ಚಿತ್ರದುರ್ಗ: ಸುಪ್ರೀಂ ಕೋರ್ಟ್ ನಿಂದ ದರ್ಶನ್ ಜಾಮೀನು ರದ್ದಾಗಿರುವ ಬಗ್ಗೆ ರೇಣುಕಾಸ್ವಾಮಿ ತಂದೆ ಹಾಗೂ ಪತ್ನಿ ಸಹನಾ ಖುಷಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ನ ದರ್ಶನ್ ಅವರ ಬೇಲ್ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ರದ್ದಾಗಿದೆ. ಅವರನ್ನು ಅರೆಸ್ಟ್ ಮಾಡಲು ಆದೇಶ ಆಗಿದೆ. ಸುಪ್ರೀಂ ಕೋರ್ಟ್ ನ ಈ ಆದೇಶದಿಂದಾಗಿ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್ ಅಪೀಲ್ ಮಾಡಿದ್ದರು. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಈ ತೀರ್ಪು ಬಂದಿದೆ.ಸರ್ಕಾರ & ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆ. ಈ ಕೇಸ್ ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ನನ್ನ ನೊಂದ ಸೊಸೆ ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಉದ್ಯೋಗ ನೀಡಬೇಕು. ಕೆಳ ಹಂತದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಆಗಬೇಕು. ಯಾರೇ ದೊಡ್ಡವರು ಆದರೂ ಕಾನೂನು ಒಂದೇ ಎಂದು ಸಾಬೀತು ಆಗಿದೆ. ನಮಗೆ ಈ ಪ್ರಕರಣದಲ್ಲಿ ತುಂಬಾ ಆತಂಕ ಇತ್ತು, ಸುಪ್ರೀಂ ಕೋರ್ಟ್ ನಿರ್ಧಾರ ವಿಶ್ವಾಸ ಬಂದಿದೆ ಎಂದಿದ್ದಾರೆ.
ಇನ್ನು ಪೂಜೆ ಮಾಡುವ ವೇಳೆ ನನ್ನ ಪತ್ನಿ ಬೇಲ್ ವಜಾ ಆಗಿದೆ ಎಂದರು. ನಮ್ಮ ಮನೆಯ ಪೂಜೆ ಸಲ್ಲಿಕೆ ವೇಳೆ ಅರ್ಜಿ ವಜಾ ಆಯ್ತು. ಗುರುಗಳು, ದೇವರ ಆಶಿರ್ವಾದದಿಂದ ಬೇಲ್ ಅರ್ಜಿ ವಜಾ ಆಗಿದೆ.ಎಲ್ಲಾ ಮಾಧ್ಯಮಗಳಿಗೂ ನಾನು ಧನ್ಯವಾದ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಸಹನಾ ಪ್ರತಿಕ್ರಿಯಿಸಿ ಯಾರೂ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದು ಗೊತ್ತಾಗಿದೆ. ಯಾರೇ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ಕಾನೂನಿನಲ್ಲಿ ಯಾವ ರೀತಿಯಲ್ಲಿ ಶಿಕ್ಷೆ ಆಗಬೇಕು ಅದನ್ನ ಕೊಡಲಿ ಎಂದಿದ್ದಾರೆ.











