ಮನೆ Latest News ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ತಪ್ಪೇನಿದೆ?; ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಪ್ರಶ್ನೆ

ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ತಪ್ಪೇನಿದೆ?; ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಪ್ರಶ್ನೆ

0

ಬೆಂಗಳೂರು: ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ತಪ್ಪೇನಿದೆ?  ಎಂದು ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳುವ ಹಕ್ಕಿದೆ.ಸಂಪುಟ ಪುನಾರಚನೆ ಆಗಬಹುದು ಎಂಬ ವಿಶ್ವಾಸ ಇದೆ. ಅಂತಿಮ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು, ಸಂಪುಟ ಪುನಾರಚನೆ,  ನಾಯಕತ್ವ ಬದಲಾವಣೆ ಚರ್ಚೆ ಆಗಲಿ. ಅಂತಿಮ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್ ಎಂದ ಅವರು ತಾವು ಸಂಪುಟ ಪುನಾರಚನೆ ಬೇಡಿಕೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ ‌ನಾನು ಸನ್ಯಾಸಿ ಅಲ್ಲ, ನಾನು ಐದು ಬಾರಿ ಶಾಸಕರಾಗಿದ್ದೇನೆ. ಆಸೆ ಸಹಜವಾಗಿ ಇದೆ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು ವಿಚಾರದ ಬಗ್ಗೆ ಮಾತನಾಡಿದ ಅವರು ಆಗಬಾರದಾಗಿತ್ತು, ಆಗಿದೆ.ಅದರ ಬಗ್ಗೆ ಮಾತಾಡೋದು ಬೇಡ. ಕೋರ್ಟ್ ತೀರ್ಮಾನ ಎಂದ ಅವರು ಜಮೀರ್ ಅಹಮದ್ ಟೀಂ ವಿರುದ್ದ ಶಿಸ್ತುಕ್ರಮ ವಿಚಾರದ ಬಗ್ಗೆ ಮಾತನಾಡಿ ಯಾರು ಕೂಡ ಪಕ್ಷಕ್ಕಿಂತ ದೊಡ್ಡವರಲ್ಲ. ಪಕ್ಷಕ್ಕೆ ವಿರುದ್ಧವಾಗಿ ಪಕ್ಷಕ್ಕೆ ಅಡಚಣೆ ಮಾಡಿದವರಿಗೆ ಕ್ರಮ ಆಗುತ್ತೆ.ಈ ಗೊಂದಲ ಆಗಿರೋದೆ ಅಲ್ಪಸಂಖ್ಯಾತರಿಂದ ಅಲ್ವಾ. ಯಾರೆ ಆಗಲಿ ಸಿಎಂ ಆಗಲಿ, ಡಿಸಿಎಂ ಆಗಲಿ ನಾನಾಗಲಿ.  ಜಮೀರ್ ಆಗಲಿ ಪಕ್ಷಕ್ಕೆ ತೊಂದರೆ ಆಗುವ ಕೆಲಸ ಮಾಡಿದ್ರೆ ಕ್ರಮ ಆಗುತ್ತೆ ಎಂದಿದ್ದಾರೆ.

ಡಿಕೆಶಿ ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಯಾರು ಅಂತ ಪಾಠ ಹೇಳಿ ಬಂದಿದ್ದಾರೆ. ನಾವೆಲ್ಲಾ ರಾಹುಲ್ ಗಾಂಧಿ ಪಾರ್ಟಿಯವರು ಅಂತ. ಎಲ್ಲಾ ಪಕ್ಷದಲ್ಲೂ ದೊರೆಗೆ ದಂಡವಿಲ್ಲ ಎಂಬ ಪರಿಸ್ಥಿತಿನೆ ಬಿಡಿ ಎಂದು ಕೆ.ಎನ್.ರಾಜಣ್ಣ ಹೇಳಿಕೆಗೆ ಶಾಸಕ ಬಾಲಕೃಷ್ಣ ತಿರುಗೇಟು ಕೊಟ್ಟಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಹೈಕಮಾಂಡ್ ತೀರ್ಮಾನ ಮಾಡಬೇಕು. ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ.ಹೈಕಮಾಂಡ್ ತೀರ್ಮಾನ ಮಾಡಲಿದೆ. ಜಮೀರ್ ವಿರುದ್ಧ ಕ್ರಮದ ಬೇಡಿಕೆ ಬಗ್ಗೆ ಮಾತನಾಡಿದ ಅವರು ಏಕೆ ಕ್ರಮ ಆಗಬೇಕು ಏನು ವಿಚಾರ ಗೊತ್ತಿಲ್ಲ. ಪಕ್ಷದ ವಿರುದ್ಧ ನಡೆದುಕೊಂಡರೆ ಯಾರ ವಿರುದ್ಧ ಕೂಡಾ ಕ್ರಮ ಆಗುತ್ತೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಯಾರೂ ಹೊರತಲ್ಲ. ಅಲ್ಪಸಂಖ್ಯಾತರನ್ನು ಯಾರೂ ಟಾರ್ಗೆಟ್ ಮಾಡ್ತಿಲ್ಲ ಎಂದಿದ್ದಾರೆ.