ಬೆಂಗಳೂರು: ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ ಆಚರಿಸಲಾಯಿತು. ಈ ವೇಳೆ ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ್ ಸ್ವಾಮಿ, ಮಾಜಿ ಶಾಸಕ ಪಿ ರಾಜೀವ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಇಂದು ಮಹಾನ್ ದೇಶಭಕ್ತ ಹಿರಿಯ ನಾಯಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯ ಜನ್ಮದಿನ. ದೇಶದ ಏಕತೆ,ಸಮಗ್ರತೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯವಾದಿ ನೇತಾರ. ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿಕೊಟ್ಟವರು. ಜಮ್ಮು ಕಾಶ್ಮೀರವನ್ನ ಭಾರತದೊಂದಿಗೆ ಒಗ್ಗೂಡಿಸಲು ಪ್ರಾಣವನ್ನ ಅರ್ಪಿಸಿದ ಧೀಮಂತ ನಾಯಕ. ಮುಖರ್ಜಿ ಅವರು ಕನಸ್ಸನ್ನ ಪ್ರಧಾನಿ ಮೋದಿಯವರು ಇಡೇರಿಸುತ್ತಿದ್ದಾರೆ. ಆಧುನಿಕ ಆಢಳಿತ ಪ್ರತಿಪಾದಿಸಿದ್ರು. ನೆಹರು ಅವರ ಸಂಪುಟದಲ್ಲಿ ಸಚಿವರಾಗಿದ್ರು ತೃಷ್ಟಿಕರಣದ ವಿರುದ್ದ ಮಾತನಾಡುವ, ರಾಷ್ಟ್ರೀಯ ಹಿತಾಸಕ್ತಿಗೆ ದ್ವನಿ ಎತ್ತಿದವರು ಶ್ಯಾಮ್ ಪ್ರಸಾದ್ ಮುಖರ್ಜಿ ಎಂದರು.
ಇದೇ ವೇಳೆ ಮಾತನಾಡಿದ ಶಿವಮೊಗ್ಗದ ರಾಗಿಗುಡ್ಡ ಗಣಪತಿ ವಿಗ್ರಹ ಧ್ವಂಸ ಮಾಡಿದ್ದಾರೆ. ಕಿಡಿಗೇಡಿಗಳು ರಾಜಕೀಯ ದೊಂಬರಾಟ ಮಾಡಿದ್ದಾರೆ. ಸರ್ಕಾರ ಬದುಕಿದ್ದರೆ ಅವರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕು. ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಠಾವೋ ಪ್ರಾರಂಭ ಆಗಿದೆ. ರಾಜ್ಯದಿಂದ ಸಿದ್ದರಾಮಯ್ಯ ರನ್ನು ಹೇಗೆ ಹೊರಗಡೆ ಹೇಗೆ ಕಳಿಸಬೇಕು ಅನ್ನೋದು ಶುರುವಾಗಿದೆ. ಖರ್ಗೆಯವರನ್ನು ಹೇಗೆ ಕಳುಹಿಸಿದ್ರು ಅದೇ ರೀತಿ ಕಳುಹಿಸುತ್ತಿದ್ದಾರೆ. ಖರ್ಗೆಯವರಿಗೂ ಶೆಡ್ ರೆಡಿ ಮಾಡಿದ್ರು. ಸಿದ್ದರಾಮಯ್ಯ ನವರಿಗೂ ಶೆಡ್ ರೆಡಿ ಮಾಡಿದ್ದಾರೆ.ಸಿದ್ದರಾಮಯ್ಯ ಒಂದು ಹೆಜ್ಜೆ ತೆಗೆದು ಇಟ್ರೆ, ಶೆಡ್ ಗೆ ಹೋದ ಹಾಗೆ. ಸಿಎಂ ಸ್ಥಾನಕ್ಕೆ ನವೆಂಬರ್ ನಲ್ಲಿ ರಾಜೀನಾಮೆ ಕೊಡೊದು ಖಾತ್ರಿ. ಇನ್ನೊಂದು ಬಜೆಟ್ ಮಂಡನೆಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ ಎಂದರು.
ಗ್ಯಾರಂಟಿ ಕುರಿತು ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮ್ಮದು ಅಭಿವೃದ್ಧಿ ಪರವಾದ ಸರಕಾರವಲ್ಲ. ಮೂಗಿಗೆ ತುಪ್ಪ ಸವರಿ ಲೂಟಿ ಮಾಡಲು ಬಂದಿದ್ದಾರೆ. ನೇರವಾಗಿ ಜನರಿಗೆ ಹೇಳೊಕೆ ಬಂದಿದ್ದಾರೆ. ಅಭಿವೃದ್ಧಿಗೂ ಗ್ಯಾರಂಟಿಗೂ ಏನ್ ಸಂಬಂಧ. ಚುನಾವಣೆಯಲ್ಲಿ ವೋಟ್ ಪಡೆಯಲು ಗ್ಯಾರಂಟಿ ಘೋಷಣೆ. ನುಡಿದಂತೆ ಸರಕಾರ ನಡೆಯುತ್ತಿಲ್ಲ. ಎಷ್ಟು ಸಾಧ್ಯ ಅಷ್ಟು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಒಂದೊಂದಾಗಿ ಹೊರಗಡೆ ಬರುತ್ತಿವೆ. ಅಭಿವೃದ್ಧಿಯನ್ನು ಕೇಳಬಾರದು ಎಂಬ ಥ್ರೆಟ್ ಮಾಡಿದ್ದಾರೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಮೆಂಟಲ್ ಆಸ್ಪತ್ರೆಗೆಯಿಂದ ಬಂದಿದ್ದಾರೆ. ಜನೋಪಕಾರಿ ವಿಚಾರವನ್ನು ಅವರು ಮಾತನಾಡುವುದಿಲ್ಲ. ಆರ್ ಎಸ್ ಎಸ್ ಬ್ಯಾನ್ ಬಗ್ಗೆ ಮಾತನಾಡ್ತಾರೆ. ಯಾರ್ ಚಡ್ಡಿ ಹಾಕ್ತಾರೆ, ಪ್ಯಾಂಟ್ ಹಾಕ್ತಾರೆ ಬರೀ ಇವೇ ಮಾತು. ಇವರು ತಮ್ಮ ಇಲಾಖೆ ಬಗ್ಗೆ ಮಾತನಾಡಲ್ಲ.ಇನ್ನೊಬ್ಬರ ಚಡ್ಡಿ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಅಪ್ಪ ಅಲ್ಲ, ನೆಹರೂ, ರಾಜೀವ್ ,ಇಂದಿರಾ ಗಾಂಧಿ , ಇಡಿ ಖಾಂದಾನ ಬಂದ್ರೂ ಏನೂ ಮಾಡೊಕೆ ಆಗಲ್ಲ. ಹುಲಿ ತನ್ನ ಬಾಲವನ್ನು ಆಟ ಆಡಿಸಬಹುದು. ಬಾಲ ಹುಲಿಯನ್ನು ಆಡಿಸಲು ಆಗಲ್ಲ. ಪ್ರಿಯಾಂಕ ಖರ್ಗೆ ಬಾಲಂಗೋಚಿ ಇದ್ದ ಹಾಗೆ. ದೇಶ ಸುಭದ್ರವಾಗಿರಲು ಆರ್ ಎಸ್ ಎಸ್ ಕಾರಣ. ಆರ್ ಎಸ್ ಎಸ್ ದೇಶ ಭಕ್ತರ ಕೂಟ. ದೇಶಕ್ಕೆ ಕೆಲಸ ಮಾಡುವವರಿಗೆ ಆರ್ ಎಸ್ ಎಸ್ ಸಹಾಯ ಮಾಡ್ತಾರೆ. ನೀವು ಯಾರ ಹಿಂದೆ ಇದ್ದೀರಿ.ಪಾಕ್, ಬಾಂಗ್ಲಾ, ಚೈನಾ ಜೊತೆ ಇದ್ದೀರಿ. ಪ್ರಿಯಾಂಕ್ ಖರ್ಗೆಗೆ ದುರಂಹಕಾರ. ನನಗೆ ನನ್ನ ಇತಿಹಾಸ ಗೊತ್ತಿಲ್ಲ ಎಂದಿದ್ದಾರೆ.ನನಗೆ ನಿನ್ನ ಇತಿಹಾಸ ಅಲ್ಲ, ಇಡಿ ಕುಟುಂಬದ ಇತಿಹಾಸ ಗೊತ್ತು. ನಿನ್ನ ಇತಿಹಾಸ ಗೊತ್ತು, ನಿಮ್ಮ ಅಪ್ಪನ ಇತಿಹಾಸ ಗೊತ್ತು.ನನಗೆ ನನ್ನ ಸಮಾಜ ಮುಖ್ಯ. ದಲಿತರಿಗೆ ಬರುವ ಆಸ್ತಿಯನ್ನು ನನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದಾರೆ. ದಲಿತರು ಸಂಕಷ್ಟದಲ್ಲಿದ್ರೆ ಅದು ನಿಮ್ಮಿಂದ. ಯಾವ್ಯಾವ ದಲಿತರನ್ನು ತುಳಿದ್ದಿರಿ ಅವರ ಧ್ವನಿಯಾಗಿದ್ದೇನೆ. ನಿಮ್ಮ ಚರಿತ್ರೆಯನ್ನು ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ನಿಮ್ಮ ಚರಿತ್ರೆ ನನಗೆ ಗೊತ್ತಿದೆ ಎಂದು ತಿಳಿಸಿದರು.











