ಮನೆ Latest News ಕಾಂಗ್ರೆಸ್ ನಿಂದ ಮುಸ್ಲಿಂರಿಗೆ, ಮುಸ್ಲಿಂರಿಂದ ಕಾಂಗ್ರೆಸ್ ಗೆ ಸಹಾಯ ಆಗಿದೆ: ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ

ಕಾಂಗ್ರೆಸ್ ನಿಂದ ಮುಸ್ಲಿಂರಿಗೆ, ಮುಸ್ಲಿಂರಿಂದ ಕಾಂಗ್ರೆಸ್ ಗೆ ಸಹಾಯ ಆಗಿದೆ: ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ

0

ಬೆಂಗಳೂರು; ಕಾಂಗ್ರೆಸ್ ನಿಂದ ಮುಸ್ಲಿಂರಿಗೆ, ಮುಸ್ಲಿಂರಿಂದ ಕಾಂಗ್ರೆಸ್ ಗೆ ಸಹಾಯ ಆಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಅವರು ನೋಟಿಸ್ ಇಲ್ಲದೆ ಕ್ರಮ ಕೈಗೊಂಡಿದ್ದು ಸರಿ ಅಲ್ಲ ಎಂಬ ಸಚಿವ ಸತೀಶ್ ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರು ಹೇಳಿದ್ದೇ ನಾನು ಹೇಳಬೇಕಂತಲ್ಲ. ನೋಟಿಸ್ ಕೊಟ್ಟು ಕೇಳೋದು ಸೌಜನ್ಯ.ಆರೋಪಕ್ಕೆ ನೋಟಿಸ್ ಕೊಡಲೇಬೇಕು ಅಂತಿಲ್ಲ. ಮೌಕಿಕವಾಗಿ ಆದ್ರೂ ಮಾಹಿತಿ ಒಡೆಯಬಹುದಿತ್ತು ಎಂದಿದ್ದಾರೆ.

ಇದೇ ವೇಳೆ ಮುಸ್ಲಿಂ ಸಮುದಾಯದ ಪತ್ರದ ವಿಚಾರದ ಬಗ್ಗೆ ಮಾತನಾಡಿದ ಅವರು ಮುಸ್ಲಿಂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಇದನ್ನ ಒಪ್ಪೋಣ. ಜಮೀರ್ ಮೇಲೆ ಕ್ರಮ ಅಂತ ಬಂದ್ಮೇಲೆ ನೋಡೋಣ ಕಾಂಗ್ರೆಸ್ ಗೆ ಜಮೀರ್ ಮೇಲೆ ಕೋಪ ಅಂತ ಸಮುದಾಯದಲ್ಲಿ ಭಾವನೆ ಬರಬಾರದು. ಊಹೆ ಮಾಡಿಕೊಳ್ಳಬಾರದು. ಕಾಂಗ್ರೆಸ್ ನಿಂದ ಮುಸ್ಲಿಂರಿಗೆ, ಮುಸ್ಲಿಂರಿಂದ ಕಾಂಗ್ರೆಸ್ ಗೆ ಸಹಾಯ ಆಗಿದೆ ಎಂದು ಹೇಳಿದ್ದಾರೆ.

ಸಿಎಂ ಸೈಲೆಂಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಜಮೀರ್ ಹೇಳಿಕೆ ಅವರ ಅನಿಸಿಕೆ, ಅವರ ಅನಿಸಿಕೆ. ಸಿಎಂ ಇಷ್ಟೊಂದು‌ ಅಸಹಾಯಕ ರೀತಿ ಅಂದ್ರೆ ಯಾರೋ ಮಾಠ ಮಂತ್ರ ಮಾಡಿಸರಬಹುದಾ ಅಂತ ಯೋಚನೆ ಮಾಡ್ತಿದ್ದೇನೆ. ಮನುಷ್ಯನ ಪ್ರಭಾವ ಬೀರಿರಬೇಕು ಅಂದ್ರೆ ಆಸ್ತಿಕರಾಗಿಬೇಕು ಅಂತಲೇ ಅಲ್ಲ. ಆಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ, ಯೋಚನೆ ಮಾಡ್ತಿದ್ದೇನೆ. ನನ್ನನ್ನ ಸಿಎಂ ಕರೆದು ಮಾತನಾಡಿದ್ರು. ನಾನು, ಸಿಎಂ ಇಬ್ಬರೂ ಮಾಟ ಮಂತ್ರ ನಂಬೊಲ್ಲ. ಗಟ್ಟಿಯಾಗಿ ನಿಲ್ಲಿ‌ ಅಂತ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಮಾಠ ಮಂತ್ರದ ಬಗ್ಗೆ ಜನ ಮಾತಾಡುತ್ತಿದ್ದಾರೆ, ನಾನು ಹೇಳ್ತಿದ್ದೇನೆ ಎಂದಿದ್ದಾರೆ.

ನಾವು ಅಲ್ಪಸಂಖ್ಯಾತರ ಸಮುದಾಯದ ವಿಶ್ವಾಸ ಗಳಿಸುವ ಕೆಲಸ ಮಾಡ್ತೀವಿ.ರಾಜಕೀಯ ನಿಂತ ನೀರಲ್ಲ.ನೀರು ಹರಿದ್ರೆನೇ ಪರಿಶುದ್ಧತೆ ಅಂತಾ. ಹಾಗೆಯೇ ರಾಜಕಾರಣ ಪರಿಶುದ್ಧತೆ ಇರಬೇಕು ಅಂದ್ರೆ ಬದಲಾವಣೆ ಆಗಲೇಬೇಕು. ನನ್ನ ಮೇಲೆಯೂ ಮಾಟ ಮಂತ್ರ ಆಗಿರುತ್ತೆ ಹೇಳೋಕೆ ಆಗಲ್ಲ. ಮುಖ್ಯಮಂತ್ರಿ ಮಾತ್ರವಲ್ಲ.ನಿಂಬೆ ಹಣ್ಣು, ದಾರ ಹಾಕಿ ಹೋಗೋದೆಲ್ಲ ನಮ್ಮ‌ ಹಳೆಯ ಮನೆಯ ಮುಂದೆ ಆಗ್ತಿತ್ತು. ಕೇರಳದಲ್ಲಿ ಮಾಟ ಮಂತ್ರ ಮಾಡಿಸುತ್ತಾರೆ. ಮೇ ತಿಂಗಳಿನಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ. ಸಿಎಂ ಅಸಹಾಯಕರಲ್ಲ, ಅವರಿಗೂ ಶಕ್ತಿ ಇದೆ ಎಂದಿದ್ದಾರೆ.