ಮನೆ Latest News ಜಿಲೆಟಿನ್ ಕಡ್ಡಿ ಸಿಕ್ಕ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ; ಗೃಹ ಸಚಿವ ಡಾ ಜಿ ಪರಮೇಶ್ವರ್...

ಜಿಲೆಟಿನ್ ಕಡ್ಡಿ ಸಿಕ್ಕ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಜಿಲೆಟಿನ್ ಕಡ್ಡಿ ಸಿಕ್ಕ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಅದನ್ನು ತನಿಖೆ ಮಾಡುತ್ತಾ ಇದ್ದೇವೆ. ಒಬ್ಬ ವ್ಯಕ್ತಿ ಕರೆ ಮಾಡಿ ಆ ಜಾಗದಲ್ಲಿ ಬಾಂಬ್ ಇಟ್ಟಿದ್ದಾರೆ ಎಂದಿದ್ದಕ್ಕೆ ಅವನನ್ನು ಅರೆಸ್ಟ್ ಮಾಡಿದ್ದಾರೆ. ಅವನ ತನಿಖೆಯೂ ಆಗುತ್ತಿದೆ. ಹೋಗುವ ದಾರಿಯಲ್ಲಿ ಸಿಕ್ಕ ಜಿಲೆಟಿನ್ ಕಡ್ಡಿ  ಎನೆಲ್ಲ ಸಿಕ್ಕಿದೆ ಅದನ್ನ ತನಿಖೆ ಮಾಡ್ತಿದ್ದಾರೆ. ಎನ್ ಐ ಎ ಕೂಡ ತನಿಖೆ ಮಾಡಲು ಕೇಳಿದ್ದಾರೆ. ಅವರಿಗೂ ತನಿಖೆ ಮಾಡಲು ಕೊಡುತ್ತೇವೆ. ಪ್ರಧಾನಿ ಬರೋ ಕಾರ್ಯಕ್ರಮಕ್ಕೆ ಹೈ ಲೆವಲ್ ಸೆಕ್ಯೂರಿಟಿ ಇರುತ್ತೆ. ನಾವು ಹಾಗೂ ಕೇಂದ್ರ ಸೆಕ್ಯೂರಿಟಿ ಕೊಡುತ್ತೇವೆ.ರಾಜ್ಯ ಸರ್ಕಾರಕ್ಕೂ ಸೂಚನೆ ಬಂದಿರುತ್ತದೆ, ಭದ್ರತೆ ನೀಡಿರುತ್ತವೆ.ಕಾರ್ಯಕ್ರಮಕ್ಕೆ ಬರುವ ಎರಡು ಗಂಟೆ ಮುಂಚೆ ಅಂದರೆ ಬೆಳಿಗ್ಗೆ 9 ಗಂಟೆಗೆ ಜಿಲೆಟಿನ್ ಕಂಡು ಹಿಡಿದಿದ್ದಾರೆ.ಇದು ಒಳ್ಳೆಯ ಕೆಲಸ. ಟೆರರಿಸಂಗೆ ಲಿಂಕ್ ಇರುವ ವಿಚಾರ ಈಗಲೇ ಹೇಳೋದಕ್ಕೆ ಬರಲ್ಲ.ತನಿಖೆ  ಆಗಲಿ ನೋಡೋಣ ಎಂದಿದ್ದಾರೆ.

ಜಿರಾಂಜಿ ಕಾಯ್ದೆ ಅನುಷ್ಠಾನ ವಿಚಾರದ ಬಗ್ಗೆ ಮಾತನಾಡಿದ ಅವರು ಮನಮೋಹನ್ ಸಿಂಗ್ ಜಾರಿಗೆ ತಂದಿದ್ರು. ಉದ್ಯೋಗ ಒದಗಿಸುವ ಯೋಜನೆ ಅದು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಒದಗಿಸುವ ಯೋಜನೆ. ಕೇಂದ್ರ ಯೋಜನೆ ಬೆಂಬಲಿಸುತ್ತಲೇ ಬಂದಿತ್ತು. ಆದರೆ ಈಗ ಬೆಂಬಲಿಸುತ್ತಿಲ್ಲ. ನ್ಯಾಷನಲ್ ಪ್ರೋಗ್ರಾಂ. ಪ್ಲಾಗ್ ಶಿಪ್ ಪ್ರೋಗ್ರಾಂ ಇದು. ಎಲ್ಲಾ ರಾಜ್ಯಗಳಿಗೆ ಕೊಡುವ ಪ್ರೋಗ್ರಾಂ. ದುರುದ್ದೇಶ ಇಟ್ಟುಕೊಂಡು ಮಾಡ್ತಿದ್ದಾರೆ ಗೊತ್ತಿಲ್ಲ. ಯೋಜನೆಗೆ ಸಪೋರ್ಟ್ ಮಾಡುವ ಚರ್ಚೆ ಆಗಿದೆ. ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಯೋಜನೆ ನಿಲ್ಲಿಸೋಕೆ ಭ್ರಷ್ಟಾಚಾರ ಕಾರಣ ಅಂತಾರೆ. ಹಲವು ಕಾರಣ ನೀಡಿದ್ದಾರೆ.ಇದನ್ನ ಆಡಳಿತಾತ್ಮಕವಾಗಿ ಸರಿಪಡಿಸಬೇಕು. ಭ್ರಷ್ಟಾಚಾರ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಿ. ಎಲ್ಲಾ ರಾಜ್ಯದಲ್ಲೂ ಘಟನೆ ನಡೆದಿರಬಹುದು. ಆಡಳಿತಾತ್ಮಕವಾಗಿ ಸರಿಪಡಿಸಬೇಕು. ಯೋಜನೆಯನ್ನೇ ಹತ್ತಿಕ್ಕುವ ಕೆಲಸ ಆಗಬಾರದು ಎಂದು ತಿಳಿಸಿದ್ದಾರೆ.

ಶೃಂಗೇರಿಯಲ್ಲಿ ಮತ್ತೆ ರಾಜೇಗೌಡರಿಗೆ ಗೆಲುವು ವಿಚಾರದ ಬಗ್ಗೆ ಮಾತನಾಡಿದ ಅವರು ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದನ್ನ ನೋಡಬೇಕು. ಅಲ್ಲಿ ರಿ ಕೌಂಟ್ ಮಾಡಿದಾಗ 250 ಮತ ಹೆಚ್ಚು ಬರುತ್ತೆ ಅಂದರೆ ಏನು ಅರ್ಥ. ಕೌಂಟಿಂಗ್ ಸರಿಯಾಗಿಲ್ಲ ಎಂದು ಅರ್ಥ ಅಲ್ವಾ?. ಅಧಿಕಾರಿಗಳ ಮೇಲೆ ಕ್ರಮ ಆಗಬೇಕಲ್ವಾ?. ಸುಪ್ರೀಂ ಕೋರ್ಟ್  ಹಿಂದೆ ಕೌಂಟ್ ಮಾಡಿದ್ದು ಸರಿ ಎಂದು ತಡೆ ನೀಡಿದ್ದಾರೆ. ಟಾಂಪರಿಂಗ್ ಆಗಿರೋ ದೂರಿನ  ಬಗ್ಗೆ ರಾಜ್ಯ ಪೊಲೀಸರು ತನಿಖೆ ಮಾಡ್ತಿದ್ದಾರೆ. ಎಫ್ ಎಸ್ ಎಲ್ ನಲ್ಲೂ ಚೆಕ್ ಮಾಡ್ತಾರೆ ಎಂದಿದ್ದಾರೆ.

ಜಿಬಿಎ ಚುನಾವಣೆಗೆ ಹಿಂದೇಟು ವಿಚಾರದ ಬಗ್ಗೆ ಮಾತನಾಡಿದ ಅವರು ಆದಷ್ಟು ಬೇಗ ಚುನಾವಣೆ ಆಗಬೇಕು ಎಂದು ನಮ್ಮೆಲ್ಲರ ಅಭಿಲಾಷೆ. ಪ್ರಕ್ರಿಯೆಯಲ್ಲಿ ತಪ್ಪಾದಾಗ ಸರಿಪಡಿಸಬೇಕಲ್ವಾ?. ಜನಗಣತಿ ಪ್ರಾರಂಭವಾಗಿರೋವಾಗ ಚುನಾವಣೆ ಮಾಡಬೇಕು ಎಂದಾಗ ಅಧಿಕಾರಿಗಳನ್ನು ಒದಗಿಸಬೇಕು. ಅಷ್ಟೊಂದು ಸಂಖ್ಯೆಯಲ್ಲಿ ಅಧಿಕಾರಿಗಳನ್ನು ಕ್ರೋಢಿಕರಿಸೋದು ಕಷ್ಟ ಅಂತ ಹೇಳಿದ್ದಾರೆ. ಚುನಾವಣೆ ಮಾಡಬೇಕಾದದ್ದು ನಮ್ಮ ಧರ್ಮ. ಊರಿಗೆ ಮುಂಚೆನೇ ಕುಲಾವಿ ಹೊಲಿಸಿದ್ರೆ ಹೇಗೆ ಅಂತಾರೆ. ಇವರು ಚುನಾವಣೆ ಮುಂಚೆನೇ ರಿಸಲ್ಟ್ ಹೇಳಿದ್ರೆ ಹೇಗೆ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರಧಾನಿ ಕರೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡೋದು ನಮ್ಮ ಆದ್ಯತೆ. ಮೆಟ್ರೋಪಾಲಿಟನ್ ಸಿಟಿಯಲ್ಲಿ ಸಾರ್ವಜನಿಕ ಸಾರಿಗೆ ಹೆಚ್ಚು ಮಾಡಬೇಕು. ಅದನ್ನ ಹೆಚ್ಚು ಬಳಸಬೇಕು ಎಂದು ನಾವು ಹೇಳುತ್ತೇವೆ. ಆದ್ರೆ ಅಷ್ಟು ಮೂಲಭೂತ ಸೌಕರ್ಯಗಳು ಹೆಚ್ಚು ಆಗಬೇಕಲ್ವಾ?. ತುಮಕೂರು ಮೆಟ್ರೋಗೆ ಪೀಸಿಬಿಲಿಟಿ ವರದಿ ತರಿಸಿಕೊಂಡಿದ್ದೇವೆ. ಒಂದು ವಾರದಲ್ಲಿ ಡಿಪಿಆರ್ ಕೂಡ ರೆಡಿ ಆಗುತ್ತದೆ. 60 -70 ಕಿಮೀ ದೂರ ಮೆಟ್ರೋ ಸಂಪರ್ಕ ಕೊಟ್ಟರೆ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ. ತುಮಕೂರಿನಿಂದಲೇ ಲಕ್ಷ ಜನ ಓಡಾಡುತ್ತಿದ್ದು ಅಲ್ಲೇ ಮನೆ ಮಾಡಿಕೊಂಡು ಓಡಾಡಬಹುದು. ಮೆಟ್ರೋ ದರದ ನ್ಯಾಯೋಚಿತವಾಗಿ ಇರಬೇಕು.ಇತರ ರಾಜ್ಯಕ್ಕೆ ಹೋಲಿಸಿ ಪ್ರೈಸ್ ಇರಬೇಕಾಗುತ್ತದೆ. ನಾವೇ ಹೆಚ್ಚು ಇಡೋದಕ್ಕೆ ಆಗೋದಿಲ್ಲ. ಪ್ರತಿ ಕಿ.ಮೀ ಗೆ ಸ್ಟ್ಯಾಂಡರ್ಡ್ ಪ್ರೈಸ್ ಮಾಡಬೇಕಾಗುತ್ತದೆ ಎಂದಿದ್ದಾರೆ.