ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಬಾಸ್ ದರ್ಶನ್ ಜೈಲು ಸೇರಿ ಇದೇ ತಿಂಗಳ 22ಕ್ಕೆ ಮೂರು ತಿಂಗಳಾಯತ್. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇಪ್ಪತ್ತು ದಿನಗಳಾಯ್ತು. ಇನ್ನು ಬಳ್ಳಾರಿ ಜೈಲು ಸೇರಿದಾಗಿನಿಂದ 3-4 ಬಾರಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ, ಪುತ್ರ ವಿನೀಶ್ ದರ್ಶನ್ ಅವರು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.ಇನ್ನು ಕಳೆದ ಕೆಲವು ದಿನಗಳಿಂದ ಡಿ ಬಾಸ್ ದರ್ಶನ್ ಅವರನ್ನು ಭೇಟಿಯಾಗಲು ಮೀನಾ ತೂಗುದೀಪ ಅವರು ಬರ್ತಾರೆ ಅನ್ನೋ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಅವರ ಭೇಟಿ ಪದೇ ಪದೇ ಮುಂದೂಡಿಕೆಯಾಗಿತ್ತು. ಕೊನೆಗೂ ಇಂದು ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಮೀನಾ ತೂಗುದೀಪ ಅವರು ಬಳ್ಳಾರಿಯವರೆಗೂ ಬಂದು ಮಗನನ್ನು ಭೇಟಿಯಾಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ, ಸಹೋದರಿ ದಿವ್ಯ, ಬಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ದರ್ಶನ್ ಅವರ ಭೇಟಿಗಾಗಿ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಇನ್ನು ಮಗನಿಗಾಗಿ ತಾಯಿ ಮೀನಾ ತೂಗುದೀಪ ಅವರು ಮನೆಯಿಂದ ತಿನಿಸುಗಳನ್ನು ಮಾಡಿ ತಂದಿದ್ದರು. ಡ್ರೈ ಫ್ರೂಟ್ಸ್, ಸ್ವೀಟ್ಸ್ ಎಲ್ಲವನ್ನು ತಂದಿದ್ದರು.
ಇನ್ನು ತಾಯಿ, ಅಕ್ಕ, ಬಾವ ಎಲ್ಲ ಬಂದಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅವರನ್ನು ನೋಡೋದಕ್ಕೆ ಡಿ ಬಾಸ್ ದರ್ಶನ್ ಖುಷಿಯಿಂದಲೇ ಸಂದರ್ಶಕರ ಕೊಠಡಿಗೆ ಓಡೋಡಿ ಬಂದ್ರು. ಹಿಂದೆಂದೂ ನೋಡದ ನಗು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮನೆಯವರನ್ನು ನೋಡಿ ದರ್ಶನ್ ಭಾವುಕರಾದ್ರಂತೆ. ತಾಯಿ ಕೂಡ ದರ್ಶನ್ ಅವರನ್ನು ನೋಡಿ ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತು ಮನೆಯವರೊಂದಿಗೆ ಮಾತನಾಡಿ ದರ್ಶನ್ ತಮ್ಮ ಸೆಲ್ ಗೆ ತೆರಳಿದ್ದಾರೆ.
ಇಂದು ನಟ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ ದರ್ಶನ್, ನಟ ಧನ್ವೀರ್ ಹಾಗೂ ಆಪ್ತ ಹೇಮಂತ್
ಬಳ್ಳಾರಿ; ಇಂದು ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್, ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಭೇಟಿಯಾಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಭೇಟಿ ವೇಳೆ 30 ನಿಮಿಷಗಳ ಕಾಲ ಜೈಲು ಸಂದರ್ಶಕರ ಕೊಠಡಿಯಲ್ಲಿ ದರ್ಶನ ಪತ್ನಿ ಹಾಗೂ ಸ್ನೇಹಿತರೊಂದಿಗೆ ಮಾತನಾಡಿದ್ದಾರೆ.ಕಳೆದ ಬಾರಿ ತೀರಾ ಕೋಪದಲ್ಲಿದ್ದಂತೆ ಕಾಣುತ್ತಿದ್ದ ದರ್ಶನ್ ಅವರು ಈ ಬಾರಿ ಪತ್ನಿಯ ಭೇಟಿಗೆ ಬಂದಂತಹ ವೇಳೆ ಅತ್ಯಂತ ಸೌಮ್ಯ ಸ್ವಭಾವದಲ್ಲಿ ಕಾಣಿಸಿದ್ದಾರೆ.
ಇನ್ನು ಪತ್ನಿಯ ಭೇಟಿಗೆ ಬಂದ ವೇಳೆ ದರ್ಶನ್ ವಕೀಲರು ಕೊಟ್ಟ ಪತ್ರ ಹಿಡಿದು ಬಂದ ಬಂದಿದ್ದಾರೆ.ನಿನ್ನೆ ವಕೀಲರು ಕೋರಿಯರ್ ಮೂಲಕ ಕಳಿಸಿದ್ದ ದರ್ಶನ್ ಗೆ ಪತ್ರ ಕಳುಹಿಸಿದ್ದರು. ಇನ್ನು ದರ್ಶನ್ ಕಂಡ ಕೂಡಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಭಾವುಕರಾಗಿದ್ದಾರೆ.ದರ್ಶನ್ ಅವರನ್ನು ನೋಡಿ ಕಣ್ಣೀರಾಕಿದ ಧನ್ವೀರ್ ಹಾಗೂ ಹೇಮಂತ್ ಕಣ್ಣೀರು ಹಾಕಿದ್ದಾರೆ.ಈ ವೇಳೆ ಧನ್ವೀರ್ ಹಾಗೂ ಹೇಮಂತ್ ರನ್ನ ಆರೋಪಿ ದರ್ಶನ್ ಸಮಾಧಾನ ಪಡಿಸಿದ್ದಾರೆ.
ಪತಿಗಾಗಿ ವಿಜಯಲಕ್ಷ್ಮೀ ಬ್ಯಾಗ್ನಲ್ಲಿ ಟೂತ್ಪೇಸ್ಟ್ , ಸಂತೂರ್ ಸೋಪ್, ಹಣ್ಣು, ಬೇಕರಿ ತಿಂಡಿ ತಂದಿದ್ದರು ಎನ್ನಲಾಗಿದೆ.ಜೈಲು ಸಂದರ್ಶಕರ ಕೊಠಡಿಯಲ್ಲಿ 30 ನಿಮಿಷಗಳ ಕಾಲ ದರ್ಶನ್ ಮಾತನಾಡಿದ್ದು ಬೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಾತನಾಡಿದ ಬಳಿಕ ಪತ್ನಿ ತಂದ ವಸ್ತುಗಳನ್ನು ಹಿಡಿದು ದರ್ಶನ್ ತಮ್ಮ ಸೆಲ್ ನತ್ತ ತೆರಳಿದ್ದಾರೆ ಎನ್ನಲಾಗಿದೆ.











