ಬಾಗಲಕೋಟೆ; ನಮ್ಮದು ಹಿಂದೂ ದೇಶ ಹಿಂದೂಗಳನ್ನು ಒಡೆಯುವಂತಹದ್ದು ನೀಚ ಕೆಲಸ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ನಾಳೆಯಿಂದ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಆರಂಭವಾಗುತ್ತಿರುವ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ನಮ್ಮದು ಹಿಂದೂ ದೇಶ ಹಿಂದೂಗಳನ್ನು ಒಡೆಯುವಂತಹದ್ದು ನೀಚ ಕೆಲಸ. ಹಿಂದೂ ಸಮಾಜದಲ್ಲಿ ಇರತಕ್ಕಂತಹ ಅಸಮಾನತೆ ಸರಿಪಡಿಸಲು. ಕೆಲವು ಶೋಷಿತರನ್ನ ಮೇಲೆ ತರುವುದಕ್ಕೆ ಸರ್ಕಾರ ಮೀಸಲಾತಿ ಸೌಲಭ್ಯವನ್ನು ಕೊಟ್ಟಿದೆ. ಮೀಸಲಾತಿ ಸೌಲಭ್ಯವನ್ನು ಕೆಲವೇ ಜಾತಿಗಳು ಕಬಳಿಸುತ್ತಿದ್ದಾರೆ. ಅಂತ 30-35 ವರ್ಷದಿಂದ ಮಾದಿಗರು ಈ ರಾಜ್ಯದಲ್ಲಿ ಹೋರಾಟವನ್ನು ಮಾಡುತ್ತ ಬಂದಿದ್ದಾರೆ.ಅದರ ಫಲವಾಗಿ ನರೇಂದ್ರ ಮೋದಿಯವರ ಸರಕಾರ ಕೇಂದ್ರದಲ್ಲಿ ನಿರ್ಣಯ ತೆಗೆದುಕೊಂಡು.
ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದರು.ಅದರ ಫಲವಾಗಿ ಆಗಸ್ಟ್ 1.2024ರಲ್ಲಿ ನಮಗೆ ಒಳ ಮೀಸಲಾತಿ ಆದೇಶ ಸಿಕ್ತು.ಬೇರೆ ರಾಜ್ಯದವರು ಈಗಾಗಲೇ ಒಳ ಮೀಸಲಾತಿ ಪರಿಶಿಷ್ಟ ಜಾತಿ ಜನಾಂಗದವರಿಗೆ ನೀಡಲಾಗಿದೆ.ಕಾಂಗ್ರೆಸ್ ನವರು ಅನ್ಯಾಯವಾದವರಿಗೆ ನ್ಯಾಯ ಕೊಡಿಸುವುದಿಲ್ಲ ಎಂದರು.
ಗೊಂದಲ ಸೃಷ್ಟಿ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುತ್ತಾರೆ.ಕಳೆದ ಎರಡುವರೆ ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ರೂಪಾಯಿ ಕೆಲಸ ಕಾರ್ಯಗಳನ್ನು ಮಾಡಲಿಲ್ಲ.ಆದ್ದರಿಂದ ಜನ ಎಲ್ಲಿ ನನ್ನ ಮೇಲೆ ಮುಗೀಬೀಳ್ತಾರೊ ಅಂತ.ಇವತ್ತು ಹಿಂದೂ ಧರ್ಮವನ್ನು ಒಡೆಯುವಂತಹ ಹುನ್ನಾರ ಮಾಡಿದ್ದಾರೆ.ದಲಿತರಲ್ಲಿ ಕ್ರೈಸ್ತ ಅಂತ ಹೊಸ ಜಾತಿಯನ್ನು ಸೃಷ್ಟಿ ಮಾಡಿದ್ದಾರೆ. ಇಂತಹ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ. ಸಿದ್ದರಾಮಯ್ಯನವರ ಸರಕಾರ ಸಾಂವಿಧಾನಿಕವಾಗಿ ಆಡಳಿತವನ್ನು ಮಾಡ್ತಾ ಇಲ್ಲ. ಯಾರು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಅವರ ಬಗ್ಗೆ ಸಮೀಕ್ಷೆ ಮಾಡಲಿಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ತರಾತುರಿಯಲ್ಲಿ ಮಾಡೋದಕ್ಕೆ ವಿರೋಧವಿದೆ ಎಂದು ತಿಳಿಸಿದರು.
ನಾಳಿನ ಸಪ್ಟಂಬರ್ 22 ರಿಂದ ಮಾಡುತ್ತೇವೆ ಅನ್ನೋದನ್ನು ಕೈಬಿಡಬೇಕು.ಅದಕ್ಕೆ ಸಮಯ ಕೊಡಬೇಕು ವೈಜ್ಞಾನಿಕವಾಗಿ ವರದಿಯನ್ನು ತಯಾರು ಮಾಡಲಿಕ್ಕೆ ನಾವ್ಯಾರು ಕೂಡ ವಿರೋಧ ಮಾಡೋದಿಲ್ಲ ಎಂದರು.











