ಕೋಲಾರ: ಕ್ಯಾಬಿನೆಟ್ ಪುನರ್ ರಚನೆ ಎಲ್ಲಾ ಸರ್ಕಾರಗಳಲ್ಲಿ ನಡೆಯುವಂತಹದ್ದು, ಮುಖ್ಯ ಮಂತ್ರಿಗಳು ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೋಲಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಹಿರಿಯ ಶಾಸಕರು ದೆಹಲಿ ಪ್ರಯಾಣ ಕುರಿತು ಮಾತನಾಡಿದ ಅವರು ಕ್ಯಾಬಿನೆಟ್ ಪುನರ್ ರಚನೆ ಎಲ್ಲಾ ಸರ್ಕಾರಗಳಲ್ಲಿ ನಡೆಯುವಂತಹದ್ದು.ಮುಖ್ಯ ಮಂತ್ರಿಗಳು ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ಇದಕ್ಕೆ ಹೆಚ್ಚಿನ ಅರ್ಥ ಕೊಡುವ ಅವಶ್ಯಕತೆ ಇಲ್ಲ. ಅವಕಾಶ ಕೇಳೋದು ತಪ್ಪೇನಿಲ್ಲ ಎಂದಿದ್ದಾರೆ.
ಮುಸ್ಲಿಂ ಮುಖಂಡರ ರಾಜಿನಾಮೆ ವಿಚಾರವಾಗಿ ಮಾತನಾಡಿದ ಅವರು ಪಕ್ಷದಲ್ಲಿ ಬಂದಿರುವ ರಿಪೋರ್ಟ್ ಆದರಿಸಿ ಹಾಗೆ ಮಾಡಿರಬಹುದು. ಕೂಲಂಕುಶ ತನಿಖೆ ಮಾಡಿದಮೇಲೆ ನಿಜಾಂಶ ತಿಳಿಯಲಿದೆ. ಜಮೀರ್ ಅಹಮದ್ ರವರ ನೆಕ್ಟ್ ಟಾರ್ಗೆಟ್ ನಾನೇ ಎಂಬ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಯಾರನ್ನೂ ಟಾರ್ಗೆಟ್ ಮಾಡುವ ಅವಶ್ಯಕತೆ ಪಕ್ಷದಲ್ಲಿ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ತನಿಖೆ ನಡೆದ ಮೇಲೆ ಹೈಕಮಾಂಡ್ ನಿರ್ಧಾರ ಮಾಡಲಿದೆ.ದಾವಣಗೆರೆ ವಿಚಾರವಾಗಿ ಯಾವುದೇ ತಲೆದಂಡ ಇಲ್ಲ. ಹೈಕಮಾಂಡ್ ಮಟ್ಟದಲ್ಲಿ ಆದ ನಿರ್ಣಯದ ಬಗ್ಗೆ ಮಾಹಿತಿ ಇಲ್ಲ. ಯಾರ ಮನೆಯಲ್ಲಿ ಸಾವಾಗುತ್ತೋ ಅವರ ಮನೆಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದಲ್ಲಿ ನಡೆದುಕೊಂಡು ಬಂದಿದೆ. ಹಾಗಂತ ಯಾರನ್ನೂ ಪಕ್ಷ ಕಡೆಗಣಿಸಿಲ್ಲ, ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಗೊಂದಲದ ಬಗ್ಗೆ ವಿರೋಧ ಪಕ್ಷಗಳ ಟೀಕೆ ಕುರಿತು ಮಾತನಾಡಿದ ಅವರು ಸರ್ಕಾರದ ಬಗ್ಗೆ ಮಾತನಾಡಲು ವಿರೋಧ ಪಕ್ಷದವರಲ್ಲಿ ಏನೂ ಉಳಿದಿಲ್ಲ. ನಮ್ಮಲ್ಲಿ ಕಚ್ಚಾಟ ಇಲ್ಲ. ಇರುವುದು ವಿರೋಧ ಪಕ್ಷಗಳ ನಾಯಕರಲ್ಲಿ. ಕೋಲಾರ ದ ಮೆಡಿಕಲ್ ಕಾಲೇಜಿಗೆ ಆಕ್ಷನ್ ಪ್ಲಾನ್ ರೆಡಿ ಮಾಡೋಕೆ ಹೇಳಿದ್ದೇನೆ. ಡಿಪಿಆರ್ ಆದಮೇಲೆ ಕ್ಯಾಬಿನೇಟ್ ಅನುಮೋದನೆ ಪಡೆದು ಮುಂದಿನ ಕೆಲಸ ಶುರುವಾಗುವುದು ಎಂದಿದ್ದಾರೆ.











