ಕೋಲಾರ; ಮುಂದಿನ ತಿಂಗಳಲ್ಲಿ ನಾವೆಲ್ಲರೂ ಸಂತಸದಿಂದ ಯಡಿಯೂರಪ್ಪೋತ್ಸವದಲ್ಲಿ ಭಾಗಿಯಾಗುತ್ತೇವೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ನವರು 1978 ರಿಂದ ಶಿಕಾರಿಪುರ ಮುನಿಸಿಪಲ್ ಸದಸ್ಯರಾದಾಗಿನಿಂದಲೂ ಬಲ್ಲೆ. ಅವರು ಬಿಜೆಪಿಯ ರಾಜ್ಯಾದ್ಯಕ್ಷರಾಗಿದ್ದಾಗ ನಾನು ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷನಾಗಿದ್ದೆ. ಅವರು ರಾಜ್ಯದಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿದ್ದಾಗ ಮಾಡಿದ ಹೋರಾಟ ನನಗೆ ಸ್ಪೂರ್ತಿ ದಾಯಕ. ಮಹಿಳೆಯರಿಗಾಗಿ ಭಾಗ್ಯಲಕ್ಷ‌್ಮಿ ಯೋಜನೆ ತಂದ ಧೀಮಂತ ನಾಯಕ.ಅವರ ರೈತಪರ ಹೋರಾಟಗಳ, ಪಾದಯಾತ್ರೆ, ಜಾಥಾಗಳು, ರ್ಯಾಲಿಗಳಲ್ಲಿ ನಾನು ಭಾಗವಹಿಸಿದ್ದೇನೆ. ಇದು ರಾಜಕೀಯೇತರ ಕಾರ್ಯಕ್ರಮ. ರಾಜ್ಯದ ಎಲ್ಲ ಜಿಲ್ಲೆಗಳಿಂದ 10 ಲಕ್ಷ ಮಂದಿ ಚಿತ್ರದುರ್ಗಕ್ಕೆ ಬರುತ್ತಾರೆ. ಇದು ನಮಗೆಲ್ಲಾ ಪ್ರೇರಣೆ ನೀಡುವ ಕಾರ್ಯಕ್ರಮ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಮಾಲೂರು ತಾಲೂಕಿನ ಅಗಲಕೋಟೆಯಲ್ಲಿ ಶೈಕ್ಷಣಿಕ ಉದ್ದೇಶಿತ ಭೂಮಿ ಪರಭಾರೆ ಆಗುತ್ತಿದೆ.ರಿಯಲ್ ಎಸ್ಟೇಟ್ ಉದ್ಯಮಿಗಳು ಅದನ್ನು ಲಪಟಾಯಿಸಲು ಮುಂದಾಗಿದ್ದಾರೆ. ವಿಧಾನಸಭಾ ಅರ್ಜಿ ಪರಿಶೀಲನಾ ಸಮೀತಿಯಲ್ಲಿ ಪರಿಶೀಲನೆ ಮಾಡುತ್ತೇನೆ. ಈ ಕುರಿತು ಕೋಲಾರ ಜಿಲ್ಲಾಧಿಕಾರಿ ಭೇಟಿ ಚರ್ಚಿಸಿದ್ದೇನೆ.ಮೂಲದಾನಿ ಶ್ರೀನಿವಾಸುಲು ಉದ್ದೇಶ ಈಡೇರಬೇಕು. ಭೂಮಿ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಕೆ ಆಗಬೇಕು. ವಿಧಾನಪರಿಷತ್ ನಲ್ಲಿ ಕೂಡ ಇದನ್ನು ಪ್ರಸ್ಥಾಪಿಸುತ್ತೇವೆ. ಜಿಲ್ಲಾಧಿಕಾರಿಗಳು ನ್ಯಾಯಪರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.











