ಮನೆ Latest News ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಕಲ್ಯಾಣೋತ್ಸವ ಮತ್ತು ಸೀಮಂತ ಕಾರ್ಯಕ್ರಮ

ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಕಲ್ಯಾಣೋತ್ಸವ ಮತ್ತು ಸೀಮಂತ ಕಾರ್ಯಕ್ರಮ

0

ಬೆಂಗಳೂರು: ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಕಲ್ಯಾಣೋತ್ಸವ ಮತ್ತು ಸೀಮಂತ ಕಾರ್ಯಕ್ರಮ ಬೆಂಗಳೂರಿನ ಸೋಂಪುರ ಗ್ರಾಮದಲ್ಲಿ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಯದುವೀರ್ ಒಡೆಯರ್, ಡಾ.ಸಿ.ಎನ್.ಮಂಜುನಾಥ್, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರುದ್ರೇಶ್ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಡಲೆಕಾಯಿ ಪರಿಷೆ ಪ್ರತಿ ವರ್ಷ ಆಯೋಜನೆ ಮಾಡ್ತಾ ಬರುತ್ತಿದ್ದಾರೆ. ನಾನು ಶಿಕಾರಿಪುರ ಕ್ಷೇತ್ರದ ಶಾಸಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಮಸ್ಯೆಗಳಿಗೆ ಬೆನ್ನು ತೋರಿಸಿ ಹೋಗದೆ ದಿಟ್ಟವಾಗಿ ಎದುರಿಸುವ ಶಕ್ತಿ ದೇವರು ಕೊಡುತ್ತಾನೆ ಎಂದರು.

ಬಿಜೆಪಿ ಮುಖಂಡ ರುದ್ರೇಶ್ ಮಾತನಾಡಿ ಸುತ್ತಮುತ್ತಲಿನ ಗ್ರಾಮಗಳಿಂದ ಕಾರ್ಯಕ್ರಮಕ್ಕೆ ಗೃರ್ಭಿಣಿ ಸ್ತ್ರೀಯರು ಆಗಮಿಸಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಗೃರ್ಭಿಣಿ ಸ್ತ್ರೀಯರಿಗೆ ಸೀಂಮತ ಮಾಡಲು ವಿಜಯೇಂದ್ರರವರು ಸಲಹೆ ನೀಡಿದ್ರು. ಸರ್ಕಾರದ ಪರಿಸ್ಥಿತಿ ಮನಗಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು.

ಇನ್ನು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲ ಜನತೆಗೆ ಮಕರ ಸಂಕ್ರಾಂತಿಯ‌ ಶುಭಾಶಯಗಳು. ನಾಡಿಗೆ ಒಳ್ಳೆಯ ಮಳೆ ಬೆಳೆಯಾಗಿ ಸಮೃದ್ಧವಾಗಿ ರೈತ ನೆಮ್ಮದಿಯಿಂದ ಬದುಕುವ ಒಳ್ಳೆಯ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಗರ್ಭಿಣಿ ಸ್ತ್ರೀಯರ ಸೀಮಂತ ಕಾರ್ಯಕ್ರಮ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರಿಗೆ ಅಗತ್ಯ ಇದೆಯೊ ಅವರಿಗೆ ಒಳ್ಳೆಯ ಕೆಲಸ ಮಾಡುವ ಅಗತ್ಯವಿದೆ. ನಿರಂತರವಾಗಿ ಈ ರೀತಿಯ ಕೆಲಸ ಆಗಬೇಕು. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು.

ಇತ್ತ  ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಂದ ಮಹಿಳೆಯರಿಗೆ ಹಬ್ಬದ ಬಾಗಿನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜರಾಜೇಶ್ವರಿನಗರ ಕ್ಷೇತ್ರದ ಲಕ್ಷ್ಮೀದೇವಿ ನಗರದಲ್ಲಿ ಬಾಗಿನ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬಾಗಿನ ವಿತರಣೆ ಮಾಡಿದರು.