ಮನೆ ಪ್ರಸ್ತುತ ವಿದ್ಯಮಾನ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ನೋಟಿಸ್ ವಿಚಾರ: ಉಪಚುನಾವಣೆಯಲ್ಲಿ ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದ ಸಚಿವ...

ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ನೋಟಿಸ್ ವಿಚಾರ: ಉಪಚುನಾವಣೆಯಲ್ಲಿ ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದ ಸಚಿವ ಹೆಚ್ ಸಿ ಮಹಾದೇವಪ್ಪ

0

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ನೋಟಿಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸಚಿವ ಹೆಚ್ ಸಿ ಮಹಾದೇವಪ್ಪ ಪ್ರತಿಕ್ರಿಯಿಸಿದ್ದಾರೆ.  ಉಪಚುನಾವಣೆಯಲ್ಲಿ ಇದೊಂದು ವ್ಯವಸ್ಥಿತವಾದ ಷಡ್ಯಂತ್ರ  ಎಂದ ಸಚಿವ ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರೋದನ್ನು  ಪತ್ರಿಕೆಯಲ್ಲಿ ‌ನೋಡಿದೆ. ಸಿಎಂ ಅವರು ಕೂಡ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.ಅವರು ಕೂಡ ಲಾ ಪಾಯಿಂಟ್ ಸಿಟಿಜನ್ . ಲಾ ಇಸ್ ಲಾ, ಬೇರೇ ವ್ಯವಸ್ಥೆ ಇದೆ?. ಕಾನೂನು, ಸೆಕ್ಷನ್ ಬದಲಾವಣೆ ಆಗುತ್ತಾ?.ಕೆಲವರ‌ ಭಾವನೆಗಳು, ಊಹೆಗಳು. ಉಪಚುನಾವಣೆಯಲ್ಲಿ ಇದೊಂದು ವ್ಯವಸ್ಥಿತವಾದ ಷಡ್ಯಂತ್ರ. ೪೦ ವರ್ಷ ದಲ್ಲಿ ಕಪ್ಪುಚುಕ್ಕೆ ಇಲ್ದೇ ಅಧಿಕಾರ ನಡೆಸಿದ್ದಾರೆ ಎಂದರು.

ಇನ್ನು ಸಿಎಂರನ್ನು ಮಾನಸಿಕವಾಗಿ ಕುಗ್ಗಿಸೋ ಯತ್ನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾರೂ ಏನೇ ಮಾಡಿದರೂ ಗಟ್ಟಿಯಾಗಿದ್ದಾರೆ. ಈಗಲೂ ಇರ್ತಾರೆ ಮುಂದೆಯೂ ಇರ್ತಾರೆ. ಯಾರೇ ಏನೂ ಮಾಡಿದರೂ ಅವರು ಗಟ್ಟಿಯಾಗಿದ್ದಾರೆ. ಎಥಿಕಲೀ ಮಾರಲೀ ಅವರು ಸ್ಟ್ತಾಂಗ್ ಇದ್ದಾರೆ ಎಂದಿದ್ದಾರೆ.

 

ಇನ್ನು ಇದೇ ವೇಳೆ ಮಾತನಾಡಿದ ಅವರು ನಾನು ಚನ್ನಪಟ್ಟಣದಲ್ಲಿ ಇರುತ್ತೇನೆ.. ನಂತ್ರ ಮೈಸೂರಿಗೆ ಗುತ್ತೇನೆ. ಉಪಚುನಾವಣೆ ‌ಪ್ರತಿಷ್ಠೆನಾ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಎಲ್ಲರೂ ಗೆಲ್ಲಬೇಕು ಅಂತನೇ ಹೋರಾಟ ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಬೈಎಲೆಕ್ಷನ್ ದಿಕ್ಸೂಚಿ ಆಗೋಕೆ‌‌ ಹೇಗೆ ಸಾಧ್ಯ?. ಆರೋಪಗಳು ಸತ್ಯವಲ್ಲ. ವಾಟ್ ಇಸ್ ದಿ‌ ಪ್ರೋಗ್ರಾಮ್. ಮೂರು ಕ್ಷೇತ್ರ‌ ಕೂಡ ಗೆಲ್ಲುತ್ತೇವೆ ಎಂದಿದ್ದಾರೆ.

 

ಇನ್ನು ಎಐಸಿಸಿ ಅಧ್ಯಕ್ಷರ ಕಿವಿಮಾತು ವಿಚಾರದ ಬಗ್ಗೆ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷರ ಒಟ್ಟಾಗಿ ಇರೋಕೆ ಹೇಳಿದ್ದರು. ಎಲ್ಲರೂ ಒಗ್ಗಟಾಗಿದ್ದೇವೆ. ಇನ್ನು ಒಮಾನಾ ಗೆ ಪತ್ರ ಬರೆದಿರುವ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಗೊತ್ತಿಲ್ಲ ನನಗೆ. ಚನ್ನಪಟ್ಟಣ ಬೈಎಲೆಕ್ಷನ್ ಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ಅವರು ಚನ್ನಪಟ್ಟಣದಲ್ಲಿ ವಾತಾವರಣ ಚನ್ನಾಗಿದೆ. ವಾತಾವರಣ ಕಾಂಗ್ರೆಸ್ ಪರವಾಗಿದೆ. ಯೋಗೇಶ್ವರ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನೂರಾರು ಕೆರೆಗಳನ್ನ ತುಂಬಿಸಿದ್ದಾರೆ. ನಾನೇ ಅಲ್ಲಿಗೆ ಹೋಗಿ ಉದ್ಘಾಟನೆ ಮಾಡಿದ್ದೇವೆ. ಕೆರೆ ತುಂಬಿಸುವ ಹೋರಾಟವನ್ನ ಯೋಗೇಶ್ವರ್ ಮಾಡಿದ್ದಾರೆ

 

ಅವರಿಗೆ ಜನರ ಮೇಲೆ ಒಲುವಿದೆ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾರ ಕ್ಷೇತ್ರವೂ ಯಾರ ಭದ್ರಕೋಟೆನೂ ಅಲ್ಲ. ಜನರ ಭದ್ರಕೋಟೆ, ಪೊಲಿಟಿಕಲ್ ಪಾರ್ಟಿಯ ಭದ್ರಕೋಟೆ ಅಲ್ಲ. ದೇವೇಗೌಡರಿಂದ ಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ಅವರು  ಐ ಡೋಂಟ್ ವಾಂಟ್ ಟು ಕಮೆಂಡ್ . ಅವರ ಆರೋಗ್ಯ ನಮಗೆ ಮುಖ್ಯ ಎಂದಿದ್ದಾರೆ.