ಬೆಂಗಳೂರು; 3 ವರ್ಷಗಳ ಬಹಳ ಹೋರಾಟದ ನಡುವೆ ನಿನ್ನೆ ಜಯ ಸಿಕ್ಕಿದೆ ಎಂದು ಶೃಂಗೇರಿಯ ನೂತನ ಶಾಸಕ ಜೀವರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು 3 ವರ್ಷಗಳ ಬಹಳ ಹೋರಾಟದ ನಡುವೆ ನಿನ್ನೆ ಜಯ ಸಿಕ್ಕಿದೆ. ಎಣಿಕೆ ಬಗ್ಗೆ ಎರಡು ಅರ್ಜಿಗಳನ್ನ ಕೊಟ್ರಿ. ಕಡಿಮೆ ಮತದ ಸೋಲು ಆದ್ರೆ ರಿಟರ್ನಿಂಗ್ ಆಫೀಸರ್ ಮರು ಎಣಿಕೆ ಮಾಡ್ಬೇಕು. ನಮ್ಮ ಅರ್ಜಿಗೆ ಪ್ರತಿಕ್ರಿಯೆ ಕೊಡುವ ಮೊದಲೇ ಅವರಿಗೆ ಫಾರಂ ಕೊಟ್ರು. ಹೈ ಕೋರ್ಟ್ ಕೇಸ್ ಗೆ ವಜಾಗೊಳಿಸುವ ಪ್ರಯತ್ನ ಮಾಡಿದ್ರು. ಸುಪ್ರೀಂ ಕೋರ್ಟ್ ಗೂ ಹೋಗಿದ್ರು ಮತ್ತೆ ಹೈಕೋರ್ಟ್ ಗೆ ಹೋಗಿದ್ರು. ಅವರಿಗೆ ಅನುಮಾನ ಇದ್ದ ಕಾರಣ ಸ್ಟೇ ಕೊಡಿ, ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಅಂತ ಹೇಳಿದ್ರು. ಎಣಿಕೆ ಮುಗಿಯುವ ಮುನ್ನವೇ ವಿಜಯೋತ್ಸವ ಮಾಡಿದ್ರು. ನಾವು ಕೈ ಬಿಟ್ಟು ಹೋಗಲಿ ಅಂತ ಪ್ರಯತ್ನ ಮಾಡಿದ್ರು. ಅವರಿಗೆ ಬಂದ ಮತ ಡಬಲ್ ಆಗಿ ಟ್ಯಾಂಪರಿಂಗ್ ಆಗಿದೆ ಅಂದ್ರು ಎಂದಿದ್ದಾರೆ.
ಅಂಚೆ ಮತ ಮೊದಲಿಗೆ ಎಣಿಕೆ ಆಗಬೇಕು. ಬೆಳಗ್ಗೆ ಶುರು ಮಾಡಿ ಸಂಜೆಯವರೆಗೂ ಯಾಕೆ ಎಣಿಕೆ ಇಟ್ಟಿಕೊಂಡಿದ್ದರು?.ರಾಜ್ಯದಲ್ಲಿ 135 ಸೀಟ್ ಬಂದಾಗ ಹಾಗೇ ಫಲಿತಾಂಶ ನೀಡಿದ್ದಾರೆ.25ಕ್ಕೆ 25 ಇನ್ವ್ಯಾಲಿಡ್ ಮತಗಳು ಬಂದ್ವು. ಎಫ್ ಐಆರ್ ಕಾನೂನು ಬಾಹಿರವಾಗಿದೆ.ತನಿಖೆಯನ್ನ ಚುನಾವಣಾ ಆಯೋಗ ಮಾಡ್ಬೇಕು. ಹೆದರಿಸುವ ಕೆಲಸ ಮಾಡಬಾರದು.ಉಪಮುಖ್ಯಮಂತ್ರಿಗಳು ಆ ರೀತಿ ಮಾತನಾಡಬಾರದಿತ್ತು. ಸ್ಟ್ರಾಂಗ್ ರೂಂ ಓಪನ್ ಮಾಡಿದಾಗ ಟ್ರಂಕ್ ಗಳ ಬಗ್ಗೆ ಕೇಳಿದ್ವಿ. ವಿವಿ ಪ್ಯಾಡ್ ಗಳ ಬೀಗ ಒಡೆದುಕೊಂಡು ಬಿದ್ದಿದ್ದವು. ಅವೆಲ್ಲವೂ ವೀಡಿಯೋ ಇದೆ ಎಂದು ತಿಳಿಸಿದ್ದಾರೆ.
ಡಿಕೆಶಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಟ್ಯಾಂಪರಿಂಗ್ ಮಾಡಿದ್ದೀನಿ ಅಂತಾರೆ.ಸಿಸಿ ಕ್ಯಾಮರಾ 24 ಗಂಟೆಯೂ ಕೆಲಸ ಮಾಡುತ್ತೆ. ಕೋರ್ಟ್ ಗೆ ಹೋಗಲಿ ಎದುರಿಸೋಣ ಎಂದಿದ್ದಾರೆ.











