ಬೆಂಗಳೂರು; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮ್ಯಾಚ್ ಆಡಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪರಮೇಶ್ವರ್ ಅವರನ್ನು ಕೆಎಸ್ಸಿಎ ಮತ್ತು ಆರ್ಸಿಬಿ ನಿಯೋಗ ಭೇಟಿ ಮಾಡಿದೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಭೇಟಿ ಮಾಡಿ ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯಾವಳಿ ಆಡಿಸುವ ಸಂಬಂಧ ಚರ್ಚೆ ನಡೆಸಿದೆ. ಇದೇ 12 ರಂದು ಮತ್ತೊಂದು ಸಭೆ ನಡೆಸಿ ಪಂದ್ಯಾವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಇದೇ ವೇಳೆ ಭರವಸೆ ನೀಡಿದ್ದಾರೆ.
ಇನ್ನು ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್ ಇವತ್ತು ಗೃಹ ಸಚಿವರ ಭೇಟಿ ಮಾಡಿದ್ದೇವೆ. ಆರ್ಸಿಬಿ ಮ್ಯಾಚ್ ನಡೆಸುವ ಸಂಬಂಧ ಜಂಟಿ ನಿಯೋಗ ಬಂದಿದ್ವಿ.ಒಳ್ಳೇ ಚರ್ಚೆ ಆಯ್ತು, ಫೆ. 12ರಂದು ಸಮಿತಿ ಜತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರೋದಾಗಿ ಗೃಹ ಸಚಿವರು ತಿಳಿಸಿದ್ರು .ಆದಷ್ಟು ಬೇಗ ವೆನ್ಯೂ ನಿರ್ಧಾರ ಆಗಬೇಕು, ಬೇಗ ತೀರ್ಮಾನ ತಗೊಳ್ಳಿ ಅಂತ ಮನವಿ ಮಾಡಿದ್ದೇವೆ. ಆರ್ಸಿಬಿ ಅಭಿಮಾನಿಗಳಿಗೆ ಖಂಡಿತ ಗುಡ್ ನ್ಯೂಸ್ ಸಿಗುತ್ತೆ ಅನ್ಕೊಂಡಿದೀವಿ. ಏನೆಲ್ಲ ಶಿಫಾರಸ್ಸುಗಳಿವೆಯೋ ಎಲ್ಲವನ್ನೂ ಕೆಎಸ್ಸಿಎ ಯಿಂದ ಪೂರೈಸ್ತೇವೆ. ಇನ್ಮೊಂದೆರಡು ಮೂರು ದಿನಗಳಲ್ಲಿ ಖಂಡಿತ ಒಳ್ಳೇ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಆಡಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು ಜಸ್ಟೀಸ್ ಕುನ್ಹಾ ಅವರ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದೀವಿ. ಸರ್ಕಾರದಿಂದ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡಾ ರಚಿಸಲಾಗಿತ್ತು. ಸಮಿತಿಯೂ ಕೂಡಾ ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಮ್ಯಾಚ್ ಗಳು ಬರ್ತಿವೆ. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ, ಅವರಿಗೆ ಏನು ಸೂಚನೆ ಕೊಡಬೇಕೋ ಅಂತ ನೋಡ್ತೇವೆ. ಸಿಎಂ ಜತೆಗೂ ಚರ್ಚೆ ಮಾಡಬೇಕಾಗಿದೆ.ನಮ್ಮ ಶಿಫಾರಸು ಅವರು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಅಂತ ನೋಡಿ ತೀರ್ಮಾನ ಮಾಡ್ತೇವೆ. ಬೆಂಗಳೂರಿನಲ್ಲಿ ಮ್ಯಾಚ್ ಆಗಬೇಕು ಅಭಿಮಾನಿಗಳು ಬಯಸ್ತಿದ್ದಾರೆ. ಆದ್ರೆ ಸುರಕ್ಷತೆಯನ್ನೂ ನೋಡಬೇಕು, ಕಾಲ್ತುಳಿತದಂಥ ಘಟನೆಗಳು ಮರುಕಳಿಸಬಾರದಲ್ಲ. ಎಲ್ಲವನ್ನೂ ನೋಡಿ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ತೇಜಸ್ವಿ ಸೂರ್ಯ ಒಬ್ಬ ಸಂಸದರು. ಖಾಲಿ ಟ್ರಂಕ್ ಹಿಡಿದು ರಾಜ್ಯ ಸರ್ಕಾರದಲ್ಲಿ ಹಣ ಖಾಲಿ ಆಗಿದೆ ಅನ್ನೋ ಬದಲು ಕೇಂದ್ರದಿಂದ ಅವರು ಹಣ ಕೊಡಿಸಿಕೊಡಲಿ. ಕೇಂದ್ರದಿಂದ ನಮಗೆ ಬಹಳ ಅನುದಾನ ಬರುವುದು ಬಾಕಿ ಇದೆ. ಅದನ್ನು ಅವರು ಮೊದಲು ಕೇಂದ್ರದ ಜತೆ ಮಾತಾಡಿ ಅನುದಾನ ಕೊಡಿಸಲಿ. ಅವರು ಹಣ ಕೊಡಿಸಿದರೆ ಹಣ ರಾಜ್ಯದ ಬಳಿಯೂ ಇರುತ್ತೆ ಎಂದು ತೇಜಸ್ವಿ ಸೂರ್ಯಗೆ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.











