ಮನೆ ಪ್ರಸ್ತುತ ವಿದ್ಯಮಾನ ಬಳ್ಳಾರಿ ಜೈಲಿನಲ್ಲಿ ಡಿ ಬಾಸ್ ದರ್ಶನ್ ಎನ್ನೆಲ್ಲಾ ಕೆಲಸ ಮಾಡ್ತಿದ್ದಾರೆ ಗೊತ್ತಾ?

ಬಳ್ಳಾರಿ ಜೈಲಿನಲ್ಲಿ ಡಿ ಬಾಸ್ ದರ್ಶನ್ ಎನ್ನೆಲ್ಲಾ ಕೆಲಸ ಮಾಡ್ತಿದ್ದಾರೆ ಗೊತ್ತಾ?

0

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರಿಗೆ ಅಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಸದ್ಯ ಬಳ್ಳಾರಿ ಜೈಲಿನಲ್ಲಿರುನ ನಟ ದರ್ಶನ್ ಅವರನ್ನು ಅಲ್ಲಿ ವಿಶೇಷ ಭದ್ರತಾ ಸೆಲ್ ನಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರಕ್ಕಿಂತ ಬಳ್ಳಾರಿ ಜೈಲು ಸ್ಟ್ರಿಕ್ಟ್ ಇದು ಡಿ ಬಾಸ್ ದರ್ಶನ್ ಗೆ ಉಸಿರು ಬಿಗಿ ಹಿಡಿದ ಅನುಭವವಾಗುತ್ತಿದೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ  ಹಾಗೂ ಇಬ್ಬು ವಕೀಲರು ಮೊನ್ನೆ ಡಿ ಬಾಸ್ ನ ಭೇಟಿಯಾಗಿದ್ದರು.

ಇನ್ನು ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನ್ ಮಾಡ್ತಿದ್ರು ಅನ್ನೋದಕ್ಕೆ ವೈರಲ್ ಆದ ಫೋಟೋ ವೀಡಿಯೋಗಳೇ ಉತ್ತರ ನೀಡಿದ್ದವು. ಆದರೆ ಬಳ್ಳಾರಿ ಜೈಲಿನಲ್ಲಿ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಗಿದೆ. ಬಳ್ಳಾರಿ ಜೈಲಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ದರ್ಶನ್ ನಡೆದುಕೊಳ್ಳುತ್ತಿದ್ದಾರಂತೆ. ಅಲ್ಲದೇ ಜೈಲಾಧಿಕಾರಿಗಳ ಸೂಚನೆಯಲ್ಲಿ ಅವರ ಸೆನ್ ನಲ್ಲಿರುವ ಶೌಚಾಲಯವನ್ನು ಕ್ಲೀನ್ ಮಾಡಿದ್ದಾರಂತೆ. ಅಲ್ಲದೇ ಅವರ ಬಟ್ಟೆಯನ್ನು ಅವರೇ ವಾಶ್ ಮಾಡಿ ಕೊಳ್ಳುತ್ತಿದ್ದು ಸಾಮಾನ್ಯ ಕೈದಿಯಂತೆ ಡಿ ಬಾಸ್ ಜೈಲಿನಲ್ಲಿ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದಾರಂತೆ ಅಲ್ಲದೇ ಎಲ್ಲರ ಜೊತೆ ದರ್ಶನ್ ಅರು ಹೊಂದಿಕೊಳ್ಳುಲು ಪ್ರಯತ್ನಿಸುತ್ತಾರಂತೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಸೆಪ್ಟಂಬರ್ 17ರವರೆಗೆ ವಿಸ್ತರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಬೇರೆ ಬೇರೆ ಜೈಲುಗಳಲ್ಲಿ ಇರುವ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟಂಬರ್ 17ರವರೆಗೆ ವಿಸ್ತರಣೆಯಾಗಿದೆ. ಈ ಬಗ್ಗೆ ಇಂದು ಅಂದರೆ ಶುಕ್ರವಾರ 24ನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನದ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನೆಲೆ ಬಳ್ಳಾರಿ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ದೀಪಕ್, ತುಮಕೂರು ಜೈಲಿನಿಂದ ಅನುಕುಮಾರ್, ಜಗದೀಶ್ ಹಾಗೂ ರವಿ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 17 ಮಂದಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ಸರದಿಯಂತೆ ಎಲ್ಲ ಆರೋಪಿಗಳ ಹೆಸರು ಕೂಗಿ ಅವರ ಇರುವಿಕೆಯನ್ನು ಖಚಿತಪಡಿಸಿಕೊಂಡರು.

ಈ ವೇಳೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಪ್ರಕರಣದ ಸಂಪೂರ್ಣ ಚಾರ್ಜ್‍ಶೀಟ್ ಅನ್ನು ನಮಗೆ ಒದಗಿಸಿಲ್ಲ. ಡಿಜಿಟಲ್ ಎವಿಡೆನ್ಸ್ ಸಹ ಪೊಲೀಸರು ಕೊಟ್ಟಿಲ್ಲ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿಂತೆ ಸಿಆರ್‍ಪಿಸಿ 164 ಅಡಿ ಹೇಳಿಕೆ ನೀಡಿದ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ ಎಂದು ಜಡ್ಜ್ ಮುಂದೆ ಹೇಳಿದರು.

ಇದಕ್ಕೆ ಎಸ್‍ಪಿಪಿ ಪರ ವಕೀಲ ಪ್ರಸನ್ನ ಕುಮಾರ್ ಉತ್ತರಿಸಿ, ಮುಂದಿನ ವಾರ ಡಿಜಿಟಲ್ ಎವಿಡೆನ್ಸ್‌ ಗಳನ್ನು ಸಲ್ಲಿಸಲಾಗುವುದು ಎಂದರು. ಇದೇ ವೇಳೆ, ಟೆಕಿಕ್ನಲ್ ಎವಿಡೆನ್ಸ್ ನೀಡಿದ ಬಳಿಕ ಸೆಷನ್ಸ್ ಕೋರ್ಟ್‍ಗೆ ವರ್ಗಾಯಿಸುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದರು. ಆಗ, ಸಾಕ್ಷ್ಯ ಸಲ್ಲಿಸಿದ ಬಳಿಕವೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು ಎಂದು ಹೇಳಿದ ನ್ಯಾಯಾಧೀಶರು, ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದರು.