ಮನೆ Latest News ಆರ್ ಸಿಬಿ ವಿಜಯೋತ್ಸವದ ವೇಳೆ 11 ಜನ ಸಾವನ್ನಪ್ಪಿದ ಪ್ರಕರಣ: ಘಟನೆಯನ್ನು ನೆನೆದು ಡಿಸಿಎಂ ಡಿ...

ಆರ್ ಸಿಬಿ ವಿಜಯೋತ್ಸವದ ವೇಳೆ 11 ಜನ ಸಾವನ್ನಪ್ಪಿದ ಪ್ರಕರಣ: ಘಟನೆಯನ್ನು ನೆನೆದು ಡಿಸಿಎಂ ಡಿ ಕೆ ಶಿವಕುಮಾರ್ ಕಣ್ಣೀರು

0

ಬೆಂಗಳೂರು; ಆರ್ ಸಿಬಿ ವಿಜಯೋತ್ಸವದ ವೇಳೆ 11 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಘಟನೆ ಬಗ್ಗೆ ನಮ್ಮ ಜವಾಬ್ದಾರಿ ಇದೆ, ನಮ್ಮ ಮನೆಯಲ್ಲೇ ಈ ಘಟನೆ ಆಗಿದೆ.ನಾನು ಸ್ಟೇಡಿಯಂಗೆ ಹೋದಾಗ ಈ ಘಟನೆ ಬಗ್ಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಅಲ್ಲದೇ ಘಟನೆಯಲ್ಲಿ ಸಾವನ್ನಪ್ಪಿದ ಮಕ್ಕಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನನಗೆ ಹೊಟ್ಟೆ ಹುರಿಯುತ್ತಿದೆ. ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸೋಕೆ ಆಗ್ತಾ ಇಲ್ಲ ಅಂತ ಕಣ್ಣೀರು ಹಾಕಿದ್ದಾರೆ.

ಇದನ್ನ ಯಾವ ಫ್ಯಾಮಿಲಿ ಕೂಡ ತಡೆದುಕೊಳ್ಳಲ್ಲ. ಪೊಲೀಸ್ ಇಲಾಖೆ ಕೂಡಲೇ ಹೇಳ್ತು ಇದನ್ನ ತಡೆಯಿರಿ ಅಂತಾ. ನಾನೂ ಕೂಡಲೇ ಮ್ಯಾನೇಜ್ಮೆಂಟ್ ಗೆ ಹೇಳಿದೆ. ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ಕಾರ್ ನಲ್ಲಿ ಕೂರಿಸಿಕೊಂಡು ಹೋದೆ. ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು. ಯಾರು ಏನೇ ಹೇಳಿದರೂ ಟೀಕೆ ಮಾಡಲಿ. ಸದನದಲ್ಲಿ ಎಲ್ಲವೂ ಬರಲಿದೆ. ಅವರವರ ಕಾಲದಲ್ಲಿ ಏನಾಯ್ತು ಅಂತಾ ಗೊತ್ತಿದೆ.ರಾಜ್ ಕುಮಾರ್ ಸತ್ತಾಗ ಏನಾಯ್ತು ಅಂತ ಗೊತ್ತಿದೆ. ನಾನು ಆಗ ದೆಹಲಿಯಲ್ಲಿ ಇದ್ದೆ. ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ. ಡರ್ಟಿ ಪಾಲಿಟಿಕ್ಸ್ ನಾನು ಮಾತಾಡಲ್ಲ. ಹೌದು ಯಾರೇ ಮಾಡಿದರೂ ಕೂಡ ಸರಕಾರ ಜವಬ್ದಾರಿ ತೆಗೆದುಕೊಳ್ಳುತ್ತದೆ. ಇದು ನಮ್ಮ ಮನೆಯ ನೋವಾಗಿದೆ.ಇದು ಇಮೇಜ್ ಆಫ್ ಕರ್ನಾಟಕ, ಫ್ಯಾಮಿಲಿ ಎಂದಿದ್ದಾರೆ.

ಒಂದು ತಾಯಿ ಹೇಳುತ್ತದೆ ಪೋಸ್ಟ್ ಮಾರ್ಟಮ್ ಮಾಡಬೇಡಿ ಅಂತಾ. ಎಷ್ಟು ಹೊಟ್ಟೆ ಹುರಿಯಬೇಕು ಅಲ್ವಾ.ರಾಜಕೀಯ ಮಾಡೋದು ಬೇಡ ಎಂದ ಅವರು ಕೆಲ ಮಾಧ್ಯಮಗಳಿಂದ ಈ ಬಗ್ಗೆ ಗೊತ್ತಾಯಿತು, ನಂತರ ಕಮೀಷನರ್ ಯಿಂದ ಮಾಹಿತಿ ಪಡೆದೆ. ಯಾವುದೇ ಭಾಷಣ, ಕಾರ್ಯಕ್ರಮ ಮಾಡಲಿಲ್ಲ. ಬಿಜೆಪಿ, ಕುಮಾರಸ್ವಾಮಿ ರಾಜಕೀಯ ಮಾಡ್ತಿದ್ದಾರೆ.ರಾಜಕುಮಾರ್ ಸತ್ತಾಗ ಏನಾಯ್ತು?. ರವಿ, ಅಶೋಕ್ ಎಲ್ಲಾ ಈ ಪ್ರಕರಣದಲ್ಲಿ ಚೇಷ್ಟೇ ಮಾಡ್ತಾರೆ ಎಂದು ಕಾರಿನಲ್ಲಿ ಕೂತ ಮೇಲೂ ಅವರು ಕಣ್ಣೀರು ಹಾಕಿದ್ದಾರೆ.

ಇವೆಲ್ಲಾ ಚರ್ಚೆ ಅಸಂಬ್ಲಿಯಲ್ಲಿ ಬರುತ್ತೆ, ಚರ್ಚೆ ಮಾಡೋಣ.ನಾನು ಕೊರ್ಟ್ ನಲ್ಲಿ ಇದ್ದೆ, ಯಾರೇ ತೀರ್ಮಾನ ಮಾಡಿದ್ರೂ, ನಮ್ಮದೇ ಸರ್ಕಾರ . ಅವರವರ ಕಾಲದಲ್ಲಿ, ಏನೇನು ಆಯ್ತು? .ಪೋಲಿಟಿಕಲ್ ಅಜೆಂಡಾ ಮಾಡ್ತಿದ್ದಾರೆ, ಡರ್ಟಿ ಪಾಲಟಿಕ್ಸ್ ಮಾಡ್ತಿದ್ದಾರೆ. ಬೇರೆಯವರನ್ನ ಬೈಯಲ್ಲ. ಸಿಎಂ ಸೇರಿದಂತೆ ಎಲ್ಲರೂ ಶಾಕ್ ನಲ್ಲಿ ಇದ್ದಾರೆ. ಅವರೂ ನಮ್ಮ ಕುಟುಂಬದವರು ಎಂದು ಅವರು ಹೇಳಿದ್ದಾರೆ.