ಮನೆ Latest News ಇಬ್ಬರು ವಕೀಲರ ಜೊತೆ ನಟ ದರ್ಶನ್ ಅವರನ್ನು ಭೇಟಿಯಾದ ವಿಜಯಲಕ್ಷ್ಮೀ ದರ್ಶನ್

ಇಬ್ಬರು ವಕೀಲರ ಜೊತೆ ನಟ ದರ್ಶನ್ ಅವರನ್ನು ಭೇಟಿಯಾದ ವಿಜಯಲಕ್ಷ್ಮೀ ದರ್ಶನ್

0

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ  ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹೋದರ ದಿನಕರ್ ತೂಗುದೀಪ್ ಇಬ್ಬರು ವಕೀಲರೊಂದಿಗೆ ಭೇಟಿಯಾದರು. ಎಂದಿನಂತೆ ವಿಜಯಲಕ್ಷ್ಮೀ ದರ್ಶನ್ ಪತಿಗಾಗಿ ಡ್ರೈಪ್ರೂಟ್ಸ್, ಬಿಸ್ಕೀಟ್ಸ್ ಹಾಗೂ ದೇವರ ಪ್ರಸಾದ ತಂದಿದ್ದರು. ಅಲ್ಲದೇ ಅಣ್ಣನಿಗಾಗಿ ದಿನಕರ್ ಚಾರ್ಜ್‌ಶೀಟ್ ಸಮೇತ ಆಗಮಿಸಿದ್ದರು.

ಮಧ್ಯಾಹ್ನ 12-15ಕ್ಕೆ ದರ್ಶನ್ ಭೇಟಿಗಾಗಿ ಜೈಲಿನ ಒಳಗೆ ಹೋದ ವಿಜಯಲಕ್ಷ್ಮೀ ದರ್ಶನ್ , ದಿನಕರ್ ತೂಗುದೀಪ್ ಹಾಗೂ ಇಬ್ಬರು ವಕೀಲರು ಸುಮಾರು 1.05 ಗಂಟೆಗಳ ಕಾಲ ದರ್ಶನ್ ಜೊತೆಗೆ ಮಾತನಾಡಿದರು. ಇನ್ನು ದರ್ಶನ್ ವಿಜಯಲಕ್ಷ್ಮೀ ಭೇಟಿಯಾಗುವ ವೇಳೆ ತೀರಾ ಟೆನ್ಶನ್ ನಲ್ಲಿದ್ದಂತೆ ಕಂಡು ಬಂದ್ರು. ಅಲ್ಲದೇ ಮಾಧ್ಯಮದವರನ್ನು ನೋಡಿ ದರ್ಶನ್ ಮಿಡಲ್ ಫಿಂಗರ್ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೀಡಿಯೋ ಕ್ಯಾಮೆರಾ ಕಣ್ಣಲ್ಲೂ ಸೆರೆಯಾಗಿದೆ. ದರ್ಶನ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಕೀಲರನ್ನು ಭೇಟಿಯಾಗುತ್ತಿದ್ದಂತೆ ದರ್ಶನ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ.

ಇನ್ನು ದರ್ಶನ್ ಭೇಟಿ ಬಳಿಕ ಮಾತನಾಡಿದ ದರ್ಶನ್ ಪರ ವಕೀಲ ಸುನೀಲ್ ಚಾರ್ಜ್ ಶೀಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ.ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಮಾತನಾಡಿಲ್ಲ.ಜೈಲು ಚೇಂಜ್ ಮಾಡೋ ಬಗ್ಗೆಯೂ ಚರ್ಚೆ ನಡೆಸಿಲ್ಲ.ಚಾರ್ಜ್ ಶೀಟ್ ನಲ್ಲಿ ಏನಿದೆಯೋ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ.ಕೆಲವೊಂದಿಷ್ಟು ಡೌಟ್ಸ್ ಇತ್ತು ಅದರ ಕ್ಲಾರಿಪಿಕೇಷನ್ ತಗೊಂಡಿದ್ದೇವೆ.ಕೇಸ್ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇವೆ ಎಂದ್ರು.

ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಹಿನ್ನೆಲೆ: ಮನೆಯೂಟಕ್ಕೆ ಸಲ್ಲಿಸಿದ್ದ ಅರ್ಜಿ ವಾಪಾಸ್ ಪಡೆದ ಡಿ ಬಾಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಅಲ್ಲಿನ ಊಟದಿಂದಾಗಿ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ಹಾಗಾಗಿ ಮನೆಯೂಟಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿ ಹೈಕೋರ್ಟ್ ಗೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಪದೇ ಪದೇ ಆ ಅರ್ಜಿಯ ವಿಚಾರಣೆ ಮುಂದೂಡಿಕೆಯಾಗುತ್ತಲೇ ಇತ್ತು. ಅಲ್ಲದೇ ಎಲ್ಲಾ ಕೈದಿಗಳಿಗೆ ಒಂದೇ ಆಹಾರ ನೀಡಲಾಗುತ್ತೆ. ನೀವು ಸೆಲೆಬ್ರೆಟಿ ಅಂತಾ ಬೇರೆ ಆಹಾರ ನೀಡಲು ಆಗಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಇಂದು ಕೂಡ ಅರ್ಜಿಯ ವಿಚಾರಣೆ ನಡೆಯೋದಿತ್ತು.ಆದರೆ ಅದಕ್ಕೂ ಮುನ್ನವೇ ದರ್ಶನ್ ಪರ ವಕೀಲರು ಆ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆ ಅವರು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹಾಗಾಗಿ ಸದ್ಯ ಬಳ್ಳಾರಿ ಜೈಲಿನಲ್ಲಿ ಮನೆಯೂಟ ಮಾಡಲು ದರ್ಶನ್ ಗೆ ಸಾಧ್ಯವಿಲ್ಲ. ಈ ಹಿನ್ನೆಲೆ ದರ್ಶನ್ ಪರವಾದ ವಕೀಲರು ಮನೆಯೂಟಕ್ಕಾಗಿ ದರ್ಶನ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ ಎನ್ನಲಾಗಿದೆ.