ಮನೆ Blog ಬೈ ಎಲೆಕ್ಷನ್ ನೂರಕ್ಕೆ ನೂರು ಗೆಲ್ಲುತ್ತೇವೆ, ನಮಗೆ ವಿಶ್ವಾಸ ಇದೆ: ಸಚಿವ ಸಂತೋಷ್ ಲಾಡ್ ಹೇಳಿಕೆ

ಬೈ ಎಲೆಕ್ಷನ್ ನೂರಕ್ಕೆ ನೂರು ಗೆಲ್ಲುತ್ತೇವೆ, ನಮಗೆ ವಿಶ್ವಾಸ ಇದೆ: ಸಚಿವ ಸಂತೋಷ್ ಲಾಡ್ ಹೇಳಿಕೆ

0

ಬೆಂಗಳೂರು: ರಾಜ್ಯದ ಎರಡೂ ಕ್ಷೇತ್ರಗಳ ಉಪಚುನಾವಣೆ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೈ ಎಲೆಕ್ಷನ್ ನೂರಕ್ಕೆ ನೂರು ಗೆಲ್ಲುತ್ತೇವೆ, ನಮಗೆ ವಿಶ್ವಾಸ ಇದೆ. ಹೈಕಮಾಂಡ್ ಇದೆ, ಲೋಕಲ್ ಲೀಡರ್ಸ್ ಇದ್ದಾರೆ.ಟಿಕೆಟ್ ಬಗ್ಗೆ ಕೆಲ ಸಮಸ್ಯೆ ಇದ್ದಾವೆ, ಅವೆಲ್ಲವನ್ನ ಬಗೆಹರಿಸಲಾಗುತ್ತದೆ.. ಹೈಕಮಾಂಡ್ ಇದೆ ಎಂದಿದ್ದಾರೆ.

ಗ್ಯಾಸ್ ವಿಷ್ಯದಲ್ಲಿ ಕೇಂದ್ರ ನಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಗ್ಯಾಸ್ ತೊಂದ್ರೆ ಇರೋದು ಎಲ್ಲಾ ದೇಶಗಳಲ್ಲಿ ಇದೆ.ಆದ್ರೆ ಅದನ್ನ ಡಿಫೆಂಡ್ ಮಾಡುತ್ತಿದ್ದಾರೆ ಅಲ್ಲ.. ಅದು ಯಾಕೆ?.ಮೋದಿ ಸಾಹೇಬರು ಏನೂ ಸಮಸ್ಯೆ ಇಲ್ಲ ಅಂತಾರೆ. ಆದ್ರೆ ದೇಶದಲ್ಲಿ ಸಾಕಷ್ಟು ಸಮಸ್ಯೆ ಆಗ್ತಿದೆ , ಅದರ ಬಗ್ಗೆ ಮಾತಾಡೋದಿಲ್ಲ. ಟಿವಿಯಲ್ಲಿ ಮೋದಿ ಅವರನ್ನ ೨೪ ತಾಸು ತೋರಿಸಿ ಎಂದಿದ್ದಾರೆ.

ಸಿಎಂ ಆಯ್ದ ಸಚಿವರಿಗೆ ಡಿನ್ನರ್ ಕರೆದಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅಭಿವೃದ್ಧಿ, ಬಜೆಟ್ ಬಗ್ಗೆ ಚರ್ಚೆ ಮಾಡ್ತಾರೆ, ಅದಕ್ಕೆ ಕರೆದಿದ್ದಾರೆ. ನಾನು ಹೋಗ್ತೇನೆ, ಇಲಾಖೆಯ ಬಗ್ಗೆ ಕರೆದಿದ್ದಾರೆ. ಹೌದು ಸಿಎಂ ನನಗೂ ಆಹ್ವಾನಿಸಿದ್ದಾರೆ. ನಾ‌ನು ಸಭೆಗೆ ಹೋಗ್ತೇನೆ. ಸಿಎಂ ಯಾವ ಉದ್ದೇಶದಿಂದ ಕರೆದಿದ್ದಾರೆ ಗೊತ್ತಿಲ್ಲ. ಬಜೆಟ್ ಬಗ್ಗೆ,ಅಭಿವೃದ್ಧಿ ಬಗ್ಗೆ ಕರೆದಿರ ಬಹುದು ಗೊತ್ತಿಲ್ಲ. ಅಷ್ಟು ಬಿಟ್ಟರೇ ಬೇರೇನೂ ಇಲ್ಲ ಎಂದ ಅವರು ಐದು ರಾಜ್ಯದ ಚುನಾವಣೆ ಇದೆ, ಅವರನ್ನೇ ಫ್ರೇಮ್ ನಲ್ಲೇ ತೋರಿಸಿ. ಅಸ್ಸಾಂ, ಬೆಂಗಾಳಕ್ಕೆ  ಹೋಗೋದು, ಅಲ್ಲಿ ಬೈಯ್ಯೋದು.ಯಾರನ್ನೂ ತೋರಿಸಬೇಡಿ, ಮೋದಿಯನ್ನೇ ತೋರಿಸಿ ಸಾಕು. ಇವರೇ ಇಲ್ಲಾ. ೧೨ ವರ್ಷ ಆಯಿತು.. ಒಂದು ಸುದ್ದಿಗೋಷ್ಟಿ ಮಾಡಿಲ್ಲ. ಅವರನ್ನೇ ತೋರಿಸಿ ತೋರಿಸಿ ಈ ದೇಶ ಹೇಗಾಗಿದೆ.೫೦% ಅವರನ್ನೇ ತೋರಿಸುತ್ತಾರೆ.ಕರ್ನಾಟಕದ ವಿಷ್ಯ ಅಲ್ಲ, ಇದು ದೇಶದ ವಿಷ್ಯ.ಯಾವುದೇ ಮೀಡಿಯಾ ಗಳಿಗೆ ನಾನು ಬ್ಲೇಮ್ ಮಾಡಲ್ಲ. ಥ್ಯಾಂಕ್ಸ್  ಮೀಡಿಯಾ ಎಂದಿದ್ದಾರೆ.

 

ಖಂಡಿತವಾಗಿ ನಾನು ಉಪಚುನಾವಣೆ ಗೆಲ್ತೇವೆ. ನಾವು ಮಾಡಿರೋ ಕಾರ್ಯಕ್ರಮ ನೋಡಿ ಜನ ನಮ್ಮ ಕೈ ಹಿಡಿಯುತ್ತಾರೆ. ಟಿಕೆಟ್‌ನ ಅವರು ಕೇಳ್ತಾರೆ ಇವರು ಕೇಳ್ತಾರೆ. ಟಿಕೆಟ್ ವಿಚಾರಾಗಿ ಹೈಕಮಾಂಡ್‌ ,ಲೀಡರ್ ಎಲ್ಲರೂ ಒಂದು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಗ್ಯಾಸ್ ತೊಂದ್ರೆ ವಿಚಾರದ ಬಗ್ಗೆ ಕೇಳಿ ಪ್ರಶ್ನೆಗೆ ಉತ್ತರಿಸಿದ ಅವರು

ಗ್ಯಾಸ್ ತೊಂದರೆ ಇರೋದು ಎಲ್ಲಾ ದೇಶದಲ್ಲಿ ಇದೆ. ಬೇರೆ ದೇಶದ ಅವಲಂಬನೆ ಕಡಿಮೆ ಆಗಬೇಕಿತ್ತು. ಬಹಳ ದೊಡ್ಡ ಸಾಪ್ಟ್ ವೇರ್ ಇದೆ ಎನ್ನುವ ಮೋದಿ ಸಾಹೇಬ್ರು ಯಾವುದೇ ವಿಷಯ ಇದ್ದಾಗ ಮೋದಿ ಅವರು ಪ್ರತಿಕ್ರಿಯೆ ಕೊಡಲ್ಲ.

ಯುದ್ದ ನಡೆಯುತ್ತೆ ಎಂದು ಗೊತ್ತಿತ್ತು. ಯಾವ ಪೂರ್ವಕ್ರಮವನ್ನ ಕೇಂದ್ರ ಸರ್ಕಾರ ಕೈಗೊಂಡಿದೆ. ಅದರ ಬಗ್ಗೆ ಕೇಂದ್ರ ಸರ್ಕಾರ ಮಾತಾಡಲ್ಲ.ಒಂದೇ ಮೆಟ್ರೋ ಟ್ರೈನ್ ಉದ್ಘಾಟನೆ ನಾಲ್ಕಾರು ಭಾರಿ ಮಾಡ್ತಾರೆ. ಇಂಗ್ಲಿಷ್ ಮೀಡಿಯಾ ಮೋದಿ ಸಾಹೇಬ್ರನ್ನ 24 ಗಂಟೆ ತೋರಿಸಬೇಕು. 12 ವರ್ಷದಿಂದ ಪ್ರೆಸ್ ಮೀಟ್ ಮಾಡಿಲ್ಲ. ಈಗಲಾದರೂ ಒಂದು ಪ್ರೆಸ್ ಮೀಟ್ ಮಾಡಲಿ. ನಾನು ನ್ಯಾಷನಲ್ ಮೀಡಿಯಾಗೆ ಹೇಳ್ತಿದ್ದೇನೆ. ಎಲ್ಲಾ ಹಿಂದಿ ಚಾನಲ್ ನೋಡ್ತೇನೆ.ಇಂಗ್ಲೀಷ್  ಖಾಸಗಿ ಚಾನಲ್ ನ ಕಾರ್ಯಕ್ರಮದಲ್ಲಿ ಒಂದು ಲೇಡಿ ಭಾರತದ ಬಗ್ಗೆ ಕೆಟ್ಟದಾಗಿ  ಮಾತಾಡ್ತಾಳೆ.. ಕನ್ನಡ ಮೀಡಿಯಾಗೆ ನಾನು ಹೇಳ್ತಿಲ್ಲ. ನಾನು ಕನ್ನಡ ಮೀಡಿಯಾಗೆ ಧನ್ಯವಾದ ಹೇಳ್ತೇನೆ ಎಂದಿದ್ದಾರೆ