ಬೆಂಗಳೂರು; ಈಗಾಗಲೇ ಕೆಇಆರ್ ಸಿ ವಿದ್ಯುತ್ ದರ ಏರಿಕೆ ಮಾಡಿ ಆದೇಶ ನೀಡಿದೆ. ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮದವರು ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ. ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಈ ಬಗ್ಗೆ ಕೇಳಿ. ದರ ಏರಿಕೆ ಕುರಿತು ನಾನು ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.
ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರದ ನೀರಾವರಿ ಸಚಿವರು ಪೆನ್ನಾರ್ ನದಿ ಬಗ್ಗೆ ಮಾತಾಡಲು ಕರೆದಿದ್ರು. ನಮ್ಮನ್ನ, ತಮಿಳುನಾಡಿನವರನ್ನ ಕರೆದಿದ್ರು. ಕೋರ್ಟ್‌ನಲ್ಲಿ ಕಾಂಪಮೈಸ್ ಫಾರ್ಮುಲಾ ಕೊಡಿ ಎಂದು ಆದೇಶ ಕೊಟ್ಟಿದ್ರು. ಕೊನೆ ಘಳಿಗೆಯಲ್ಲಿ ತಮಿಳಿನಾಡಿನವರು ಪ್ರತ್ಯೇಕವಾಗಿ ಬಂದು ಮಾತಾಡ್ತೇವೆ ಎಂದಿದ್ರು. ಇದು ಅಧಿಕೃತವಲ್ಲ ಸುದ್ದಿ ಅಷ್ಟೇ. ಅದು ಅಧಿಕೃತವಲ್ಲ ಹೀಗೆ ಸುದ್ದಿ. ಅವರಿಗೆ ಏನೂ ಪೊಲಿಟಿಕಲ್ ಸಮಸ್ಯೆ ಆಗ್ಬಹುದು ಎನ್ನೋ ಕಾರಣಕ್ಕೆ ಇರಬಹುದು. ಇನ್ನೊಂದು ದಿನ ಕರೆದು ಮಾತಾಡ್ತಾರಂತೆ. ಅದನ್ನ ನನಗೆ ಸಚಿವರು ಆಮೇಲೆ ಹೇಳಿದ್ರು. ನಾನು ನಮ್ಮ ನಿಲುವನ್ನ ಕ್ಯಾಬಿನೆಟ್ ನಲ್ಲಿ ತೆಗೆದು ಕೊಂಡು ಹೋಗಿದ್ದೆ.ಅಷ್ಟರಲ್ಲಿ ನಾನು ಹೋಗಿದ್ದೆ, ಮತ್ತೆ ಕರೆಯುತ್ತೇನೆ ಎಂದಿದ್ದಾರೆ ಎಂದು ತಿಳಿಸಿದ್ರು.
ಡಿ ಕೆ ಶಿವಕುಮಾರ್ ಗೆ ಅಧಿಕಾರದ ಮದ ಎಂಬ ವಿಜಯೇಂದ್ರ ಹೇಳಿಕೆ ರಿಯಾಕ್ಟ್ ಮಾಡಿದ ಅವರು ಹೌದಪ್ಪ, ನನಗೆ ಮದ ಜಾಸ್ತಿ ಇದೆ .ಮದ ಇದ್ರೆ ಕಡಿಮೆ ಮಾಡಲಿ ಬಿಡು ಅವರು. ಯಾವ ಛತ್ರಿ ಎಂದು ಹೇಳಿದ್ದೇನೆ ? ಯಾರಿಗೆ ಹೇಳಿದ್ದೆ. ಇವನೇನಾದರೂ ನೋಡಿದ್ನಾ ಇವನು . ನಾನು ಬೇಕಾದವರನ್ನ ಏನಾದರೂ ಕರೀತಿನಿ. ಕೆಲವರು ಕಳ್ ನನ್ ಮಗನೆ ಎನ್ನುತ್ತಾರೆ . ಸುಳ್ ನನ್ ಮಗನೇ ಎನ್ನುತ್ತಾರೆ. ಪ್ರೀತಿಯಿಂದ ಇನ್ನೊಂದು ರೀತಿ ಮಾತಾಡ್ತಾರೆ. ಅದು ನಮ್ಮ ಇಂಟರ್ನಲ್ ಯಾವ ಛತ್ರಿನೂ ಇಲ್ಲ ಎಂದಿದ್ದಾರೆ.
ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತನಾಡಿ ಯಾರಾದರೂ ಇದ್ರೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡಲಿ.ಮೊದಲು ಕಂಪ್ಲೇಂಟ್ ಕೊಡಲಿ, ಯಾರೇ ಇದ್ದರೂ ತನಿಖೆ ಮಾಡೋಣ ಎಂದ ಅವರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೂಮಿ ಒತ್ತುವರಿ ತೆರವರಿಗೆ ದ್ವೇಷದ ರಾಜಕಾರಣ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನೋಡ್ರಿ ಇಡಿ ದೇಶಕ್ಕೆ ಗೊತ್ತು. ನಾವ್ಯಾರಾದರೂ ಕೇಸ್ ಹಾಕಿದ್ದೇವಾ?. ಹದಿನೈದು, ಇಪ್ಪತ್ತು ವರ್ಷದಿಂದ ಆ ಹೀರೇಮಠ್ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ .ಕುಮಾರಸ್ವಾಮಿ ಯಾಕೆ ಗಾಬರಿ ಮಾಡ್ಕೋಬೇಕು?. ಏನ್ ದ್ವೇಷದ ರಾಜಕಾರಣ ಮಾಡ್ತಾರೆ. ಕೋರ್ಟ್ ಆಫೀಸರ್‌ಗೆ ಡೈರೆಕ್ಷನ್ ಕೊಟ್ಟಿದೆ. ಈ ಹಿಂದೆಯೂ ಲೋಕಾಯುಕ್ತದಲ್ಲಿ ಎಲ್ಲಾ ಕೇಸ್ ನಡೆದಿರೋದು ನೆನಪಿದೆ. ನನಗೆ ಡೀಟೆಲ್ಸ್ ಗೊತ್ತಿಲ್ಲ ನನಗೆ .ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ ನಾವೇನ್ ಮಾಡ್ತೀವಿ. ದ್ವೇಷ ರಾಜಕಾರಣ ಇರೋದು ಅವರ DNA ಅಲ್ಲಿ.ಮೈಸೂರಲ್ಲಿ ಏನೇನು ಮಾತಾಡಿದ್ರು, ಬೇರೆ ಕಡೆ ಏನ್ ಏನ್ ಮಾತಾಡಿದ್ರು. ಅವರ ತಂದೆ ಏನೇನು ಮಾತಾಡಿದ್ರು.ನನ್ಮೇಲೆ ಏನೇನು ಕೇಸ್ ಹಾಕಿಸಿದ್ರು. ನನ್ನ ತಂಗಿ, ನನ್ ಹೆಂಡ್ತಿ , ನನ್ ತಮ್ಮ ಮೇಲೆಲ್ಲ. ಅದಿರು ಕಳ್ಳತನ ಮಾಡಿದ್ವಿ ಎಂದು. ನಮಗೂ ಬಳ್ಳಾರಿಗೂ ಸಂಬಂಧ ಇಲ್ಲ .ಹಾಕಿಸಿರಲಿಲ್ಲಾ ಅವರದ್ದಲ್ವಾ ದ್ವೇಷ. ಸುಮ್ಮನೆ ಆಯ್ತು ಎಂದು ಜೊತೆಗೆ ಸರ್ಕಾರ ಮಾಡಿದ್ದೆವು. ಮರ್ಯಾದೆ ಇಂದ ಇದ್ರೆ ಒಳ್ಳೇದು ಅವರಿಗೂ ಕ್ಷೇಮ.ರಾಮನಗರ ಹೆಸರು ಬರಬಾರದು ಎಂದು ಯಾರನ್ನ ಭೇಟಿ ಮಾಡಿದ್ರು ಗೊತ್ತು.ಏನ್ ಮಾಡಿದ್ರು ಎನ್ನೋದು ಗೊತ್ತು. ಕಾನೂನಲ್ಲಿ ಸಂವಿಧಾನದಲ್ಲಿ ಯಾರನ್ನ ಕೇಳ್ಬೇಕು ಎಂದಿಲ್ಲ. ಒಂದು ಸರ್ಕ್ಯೂಲರ್ ಇತ್ತು ಇನ್ಪಾರ್ಮ್ ಮಾಡಬೇಕೆಂದು .ಅದಕ್ಕೆ ಇನ್ಪಾರ್ಮ್ ಮಾಡಿದ್ದಾರೆ ಅಷ್ಟೇ.ಮಾಡೋದು ಹೇಗೆ ಎಂದು ಗೊತ್ತು ನಮಗೆ.ರಾಮನಗರ ಬದಲಾವಣೆ ನಾವು ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.