ಮನೆ Latest News ಹಾಸನ ಬಿಟ್ಟು ಕೋವಿಡ್ ಲಸಿಕೆ ಯಾರಿಗೂ ಕೊಟ್ಟಿಲ್ವಾ.?: ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಹಾಸನ ಬಿಟ್ಟು ಕೋವಿಡ್ ಲಸಿಕೆ ಯಾರಿಗೂ ಕೊಟ್ಟಿಲ್ವಾ.?: ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

0

ಬೆಂಗಳೂರು; ಹಾಸನದಲ್ಲಿ ಮರಣ ಮೃದಂಗದ ರೀತಿಯಲ್ಲಿ ಹೃದಯಾಘಾತವಾಗುತ್ತಿರೋದಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಆರೋಪಿಸುತ್ತಿರುವವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಹಾಗಾದ್ರೆ ಹಾಸನ ಬಿಟ್ಟು ಕೋವಿಡ್ ಲಸಿಕೆ ಯಾರಿಗೂ ಕೊಟ್ಟಿಲ್ವಾ. ಸರ್ಕಾರ ಬೇಜವಾಬ್ದಾರಿ ಇಂದ ನಡೆದುಕೊಳ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಭೇಟಿಯಾಗಿಲ್ಲ. ಯಾಕೆ ಆಗ್ತಿದೆ, ಸಮಸ್ಯೆ ಏನು ಅಂತ‌ ತಿಳಿಯಬೇಕು. ಸಿಎಂ ಕೋವಿಡ್ ಲಸಿಕೆ ಅಂತ ಹೇಳ್ತಾರೆ. ಆಯ್ತು ಹಾಸನ ಬಿಟ್ಟು ಕೋವಿಡ್ ಲಸಿಕೆ ಯಾರಿಗೂ ಕೊಟ್ಟಿಲ್ವಾ.? ಸಮಸ್ಯೆ ಏನು ಅಂತ ಅರಿಯದೆ ಮಾತಾಡೋದು ಸರಿಯಲ್ಲ. ಮಲೆನಾಡು, ಹಾಸನ ಎಲ್ಲೆಡೆ ಮಳೆ ಬಿದ್ದು ಕಾಫಿ ಬೀಜಗಳು ಕೊಳೆಯುತ್ತಿವೆ. ರೈತರ ಬಗ್ಗೆ ಕಾಳಜಿ‌ ಇಲ್ಲ.ಸರ್ಕಾರಕ್ಕೆ ಆಗ್ರಹ ಮಾಡ್ತೀನಿ ಎಂದು ಹೇಳಿದ್ದಾರೆ.

ಕೂಡಲೇ ರೈತರ ಭೇಟಿ ಮಾಡಿ ಸಾಂತ್ವಾನ ಹೇಳಿ, ಪರಿಹಾರ ಬಿಡುಗಡೆ ಮಾಡಬೇಕು.ನಾನೂ ಕೂಡ ಹಾಸನ ಪ್ರವಾದ ಮಾಡ್ತೇನೆ. ಸರ್ಕಾರಕ್ಕೆ ಬಿಸಿ ಮುಟ್ಟಿಸೋ ಕೆಲಸ ಮಾಡ್ತೀನಿ. ಎರಡು ಕಾಲು ವರತಷ ಆಯ್ತು, ಇನ್ನೂ ಸಿಎಂ ಯಾರು ಅನ್ನೊ ಚರ್ಚೆ ಮಾತ್ರ ನಡೀತಿದೆ. ಯಾರು ಮುಖ್ಯಮಂತ್ರಿ ಅನ್ನೋದೇ ಚರ್ಚೆ. ಬೇರೆ ಯಾವುದೇ ಚರ್ಚೆಯಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಟೇಕ್ ಆಫ್ ಆಗದ ಸರ್ಕಾರ ಇದು ಎಂದಿದ್ದಾರೆ.

ಹರಿಪ್ರಸಾದ್ ಹೆಬ್ಯುಚಲ್ ಅಫೆಂಡರ್ಸ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಸದಾ ಹೆಬ್ಯುಚುಯಲ್ ಅಫೆಂಡರ್. ಸದಾ ಮಾತಾಡ್ತಾ ಇರ್ತಾರೆ. ಅವರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. RSS ಬ್ಯಾನ್ ಮಾಡ್ತೀವಿ ಅನ್ನೋ ವಿಚಾರದ ಬಗ್ಗೆ ಮಾತನಾಡಿ RSS ಅನ್ನ ಮುಟ್ಟುದವರು ಸರ್ವನಾಶ ಆಗಿದ್ದಾರೆ. ಇಂದಿರಾಗಾಂಧಿ ಸರ್ಕಾರ ಬಿದ್ದೇ ಹೋಯ್ತು. ನೆಹರು ಅವರು RSS ಅನ್ನ ಪೆರೇಡ್ ಮಾಡಲು ಆಹ್ವಾನಿಸಿದ್ರು. ಹಿಂದೆ ಹೆಚ್ಚು ಸ್ಥಾನ ಗೆಲ್ತಿದ್ರು. ಈಗ ಫುಟ್ ಪಾತಿಗೆ ಬಂದಿದ್ದಾರೆ. ತಿಣುಕಿ ವಿಪಕ್ಷ ಸ್ಥಾನಕ್ಕೆ ಬಂದಿದ್ದಾರೆ. ಮುಂದೆ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ. ತಿರುಕನ‌ ಕನಸು ಕಾಣಬೇಡಿ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ ಎಂದಿದ್ದಾರೆ.

ಡಿಕೆಶಿ ಸಿಎಂ ಆಗೋ ಪ್ರಯತ್ನ ವಿಚಾರದ ಬಗ್ಗೆ ಮಾತನಾಡಿ ಅವರ ಸಿಎಂ ಆಗಮನ ಕನಸು ಇನ್ನೂ ಇದೆ. ಹೈಕಮಾಂಡ್ ಆಶಿರ್ವಾದ ಇದೆ ಅಂತ ಅವರ ಆಶಯ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ನಾನು ಹೇಳಿದ್ರೆ ಜ್ಯೋತಿಷ್ಯ ಅಂತ ಹೇಳ್ತಾರೆ. ಅವರ ಎಂಎಲ್‌ಎ ಗಳಾದ ಬಿ.ಆರ್ ಪಾಟೀಲ್, ಇಕ್ಬಾಲ್ ಅವರೇ ಹೇಳ್ತಿದ್ದಾರೆ. ನಾವು ಹೇಳುವ ಮೊದಲೇ ಕಾಂಗ್ರೆಸ್ ಎಂಎಲ್‌ಎ ಗಳು ಬದಲಾವಣೆ ಅಂತಿದ್ದಾರೆ. ಡಿಕೆಶಿ ಅವರೇ ಹೇಳಬೇಕು. . ದೇವಸ್ಥಾನಕ್ಕೆ ವರ ಪಡೆಯೋಕೆ ಹೋಗ್ತಿದ್ದಾರೆ. ಬದಲಾವಣೆ ಖಚಿತ ಎಂದು ತಿಳಿಸಿದ್ದಾರೆ.