ತುಮಕೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ. ಇದರ ನಡುವೆ ಪ್ರಕರಣದ ಮೂವರು ಆರೋಪಿಗಳಿಗೆ ಸೆಪ್ಟಂಬರ್ 23 ರಂದು ಜಾಮೀನು ಮಂಜೂರಾಗಿತ್ತು. ಪ್ರಕರಣದ ಎ15, ಎ16, ಎ17 ಆರೋಪಿಗೆ ಜಾಮೀನು ಮಂಜೂರಾಗಿತ್ತು. ಆದರೆ ಜಾಮೀನು ಮಂಜೂರಾದ್ರೂ ಮೂವರು ಆರೋಪಿಗಳು ಜೈಲಿನಲ್ಲೇ ಇರುವಂತಾಗಿತ್ತು
ಪ್ರಕರಣದ ಎ15 ನಿಖಿಲ್ ನಾಯಕ್, ಎ 17 ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಮೊನ್ನೆ ಬೇಲ್ ಮಂಜೂರು ಮಾಡಿತ್ತು. ಎ 16 ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನೀಡುವ ವೇಳೆ ಇವರಿಗೆ ಕೋರ್ಟ್ ಷ್ಯೂರಿಟಿ ಕೇಳಿದೆ. ಆದರೆ ಷ್ಯೂರಿಟಿ ನೀಡಲು ಸಾಧ್ಯವಾಗದೇ ಇರೋದರಿಂದ ಆರೋಪಿಗಳು ಕಳೆದ 10 ದಿನಗಳಿಂದ ಜೈಲಿನಲ್ಲೇ ಇದ್ದರು. ಆದರೆ ಮೊನ್ನೆ ಅಂದರೆ ಅಕ್ಟೋಬರ್ 1 ರಂದು ಆರೋಪಿಗಳಿಗೆ ಷ್ಯೂರಿಟಿ ಸಿಕ್ಕಿದೆ. 10 ದಿನಗಳಿಂದ ಆರೋಪಿಗಳ ಕುಟುಂಬದವರು ಷ್ಯೂರಿಟಿಗಾಗಿ ಪರದಾಡುತ್ತಿದ್ದರು.ಕೊನೆಗೂ ಮೊನ್ನೆ ಷ್ಯೂರಿಟಿ ಸಿಕ್ಕಿದೆ. ಷ್ಯೂರಿಟಿ ಸಿಕ್ಕ ಬೆನ್ನಲ್ಲೇ ಕೋರ್ಟ್ ಜಾಮೀನು ಪತ್ರವನ್ನು ಮೇಲ್ ಮೂಲಕ ಜೈಲಾಧಿಕಾರಿಗಳಿಗೆ ರವಾನಿಸಿದ್ದು ಅವರು ಎಲ್ಲಾ ಕಾನೂನೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಗಳನ್ನು ರಿಲೀಸ್ ಮಾಡಿದ್ದಾರೆ.
ಇನ್ನು ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮದವರ ಜೊತೆ ಮಾತನಾಡಲು ಆರೋಪಿಗಳು ನಿರಾಕರಿಸಿದ್ದಾರೆ. ನಾವು ಕೇಸ್ ಬಗ್ಗೆ ಏನು ಹೇಳಲ್ಲ. ಏನು ಹೇಳ ಬೇಕೋ ಅದನ್ನು ತನಿಖೆ ವೇಳೆ ಹೇಳಿದ್ದೇವೆ ಅಂತಾ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೇ ಜೈಲಿನಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ. ಆರಾಮವಾಗಿ ಇದ್ದೆವು ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಆರೋಪಿಗಳು ಒಬ್ಬೊಬ್ಬರಾಗಿಯೇ ಬೆಲ್ ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಪವಿತ್ರ ಗೌಡ ಅವರು ಪೊಲೀಸರು ಚಾರ್ಚ್ ಶೀಟ್ ಸಲ್ಲಿಕೆಗೂ ಮುನ್ನವೇ ಪವಿತ್ರ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಪವಿತ್ರಗೌಡ ಒಬ್ಬರೇ ಈ ಪ್ರಕರಣದಲ್ಲಿ ಮಹಿಳೆ. ಅಲ್ಲದೇ ಆಕೆಗೆ ಆರೋಗ್ಯ ಸಮಸ್ಯೆಯಿದೆ. ಹಾಗಾಗಿ ಜಾಮೀನು ನೀಡಿ ಎಂದು ಆಕೆಯ ಪರವಾಗಿ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಸೆಪ್ಟಂಬರ್ 25ಕ್ಕೆ ಮುಂದೂಡಿಕೆಯಾಗಿದೆ.
ಇದರ ಬೆನ್ನಲ್ಲೇ ಈ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್, ಎ16 ಕೇಶವ ಮೂರ್ತಿ. ಎ 17 ನಿಖಿಲ್ ನಾಯಕ್ ಗೆ ಕೋರ್ಟ್ ಜಾಮೀನು ನೀಡಿದೆ. ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದರೆ, ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ. ಕೊಲೆ ಪ್ರಕರಣದಲ್ಲಿ ಈ ಮೂವರು ನೇರವಾಗಿ ಭಾಗಿಯಾಗದೇ ಇರೋದರಿಂದ ಇವರಿಗೆ ಜಾಮೀನು ದೊರೆತಿದೆ.











