ಬೆಂಗಳೂರು; ನರೇಂದ್ರ ಮೋದಿ ಯಾವುದೇ ನಿರ್ಬಂಧ ಹಾಕಿಲ್ಲ, ಮಿತ ವ್ಯಯ ಅಂತಾ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ನರೇಂದ್ರ ಮೋದಿ ದೇಶದಲ್ಲಿ ಮಿತವ್ಯಯದ ಕರೆ ಕೊಟ್ಟಿದ್ದಾರೆ. ಪ್ರಪಂಚದ ಆರ್ಥಿಕ ಸ್ಥಿತಿ ಕೂಡಾ ಹದಗೆಡುತ್ತಿದೆ. ಬಹುತೇಕ ಎಲ್ಲಾ ದೇಶಗಳಲ್ಲಿ ನಿರ್ಬಂಧ ಹಾಕಿದ್ದಾರೆ. ಆದರೆ ನರೇಂದ್ರ ಮೋದಿ ಯಾವುದೇ ನಿರ್ಬಂಧ ಹಾಕಿಲ್ಲ, ಮಿತ ವ್ಯಯ ಅಂತಾ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ನವರು ಎದ್ನೋ ಬಿದ್ನೋ ಅಂತಾ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಧಮ್, ಗಟ್ಸ್ ಇದ್ದರೆ ಕಾಂಗ್ರೆಸ್ ನವರು ಮಾತಾಡಿ ನೋಡೋಣ. ನೆಹರು ಹೇಳಿದಂತೆ ಮೋದಿ ನಿಮ್ಮ ಮನೆಯಲ್ಲಿದ್ದ ಚಿನ್ನ ತಂದು ಕೊಡಿ ಅಂತಾ ಹೇಳಿದ್ದಾರಾ?. ನೀವು ಮನೆ ಹಾಳರು ಅಂದು ಮನೆಯಲ್ಲಿದ್ದ ಚಿನ್ನ ಕೊಡಿ ಅಂದ್ರಿ. ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶಕ್ಕಾಗಿ ಒಂದು ಹೊತ್ತು ಊಟ ಬಿಡಿ ಎಂದಿದ್ದರು. ಚಿನ್ನ ಖರೀದಿ ಕಡಿಮೆ ಮಾಡಿ ಅಂತಾ ಚಿದಂಬರಂ, ವೀರಪ್ಪ ಮೊಯಿಲಿ ಹೇಳಿದ್ದರು. ಕಾಂಗ್ರೆಸ್ ಪಾರ್ಟಿ ರೀತಿ ಊಟ ಬಿಡಿ, ಚಿನ್ನ ಕೊಡಿ ಅಂತಾ ಮೋದಿ ಹೇಳಿಲ್ಲ. ಇದು ಒತ್ತಡ ಅಲ್ಲ, ವಿನಂತಿ ಮಾಡಿದ್ದಾರೆ ಎಂದಿದ್ದಾರೆ.
ನಾವು ಕೂಡಾ ಪ್ರಧಾನಿ ಮೋದಿ ಮಾತಿಗೆ ಸ್ಪಂದಿಸುತ್ತೇವೆ. ನಾವು ಬಳಸುವ ವಾಹನಗಳ ಬಳಕೆ ಕಡಿಮೆ ಮಾಡುತ್ತೇವೆ. ಬೆಂಗಾವಲು ವಾಹನ ದಿನ ಬಿಟ್ಟು ದಿನ ಬಳಸುವ, ಅಗತ್ಯವಿದ್ದಾಗ ಮಾತ್ರ ಬಳಸುವ ಬಗ್ಗೆ ಚಿಂತಿಸುತ್ತಿದ್ದೇವೆ.30 ರಿಂದ 50 % ರಷ್ಟು ವಾಹನ ಬಳಕೆ ಕಡಿಮೆ ಮಾಡುತ್ತೇವೆ. ನಮ್ಮ ಮನೆಯಲ್ಲಿ ಎಣ್ಣೆ ಬಳಕೆ ಕೂಡಾ ಕಡಿಮೆ ಮಾಡುವಂತೆ ನಾನು ಸೂಚಿಸಿದ್ದೇನೆ.ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಅಂತಹ ಲಕ್ಷಣ ಇಲ್ಲ.ಹಾಗಾಗಿ ಈಗ ಮೋದಿ ಜಾಗರೂಕರಾಗುವಂತೆ ಹೇಳಿದ್ದಾರೆ ಎಂದಿದ್ದಾರೆ.
ಎಲ್ಲಿಯವರೆಗೆ ಸಂಕಷ್ಟ ಇರುತ್ತದೋ ಅಲ್ಲಿಯವರೆಗೆ ನಾವು ಪ್ರಾಮಾಣಿಕತೆವಾಗಿ ಫಾಲೋ ಮಾಡುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಜಾರಿ ಬಸ್ ಡೇ ಕಾರ್ಯಕ್ರಮ ಮಾಡಿದ್ದೆವು.ಕರ್ನಾಟಕ ಸರ್ಕಾರ ಸ್ವಲ್ಪ ಮಾನವೀಯತೆ ತೋರಿಸಲಿ, ಇದು ದೇಶದ ಪ್ರಶ್ನೆ. ಯುದ್ಧದ ಸಂದರ್ಭದಲ್ಲಿ ಚಿಲ್ಲರೆ ಬುದ್ದಿ ಕಾಂಗ್ರೆಸ್ ಬಿಡಬೇಕು.ಪಾಪ ರಾಹುಲ್ ಗಾಂಧಿಗೆ ಗೊತ್ತಾಗಲ್ಲ. ಮನುಷ್ಯ ಒಳ್ಳೆಯವನು, ಆದರೆ ಬುದ್ದಿ ಕಡಿಮೆ. ನೀವೆಲ್ಲಾ ಹಿರಿಯರಿದ್ದೀರಿ, ಹಾಗೆಲ್ಲಾ ಮಾಡಬೇಡಿ. ಅವರಿಗೆ ಸಾಮಾನ್ಯ ಜ್ಞಾನ ಕಡಿಮೆ ಇದೆ.ತಮಿಳುನಾಡು ಸರ್ಕಾರ ರಚನೆ ವೇಳೆ ಪಾಪಾ ಒಂದೂವರೆ ಗಂಟೆ ಕುಳಿತೇ ಇದ್ದ.ಯಾರೂ ಆತನ ಕಡೆ ತಿರುಗಿಯೂ ನೋಡಲಿಲ್ಲ, ಅಬ್ಬೇಪಾರಿ ಪರಿಸ್ಥಿತಿ ಆಗಿತ್ತು ಎಂದು ತಿಳಿಸಿದ್ದಾರೆ.











