ಮನೆ Latest News ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ; ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ

ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ; ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ

0

ಬೆಂಗಳೂರು; ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ  ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ವಿಧಾನಸಭೆಯಿಂದ ವಿನಯ್ ಕುಲಕರ್ಣಿ ಅನರ್ಹ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ. ಇದು ಎಲ್ಲಿಯಾದ್ರೂ ಉಂಟಾ..?. ವಿಧಾನಸಭೆ ವ್ಯಾಪ್ತಿಯಲ್ಲಿ ಏನಾದ್ರೂ ಆದಾಗ ಮಾತ್ರ ಅದು ಅಧಿಕಾರ ಇದೆ. ನಿಯಮದ ಪ್ರಕಾರ ಯಾರಾದ್ರೂ ಶಿಕ್ಷೆಗೆ ಒಳಪಟ್ಟಾಗ ಡೀಮ್ಡ್ ಟು ಬಿ ಡಿಸ್ಕ್ವಾಲಿಫೈ ಆಗ್ತಾರೆ. ಅದು ಆಟೋಮೆಟಿಕ್ ಆಗಿಯೇ ರದ್ದು ಆಗುತ್ತದೆ. ನಾವು ಇಂಟಿಮೇಷನ್ ಕೊಡಲು ಮಾತ್ರ ಇರೋದು. ಇಂದು ಬಂದಿದ್ದೇನೆ ಕಾರ್ಯದರ್ಶಿಗೆ ಇದನ್ನ ನೋಡಲು ಹೇಳಿದ್ದೇನೆ. ನಮ್ಮಿಂದ ಒಂದು ದಿನ ಎರಡು ದಿನ ಬಾಕಿ ಆದರೆ ಅನ್ನೋದೇನಿಲ್ಲ ಎಂದಿದ್ದಾರೆ.

ಇದು ಆಟೋಮೆಟಿಕ್ ಆಗಿ ರದ್ದಾಗಿದೆ, ಸ್ಟೇ ಸಿಕ್ಕರ್ ಮತ್ತೆ ರೀಇನ್ಸ್ಟಿಕೇಟ್ ಆಗುತ್ತದೆ. ನಮ್ಮ ಕೆಲಸ ಏನು ಅಂದರೆ ನಾನು ಇಂಟಿಮೇಷನ್ ಕೊಡೋದು ಮಾತ್ರ. ನಾನು ಇಂಟಿಮೇಷನ್ ಕೊಡೋದು ಮಾತ್ರ ಇರೋದು. ಕಾನೂನು ವ್ಯಾಪ್ತಿಯಲ್ಲಿ ಆದೇಶ ಮಾಡಿದಾಗ ತನ್ನಿಂದ ತಾನೇ ರದ್ದು ಆಗಿದೆ. ಇಲ್ಲಿ ಬಿಜೆಪಿ ಕಾಂಗ್ರೆಸ್ ತಾರತಮ್ಯ ಮಾಡಿಲ್ಲ.ತಾರತಮ್ಯ ಏನಿದೆ, ತನ್ನಿಂದತಾನೇ ರದ್ದಾದಾಗ ಏನು ಮಾಡೋದು. ಅವರು ಮೀಟಿಂಗ್ ಬರಲು ಆಗುತ್ತದೆಯಾ..?. ಸಭೆಗೆ ಬಂದು ಕೂರಲು ಆಗುತ್ತದೆಯಾ..?.ಮಾಹಿತಿ ಇಲ್ಲದೇ ಇರೋವ್ರಿಗೆ ಮಾಹಿತಿ ಕೊಡ್ತಾ ಇದ್ದೀನಿ ಎಂದಿದ್ದಾರೆ.