ಮನೆ Latest News ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಹಾಡಿ ಹೊಗಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಹಾಡಿ ಹೊಗಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

0

ಹಾಸನ; ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಡಿ ಹೊಗಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮಿಳುನಾಡಿನಲ್ಲಿ ಒಂದು ಹೊಸ ಶಕ್ತಿ ಡಿಎಂಕೆ-ಎಐಎಡಿಎಂಕೆ ಎರಡನ್ನು ಹಿಂದೆ ಹಾಕಿ, ಕಾಂಗ್ರೆಸ್‌ನ್ನು ಹಿಂದೆ ಹಾಕಿ ಕೆ.ಕಾಮರಾಜ್ ಅವರಿಂದ ಹಿಡಿದು ಎಂಎಜಿಆರ್, ಕರುಣಾನಿಧಿ, ಜಯಲಲಿತಾ ಇವರೆಲ್ಲ ನಾಯಕತ್ವವನ್ನು ಹಿಂದಕ್ಕೆ ಸರಿಸಿ ವಿಜಯ ಅವರು ಬಹಳ ಮುಂದೆ ಹೋಗಿದ್ದಾರೆ. ಆದ್ದರಿಂದ ಅವರಿಗೆ ಬೆಂಬಲ ಕೊಡ್ತಿದ್ದಾರೆ. ವಿಜಯ್ ಅವರು ಎಲ್ಲೇ ಹೋದರು ನಲವತ್ತು ಲಕ್ಷ, ಐವತ್ತು ಲಕ್ಷ ಜನ ಸೇರ್ತಾರೆ. ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಆ ಎತ್ತರಕ್ಕೆ ಬೆಳೆದಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಬಗ್ಗೆ ನನಗೆ ಗೌರವ ಇದೆ. ತಮಿಳುನಾಡಿಗೂ ನಮಗೂ ಸಮಸ್ಯೆಗಳಿವೆ. ಅದನ್ನು ಬಗೆಹರಿಸುವಂತಹ ಕಾಲದಲ್ಲಿ ಕುಳಿತು ಮಾತನಾಡುವ ಸಂದರ್ಭ ಬರಬಹುದು ಎಂದಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಬಿಟ್ಟು ಟಿವಿಕೆಗೆ ಬೆಂಬಲ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಅವರ ಪಕ್ಷದ ಟಿಕೆಟ್ ಹಂಚುವಾಗ ಸ್ಟಾಲಿನ್‌ಗೂ ಅವರಿಗು ಪರಸ್ಪರ ವ್ಯತ್ಯಾಸ ಬಂತು. ಅದು ಅವರ ವೈಯುಕ್ತಿಕವಾದ ವಿಷಯಗಳು. ಕರುಣಾನಿಧಿ ಇದ್ದಾಗ ಎಷ್ಟು ಸೀಟ್ ಕೊಡುತ್ತಿದ್ದರು. ಸ್ಟಾಲಿನ್ ಏನು ಮಾಡಿದ್ರು ಅದೆಲ್ಲಾ ಚರ್ಚೆ ಮಾಡಿ ಉಪಯೋಗ ಇಲ್ಲ ಎಂದಿದ್ದಾರೆ.