ನವದೆಹಲಿ: ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಯನ್ನು ವಿರೋಧ ಮಾಡಿದೆ. ಸದನದಲ್ಲಿ ಸಮರ್ಥನೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ದೆಹಲಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಇದನ್ನು ವಿರೋಧಿಸಬಾರದು ಎಂದು ಕೆಲ ಕಾಂಗ್ರೆಸ್ ಸಂಸದರಿಗೆ ಗೊತ್ತಿತ್ತು. ಅಪ್ರಭುದ್ಧ, ಬೇಜವಬ್ದಾರಿ ಇಲ್ಲದ ನಾಯಕತ್ವದಿಂದ ಸಂಸದರು ವಿರೋಧಿಸಿದ್ದಾರೆ. ರಾಜೀವಗಾಂಧಿ ಅವರ ಆಡಳಿತದಲ್ಲಿ ಅತಿ ಉದ್ದನೇ ಭಾಷಣ ಮಾಡಿದ್ದಾರೆ. ಓಬಿಸಿ ಮೀಸಲಾತಿ, ಮಂಡಲ ಆಯೋಗದ ವಿರುದ್ಧ ಅತಿದೊಡ್ಡ ಭಾಷಣ ಮಾಡಿದ್ದಾರೆ. ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ದೇವೇಗೌಡರು ಪ್ರಧಾನಿಯಾದಗ ವಿರೋಧಿಸಿದರು. ವಾಜಪೇಯಿ ಅವರ ಅವಧಿಯಲ್ಲೂ ಕಾಂಗ್ರೆಸ್ ವಿರೋಧಿಸಿದೆ. ಬಳಿಕ ಯಾವುದೇ ಪುನರ್ ವಿಗಂಡನೆ ಇಲ್ಲದೇ ಮಹಿಳಾ ಮೀಸಲಾತಿ ಜಾರಿ ಮಾಡುವ ಪ್ರಯತ್ನ ನಡೆಯಿತು. ಅದಕ್ಕೂ ಬೆಂಬಲ ನೀಡಲಿಲ್ಲ. ಇಂದು ಪುನರ್ ವಿಗಂಡನೆ ಮಾಡದೇ ಮೀಸಲಾತಿ ನೀಡಿ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ. 2026 ಕ್ಕೆ ಕ್ಷೇತ್ರ ಪುನರ್ ವಿಗಂಡನೆ ಮಾಡಬೇಕು ಎಂದಿದ್ದಾರೆ.
2026 ರ ನಂತರದ ಜನಗಣತಿ ಅಡಿಯಲ್ಲಿ ಮಾಡಿದರೆ ದಕ್ಷಿಣ ರಾಜ್ಯಕ್ಕೆ ಅನ್ಯಾಯವಾಗಲಿದೆ.ಅದಕ್ಕಾಗಿ ನಾವು 2011 ಜನಗಣತಿ ಅಡಿಯಲ್ಲಿ 50% ಕ್ಷೇತ್ರ ಹೆಚ್ಚು ಮಾಡುತ್ತಿದ್ದೇವೆ. ಅದಕ್ಕಾಗಿ ಪುನರ್ ವಿಗಂಡನೆ ಜೊತೆಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ಹೊರಟಿದ್ದೇವೆ.ಪ್ರಿಯಾಂಕ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡಿದರೆ ಏನು ಹೇಳಬೇಕು ಎಂದಿದ್ದಾರೆ.











