ಬೆಂಗಳೂರು; ಕೇಂದ್ರ ಸರ್ಕಾರದಿಂದ ಜಿಎಸ್ಟಿ ಸರಳೀಕರಣ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ ರಾಮಮೂರ್ತಿ, ಎಂಎಲ್ಸಿ ಕೆ.ಎಸ್ ನವೀನ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ನಿನ್ನೆ ಸಂಜೆ ದೇಶದ 56ನೇ GST ಕೌನ್ಸಿಲ್ ಸಭೆ ಪೂರ್ಣಗೊಂಡಿದೆ. ಐತಿಹಾಸಿಕ GST ರಿಫಾರ್ಮ್ ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನದಂದು GST ಅಮೂಲಾಗ್ರ ಬದಲಾವಣೆ ತರೋದಾಗಿ ಹೇಳಿದ್ರು. ಬಡವರಿಗೆ, ಶ್ರೀಸಾಮಾನ್ಯರಿಗೆ, ರೈತರಿಗೆ, MSME ಗಳಿಗೆ, ಯುವಕರಿಗೆ ಸಹಾಯವಾಗುವಂತೆ GST ಬದಲಾವಣೆ ತರೋದಾಗಿ ಹೇಳಿದ್ರು. ಪ್ರಧಾನಿ ಅವರ ಸೂಚನೆಯಂತೆ ಸರ್ವಾನುಮತದಿಂದ GST ರೇಟ್ಗೆ ರೀಫಾರ್ಮ್ ತರಲಾಗಿದೆ. ಇದರ ಉದ್ದೇಶ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಗಾಗಿ. ಬಹಳ ದೊಡ್ಡ ಬದಲಾವಣೆ ತರಲಾಗಿದೆ. ಚಿಕ್ಕ ಮತ್ತು ಮಧ್ಯಮ ಗಾತ್ರದ ಕಂಪನಿ, ಫ್ಯಾಕ್ಟರಿಗಳಿಗೆ ಸಹಾಯವಾಗಲಿದೆ ಎಂದರು. ರಾಜಾಜಿನಗರ, ಜಿಗಣಿ, ಕನಕಪುರ ಸೇರಿದಂತೆ ಅನೇಕ ಕಡೆ ಬೆಂಗಳೂರಲ್ಲಿ MSME ಇದೆ. ದೇಶಾದ್ಯಂತ 12 ಕೋಟಿಗೂ ಹೆಚ್ಚು MSME ಅಡಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು.
GST ಬಂದ ಬಳಿಕ ಟ್ಯಾಕ್ಸ್ ಸಂಗ್ರಹ ಹೆಚ್ಚಳವಾಗಿದೆ. 12ಲಕ್ಷ ಇದ್ದ ಸಂಖ್ಯೆ 2ಕೋಟಿ ಮೀರಿದೆ. ವರ್ಷಾನುವರ್ಷ ಹೆಚ್ಚಳವಾಗಿದೆ. ದೇಶದ ಸರ್ಕಾರಕ್ಕೆ ಸಂಪನ್ಮೂಲಗಳ ಕ್ರೋಢಿಕರಣ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಅನುಕೂಲ ಆಗಿದೆ. ಎಲ್ಲರ ಪರವಾಗಿ ಪ್ರಧಾನಿಗಳಿಗೆ ಧನ್ಯವಾದಗಳನ್ನ ಹೇಳ್ತೇನೆ ಎಂದು ಹೇಳಿದರು.
ದೇಶದ ಕೃಷಿಕರಿಗೆ, ರೈತರಿಗೆ ಅನುಕೂಲ ಆಗುವಂತೆ 5%ಗೆ ಇಳಿಸಲಾಗಿದೆ. ಮೊದಲು GST 4 ಸ್ಲಾಬ್ ಇತ್ತು. ಈಗ ಎರಡು ಸ್ಲಾಬ್ ಮಾಡಲಾಗಿದೆ. UPA ಅವಧಿಯಲ್ಲಿ VAT ಇದ್ದಾಗ 21% ಇದ್ದ ಟ್ಯಾಕ್ಸ್ ಈಗ 5%ಗೆ ಇಳಿಸಲಾಗಿದೆ. ಕೃಷಿಗೆ ಬೇಕಾದ ಉಪಕರಣಗಳು 5%ಗೆ ಇಳಿಯಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ಶೂರೆನ್ಸ್ 0%ಗೆ ಇಳಿಸಲಾಗಿದೆ. ಮೆಡಿಕಲ್ ಇನ್ಶೂರೆನ್ಸ್ 27 ಸಾವಿರ ಆಗ್ತಿತ್ತು. 0%ಗೆ ಇಳಿಸಿದ್ರಿಂದ 27 ಸಾವಿರ ಕಡಿಮೆ ಆಗಿದೆ. ಆರೋಗ್ಯಕ್ಕೆ ಬೇಕಾದ ಎಲ್ಲಾ ಔಷಧಿಗಳು ಕೂಡ ಕಡಿಮೆ ಬೆಲೆಗೆ ಸಿಗ್ತಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮೆಡಿಕಲ್ ಇನ್ಶುರೆನ್ಸ್ 0%ಗೆ ಇಳಿಸಲಾಗಿದೆ. ಅನೇಕರು ಮೆಡಿಕಲ್ ಇನ್ಶುರೆನ್ಸ್ ಮಾಡಿಸಿಲ್ಲ, ಇದರಿಂದ ಮೆಡಿಕಲ್ ಇನ್ಶೂರೆನ್ಸ್ ಮಾಡಿಸಿ.ಪ್ರಧಾನಮಂತ್ರಿ ಲೈಫ್ ಇನ್ಶೂರೆನ್ಸ್ ಮಾಡಿಸಿ ಎಂದು ಮನವಿ ಮಾಡಿದರು.
ಮೆಡಿಸಿನ್ ಗಳ ಮೇಲೆ 12%-18% ವರೆಗೂ ತೆರಿಗೆ ಇತ್ತು. ಅದನ್ನ 5%ಗೆ ಇಳಿಸಲಾಗಿದೆ. ಕ್ಯಾನ್ಸರ್, ಡಯಾಲಿಸಿಸ್, ಎಮರ್ಜೆನ್ಸಿ ಲೈಫ್ ಸೇವಿಂಗ್ ಮೆಡಿಸಿನ್ ಗಳ ಔಷಧಿಗಳ ಟ್ಯಾಕ್ಸ್ 0%ಗೆ ಇಳಿಸಲಾಗಿದೆ. ಇದರಿಂದ ಬಡ ಮತ್ತು ಮಧ್ಯಮ ರೋಗಿಗಳಿಗೆ ಅನುಕೂಲ ಆಗಲಿದೆ. ಆಹಾರ ಪದಾರ್ಥಗಳು ಹಾಗೂ ದಿನನಿತ್ಯ ವಸ್ತುಗಳ ಮೇಲಿನ ತೆರಿಗೆ 5%ಗೆ ಇಳಿಸಲಾಗಿದೆ. ಇದರಿಂದ ಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ. ಆರ್ಥಿಕ ಚೈತನ್ಯ ಹೆಚ್ಚಾಗಲಿದೆ ಎಂದು ಭರವಸೆ ನೀಡಿದರು.
ಜರ್ದ, ತಂಬಾಕು, ಗುಟ್ಕಾಗಳ ಮೇಲಿನ ತೆರಿಗೆ 40%ಗೆ ಹೆಚ್ಚಳವಾಗಿದೆ. ಇವರೇ ಮುಂದೆ ಕ್ಯಾನ್ಸರ್ ಪೇಶೆಂಟ್ಗಳಾಗಲಿದ್ದಾರೆ. ಹಾಗಾಗಿ ಇದರ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ. GST ಸಭೆ ಕೇಂದ್ರದ ಪ್ರತಿನಿಧಿಗಳು ಇರೋ ಸಭೆ ಅಲ್ಲ. ರಾಜ್ಯ ಮತ್ತು ಕೇಂದ್ರದ ಎಲ್ಲಾ ಪ್ರತಿನಿಧಿಗಳು ಇರೋ ಸಭೆ. ನಿನ್ನೆಯ ಸಭೆಯಲ್ಲಿ ಎಲ್ಲಾ ರಾಜ್ಯದವರು ಸೇರಿ ತೆಗೆದುಕೊಂಡ ನಿರ್ಧಾರ ಮಾಡಲಾಗಿದೆ. ಆರ್ಥಿಕತೆಯಲ್ಲಿ ನಷ್ಟವಾದ್ರೆ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ನಷ್ಟ ಆಗಲಿದೆ. ಲಾಭ, ನಷ್ಟ ಏನೇ ಇದ್ರೂ ಎರಡಕ್ಕೂ ಆಗಲಿದೆ. ತೆರಿಗೆ ಕಡಿಮೆ ಆದಾಗ ಕೊಳ್ಳದಿರೋರೂ ಕೂಡ ಕೊಳ್ಳಲು ಮುಂದಾಗ್ತಾರೆ ಎಂದರು.
ಕಾಂಗ್ರೆಸ್ ನವರು ಸುಳ್ಳು ಮಾಹಿತಿ ನೀಡ್ತಿದ್ದಾರೆ. ಕಂದಾಯ ಸಚಿವರನ್ನೇ ಕೇಳಿ. 2017ರಲ್ಲಿ GST ಬಂದಿದ್ದು. ಅದಕ್ಕೆ ಮೊದಲು, ನಂತರ ಎಷ್ಟು ತೆರಿಗೆ ಬಂದಿದೆ ಅಂತ ವರದಿ ಕೇಳಿ. ಪ್ರತೀ ವರ್ಷ ತೆರಿಗೆ ಸಂಗ್ರಹ 18% ಹೆಚ್ಚಳವಾಗಿದೆ. ವಿರೋಧ ಮಾಡಬೇಕು ಅಂತ ವಿರೋಧ ಮಾಡ್ತಿದ್ದಾರೆ. ಇವರಿಗೆ ಇಷ್ಟ ಇಲ್ಲ ಅಂದಿದ್ರೆ ವಾಕ್ಔಟ್ ಮಾಡಬೇಕಿತ್ತು. ತೆಲಂಗಾಣ, ಕರ್ನಾಟಕ ಯಾರೂ ವಾಕ್ಔಟ್ ಮಾಡಿಲ್ಲ. ಸಭೆಯಲ್ಲಿ ಮತ ಹಾಕಿ, ಹೊರಗೆ ಬಂದು ವಿರೋಧ ಮಾಡಿದ್ರೆ ಹೇಗೆ.? ಸಿಎಂ ಹಿಪೋಕ್ರಸಿ ರಾಜಕಾರಣ ಬಿಡುವಂತೆ ಆಗ್ರಹಿಸಿದ್ದಾರೆ.











