ಬೆಂಗಳೂರು; ನೀಟ್ ಪರೀಕ್ಷೆ ಮುಂದೂಡಿಕೆಯಾಗಿರೋದು ನಮ್ಮ ದೇಶದಲ್ಲಿ ನಡೆದ ಬಹಳ ದುರುಂತ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನೀಟ್ ಪರೀಕ್ಷೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಬಹಳ ದುರಂತ. ಮಕ್ಕಳು ಕಷ್ಟ ಪಟ್ಟು ಭವಿಷ್ಯಕ್ಕೆ ಓದಿಕೊಂಡಿರುತ್ತಾರೆ. ಇದು ಒಂದು ಬುಲ್ಡೊಜರ್ ಸಂಪ್ರದಾಯವಾಗಿದೆ. ಇದು ಎನ್ ಟಿ ಎ ಮಾಡ್ತಿರುವ ಪರೀಕ್ಷೆ. ಇದು ಆರನೇ ಸರಿ ಪೇಪರ್ ಲೀಕ್ ಆಗ್ತಿರೋದು. ರಿಸರ್ವ್ ಬ್ಯಾಂಕ್ ನಿಂದ ಹಣವನ್ನು ತಗೊಂಡು ಹೋಗಬೇಕಾದ್ರೆ ಸೆಕ್ಯುರಿಟಿ ಹಾಕ್ತಿರಾ. ದೇಶದ ಮಕ್ಕಳ ಭವಿಷ್ಯದ ವಿಚಾರಕ್ಕೆ ಸೆಕ್ಯೂರಿಟಿ ಬೇಡ್ವಾ.ಬಹಳ ಜವಾಬ್ದಾರಿಯುತದಿಂದ ಪರೀಕ್ಷೆ ನಡೆಸಬೇಕು. ಎನ್ ಟಿ ಎ ಗೆ ಏನ್ ಯೋಗ್ಯತೆ ಇದೆ. ಮಾಧ್ಯಮದಲ್ಲಿ ಅಧಿಕಾರಿಯೊಬ್ಬರು ಕ್ಯಾನ್ಸಲ್ ಮಾಡಿದ್ದೀವಿ ಅಂತಾರೆ. ಇದು ಮಕ್ಕಳ ಮೇಲೆ ಒತ್ತಡ ಬೀಳಲ್ವಾ..? ಎಂದು ಪ್ರಶ್ನಿಸಿದ್ದಾರೆ.
ನಾವು ಮೂರು ಪರೀಕ್ಷೆ ಮಾಡೋದ್ರಿಂದ ಮಕ್ಕಳಿಗೆ ಅನುಕೂಲ ಆಗುತ್ತೆ. ಪ್ರಧಾನಿ ಮೋದಿಯವರು ಪರೀಕ್ಷೆ ಪೇ ಚರ್ಚೆ ಮಾಡ್ತಾರೆ. ಪುಕ್ಸಟೆ ಪಬ್ಲಿಸಿಟಿ ತಗೊತ್ತಿದ್ದಾರಲ್ಲಾ ಅದನ್ನ ನಾವು ಖಂಡಿಸ್ತೀವಿ.ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಿಗ್ತಿಲ್ಲಾ, ಅವರ ಅಧಿಕಾರಿಗಳು ಸಿಕ್ತಿದ್ದಾರೆ ಎಂದ ಅವರು ಮಿತ ಬಳಕೆ ಬಗ್ಗೆ ನರೇಂದ್ರ ಮೋದಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದಕ್ಕೆ ನರೇಂದ್ರ ಮೋದಿಯವರು ಉತ್ತರ ಕೊಡಬೇಕು. ದೇಶದ ಒಳಗೆ ಡಿಕ್ಟೇಟರ್ ಶಿಪ್ ತಂದಿದ್ದಾರೆ. ಈಗ ಅವರ ಬಳಿ ಹಣ ಇಲ್ಲ. ಉದ್ಯೋಗ ಖಾತ್ರಿ ತೆಗೆದು ಗೊಂದಲ ಮಾಡೋದು. ಅಂತರಾಷ್ಟ್ರೀಯ ಪ್ರಯಾಣ ಮಾಡೊದಕ್ಕೆ, ದೊಡ್ಡ ದೊಡ್ಡ ಉದ್ಯಮಿದಾರರ ಮದುವೆಗೆ ಹೋಗ್ತಾರಾಲ್ಲ. ಆ ಉದ್ದಿಮೆದಾರರಿಗೆ ಹೇಳಿದ್ದಾರಾ ಬಂಗಾರ ತಗೊಬೇಡಿ ಅಂತಾ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವರಿಗೆ ತಲೆ ಇಲ್ಲಾ ಬುದ್ದಿ ಇಲ್ಲಾ ಅಂತ ಬಿಜೆಪಿ ನಾಯಕರು ಹೇಳ್ತಿದ್ರು. ಯಾರು ಯಾರು ಹೇಳಿಕೆಯನ್ನ ಕೊಟ್ಟಿದ್ರು. ನಿಮ್ಮ ಕೇಂದ್ರ ಶಿಕ್ಷಣ ಸಚಿವರು ದಡ್ಡರಾ.? ಹೇಳಿಕೆ ಕೊಟ್ಟವರು ನೀವು ದಡ್ಡರಾ ತಿಳಿದುಕೊಳ್ಳಿ.ಮಕ್ಕಳ ಭವಿಷ್ಯವನ್ನ ರಾಜಕೀಯಕ್ಕೆ ಬಳಸಿಕೊಳ್ಳಲ್ಲ ಎಂದು ಗುಡುಗಿದ್ದಾರೆ.











