ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ಸಮರ ತಾರಕಕ್ಕೇರಿದೆ. ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಸಿ ಗೆ ಜೆಡಿಎಸ್ ದೂರು ನೀಡಿದೆ.ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಡಿಜಿಪಿ ಚಂದ್ರಶೇಖರ್ ವಿರುದ್ಧ ದೂರು ನೀಡಿದ್ದಾರೆ
ಕುಮಾರಸ್ವಾಮಿ ಅವರನ್ನು ಎಡಿಜಿಪಿ ಚಂದ್ರಶೇಖರ್ ಪತ್ರದ ಮೂಲಕ ಹಂದಿಗೆ ಹೋಲಿಸಿದ್ದರು. ಹೀಗಾಗಿ ಕೇಂದ್ರ ಸಚಿವರಿಗೆ ಅಪಮಾನ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಎ ಮಂಜು ಚಂದ್ರಶೇಖರ್ ಹೇಳಿಕೆ ಖಂಡನೀಯ.ವಿಚಾರಣೆ ಮಾಡಿದ ವರದಿ ಕೊಡಬೇಕು. ಆದರೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವರದಿ ಲೀಕ್ ಮಾಡೋದಲ್ಲ.ಅವರೇ ವರದಿ ಲೀಕ್ ಮಾಡಿದ್ರಾ..? ಅಥವಾ ಬೇರೆಯವರು ಲೀಕ್ ಮಾಡಿದ್ರಾ ಗೊತ್ತಿಲ್ಲ. ಕೂಡಲೇ ಚಂದ್ರಶೇಖರ್ ಕ್ಷಮೆಯಾಚನೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದು ಕುಮಾರಸ್ವಾಮಿಗೆ ಆದ ಅವಮಾನ ಅಂತ ಖುಷಿ ಪಡೋದಲ್ಲ.ನಾಳೆ ನಿಮಗೂ ಆಗಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಎಡಿಜಿಪಿ ಚಂದ್ರಶೇಖರ್ ಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ವಾರ್ನಿಂಗ್ ಕೊಟ್ಟಿದ್ದಾರೆ.ಚಂದ್ರಶೇಖರ್ ದೇವೇಗೌಡರ ಕುಟುಂಬ ಎಂಥದ್ದು ಅವರ ವ್ಯಕ್ತಿತ್ವ ಏನು ಅಂತ ಅವರ ಮಾವನ ಬಳಿ ಕೇಳಿಕೊಳ್ಳಲಿ.ಬೇರೆ ರಾಜ್ಯದಿಂದ ಬಂದು ಕರ್ನಾಟಕದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿದ್ದಾರೆ ಹೇಗೆ ಗೌರವ ಕೊಡಬೇಕು ಎಂದು ಕಲಿತುಕೊಳ್ಳಬೇಕು.ಯಾರೋ ಒಬ್ಬ ಮಾತನಾಡಿದರೆ ಕುಮಾರಸ್ವಾಮಿಗೆ ಏನು ಆಗುವುದಿಲ್ಲ.ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಸ್ವಾಮಿ ಬಗ್ಗೆ ಒಬ್ಬ ಅಧಿಕಾರಿ ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ತ್ವರಿತವಾಗಿ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ದೂರು ನೀಡಿದ್ದೇವೆ. ಎಡಿಜಿಪಿ ಚಂದ್ರಶೇಖರ್ ಮೇಲೆ ಸರಿಯಾದ ರೀತಿ ಕ್ರಮ ಆಗದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ನಾಟಕದ ಮಾತುಗಳನ್ನು ಕಾಂಗ್ರೆಸ್ನವರು ಆಡಬಾರದು ಇವತ್ತು ಇವರಿಗೆ ಆಗಿದೆ ನಾಳೆ ನಿಮಗೂ ಮಾತನಾಡುತ್ತಾರೆ. ಸಿಎಂ ಅವರ ಮೇಲೆ ನಮಗೆ ಗೌರವ ಇದೆ ಸಿದ್ದರಾಮಯ್ಯನವರೇ ಹೇಳುತ್ತಿದ್ದರು. ನಮಗೆ ಅಧಿಕಾರಿಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಹೇಳುವ ಮೊದಲು ಸರ್ಕಾರ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಚಂದ್ರಶೇಖರ್ ದೇವೇಗೌಡರ ಕುಟುಂಬ ಎಂಥದ್ದು ಅವರ ವ್ಯಕ್ತಿತ್ವ ಏನು ಅಂತ ಅವರ ಮಾವನ ಬಳಿ ಕೇಳಿಕೊಳ್ಳಲಿ. ಕಾನೂನು ರೀತಿಯಲ್ಲಿ ಏನಿದೆ ಅದನ್ನು ಮಾಡಬೇಕು ಅದು ಬಿಟ್ಟು ಈ ರೀತಿಯಾಗಿ ಕುಮಾರಸ್ವಾಮಿ ಮಾತನಾಡಬಾರದು ಎಂದಿದ್ದಾರೆ.
ಬೇರೆ ರಾಜ್ಯದಿಂದ ಬಂದು ಕರ್ನಾಟಕದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿದ್ದಾರೆ ಹೇಗೆ ಗೌರವ ಕೊಡಬೇಕು ಎಂದು ಕಲಿತುಕೊಳ್ಳಬೇಕು.ಯಾರೋ ಒಬ್ಬ ಮಾತನಾಡಿದರೆ ಕುಮಾರಸ್ವಾಮಿಗೆ ಏನು ಆಗುವುದಿಲ್ಲ. ಆದರೆ ಇಂಥ ಅಧಿಕಾರಿಗಳಿಗೆ ಅಂಕುಶ ಹಾಕಬೇಕು ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಪತ್ರ ಬರೆದ ವಿಚಾರ; ಚಂದ್ರಶೇಖರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ ಬರೆದ ವಿಚಾರಕ್ಕೆ ಸಂಬಂಧಪಟ್ಟಂತೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಅವರೇನು ಪತ್ರ ಬರೆದಿದ್ದಾರೆ, ಅದರಲ್ಲಿ ಅವರೇನು ಉಲ್ಲೇಖಿಸಿದ್ದಾರೆ.ಅದಕ್ಕೆ ಹಲವರು ಪ್ರೇರಣೆ ನೀಡಿದ್ದಾರೆ.ಸರ್ಕಾರ ಅಧಿಕಾರ ದುರ್ಬಳಕೆ ಮಾಡ್ಕೊಳ್ತಿದೆ.ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡ್ಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ನಮಗೆ ದ್ವೇಷದ ರಾಜಕಾರಣ ತೋರಿಸಿದ್ದಾರೆ.ನಾವೂ ಮುಂದುವರೆಸಬೇಕಾ ಅದನ್ನ?.ಈ ಪತ್ರದ ಹಿಂದೆ ಸಾಕಷ್ಟು ಜನರ ಕೈವಾಡ ಇದೆ.ಹಿಂದೆ ನಿಂತು ಹಲವರು ಪ್ರೇರಣೆ ನೀಡಿದ್ದಾರೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ ಆಗಿದ್ದಾರೆ.ಇದು ಬಹಳ ದಿನ ನಡೆಯಲ್ಲ, ಇದ್ಯಾವುದಕ್ಕೂ ನಾವು ಭಯ ಪಡಲ್ಲ.ಅವರು ಇಂಥ ನೂರು ಪತ್ರ ಬರೆಯಲಿ, ನಾವು ಭಯ ಪಡೊಲ್ಲ, ಅಧಿಕಾರ ಶಾಶ್ವತ ಅಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.