಾಗಿದ್ದಾರೆ.ಹೀಗೆ ವರದಿಯಲ್ಲಿ ಮಾಡಲಾಗಿದೆ ಎಂದು ಪ್ರಬಲ ಜಾತಿಗಳು ವಿರೋಧ ಮಾಡಿದ್ರು. ಈಗ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂಬ ಹುನ್ನಾರ ನಡೆದಿದೆ. ನಾವು ಹಿಂದೂಳಿದಿದ್ದೇವೆ ಎಂದು ಪ್ರಯತ್ನ ನಡೆದಿದೆ. ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ.ಸರ್ವೆ ಮುಗಿದ ಮೇಲೆ ಕ್ರಾಸ್ ಚೆಕ್ ಮಾಡಬೇಕು. ಕೆಲವು ಪ್ರದೇಶಗಳಲ್ಲಿ ರ್ಯಾಂಡಮ್ ಪರಿಶೀಲನೆ ಮಾಡಬೇಕು.ತಪ್ಪು ಮಾಹಿತಿ ಕೊಟ್ಟಿದ್ದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಬಲ ಜಾತಿಗಳ ವಿರುದ್ಧ ರಾಮಚಂದ್ರಪ್ಪ ಕಿಡಿಕಾರಿದ್ರು.