ಬೆಂಗಳೂರು: ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಅವರು ಉತ್ತರಿಸಿದ್ರು. ಈ ವೇಳೆ ಮಾತನಾಡಿದ ಅವರು ಹಿಂದೆ ಶಶಿಕಲಾ ಜೊಲ್ಲೆ ಮೇಲೆ ಮೊಟ್ಟೆ ಆರೋಪ ಬಂತು. ಅವರ ರಾಜೀನಾಮೆ ಪಡೆದಿಲ್ಲ. ಯಡಿಯೂರಪ್ಪ ಕುಟುಂಬದ ಆಸ್ತಿ, ವಿಜಯೇಂದ್ರರ ಆಸ್ತಿ ಇದರ ಬಗ್ಗೆ ಚರ್ಚೆ ಆಯ್ತು. ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದರು. ಯಾರಾದರೂ ರಾಜೀನಾಮೆ ಕೊಟ್ರಾ? ನಾನು ಈಗ ಯಾಕೆ ರಾಜೀನಾಮೆ ಕೊಡಬೇಕು?. ಏನು ತಪ್ಪು ಮಾಡಿದ್ದೇನೆ.? ನಾನು ದಲಿತ ಎಂದು ಶಲ್ಟರ್ ತಗೊಳ್ಳಲ್ಲ. ರಾಜ್ಯಪಾಲರನ್ನು ನೀವು ದಲಿತ ಎಂದು ಹೇಳಿದರೆ, ನಾನು ಕೂಡ ಹೌದು ದಲಿತನೆ. ದಲಿತ ಶಲ್ಟರ್ ಪಡೆಯಲ್ಲ ಎಂದು ದಲಿತ ಕಾರ್ಡ್ ಬಳಸಿದ್ದಾರೆ ತಿಮ್ಮಾಪುರ. ನಾನೇನು ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಲ್ಲ.. ಎಂದು ಉತ್ತರ ಮುಗಿಸಿದ್ದಾರೆ
ಯಾರ್ಯಾರು ಅಬಕಾರಿ ಸಚಿವರಾಗಿದ್ರು. ಅವರ ಮೇಲೆ ಆರೋಪಗಳು ಬಂದಿವೆ. ಕೆಲವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ರು. ಜೆ.ಹೆಚ್.ಪಟೇಲ್ ಮೇಲೆ ದೂರು ಕೊಡಲಾಗಿತ್ತು. ರೇಣುಕಾಚಾರ್ಯ,ಕಟ್ಟಾ ಸುಬ್ರಮಣ್ಯ ನಾಯ್ಡುಮೇಲೆ ದೂರು ಬಂದಿದ್ದವು. ಅಬಕಾರಿ ಮಂತ್ರಿಗಳಾದವರು ಮೇಲೆ ಆರೋಪ ಬಂದಿತ್ತು. ಆರೋಪ ಮಾಡುವವರು ಮರ್ಚೆಂಟ್ಸ್ ಅಸೋಸಿಯೇಷನ್. ಆ ಸಂಘದ ಬಗ್ಗೆ ನಾನು ಕೇಳಿದ್ದೆ. ಈ ಪೇಡರೇಷನ್20 ವರ್ಷದಿಂದ ಅಸ್ತಿತ್ವದಲ್ಲಿಲ್ಲ. ಪ್ರತಿವರ್ಷ ಲೆಕ್ಕಪತ್ರ ಅಡಿಟ್ ಆಗಿಲ್ಲ. ಸಂಸ್ಥೆಗೆ ಚುನಾವಣೆ ನಡೆದಿಲ್ಲ. ಈ ಸಂಘ ಸದ್ಯಕ್ಕೆ ಚಾಲ್ತಿಯಲ್ಲಿಲ್ಲ. ಈ ಸಂಘ ಹಿಂದಿನ ಎಲ್ಲವರ ಮೇಲೆ ಮಾಡಿದ್ದಾರೆ. ನನ್ನ ಮೇಲೂ ಅವರು ಮಾಡಿದ್ದಾರೆ. ಈ ಭ್ರಷ್ಟಾಚಾರವನ್ನ ತೆಗೆದು ಹಾಕಬೇಕಲ್ಲ. ಇಲ್ಲಿಯವರೆಗೆ ಯಾರು ಮಾಡಲಿಲ್ಲ. ಅಬಕಾರಿ ದಂಧೆಗೆ ಕಡಿವಾಣ ಹಾಕಿದೆ. ಕೌನ್ಸಿಲಿಂಗ್ ಮಾಡಿ ಸರಳೀಕರಣ ತಂದಿದ್ದೇನೆ. ವರ್ಗಾವಣೆಗೆ ಯಾರ ಬಳಿ ಹೋಗುವಂತಿಲ್ಲ. ಕೌನ್ಸಿಲ್ ಮೂಲಕವೇ ಆಗಬೇಕು. ಎಬಿಸಿ ಅಧಿಕಾರಿಗಳ ಮೇಲೆ ಕೇಸ್ ಬಂದರೆ ಅವರನ್ನ ಎಕ್ಸಿಕ್ಯೂಟ್ ಮಾಡುವ ಪ್ರಯತ್ನ ಮಾಡ್ದೆ. ಸ್ವಂತ ಜಿಲ್ಲೆಯಲ್ಲಿ ಕೆಲಸ ಮಾಡದಂತೆ ಮಾಡ್ದೆ. ಅಮಾನತು ಆದ್ರೆ ಪುನರ್ ಸೇವೆಗೆ ಕೊಟ್ಟಿಲ್ಲ. 5 ವರ್ಷ ಕಂಟಿನ್ಯೂ ಇದ್ರೆ ಕಿತ್ತಾಕಿದ್ದೇವೆ. ಬೆಂಗಳೂರಿನಲ್ಲಿ ಬೀಡುಬಿಟ್ಟವರನ್ನ ಕಳಿಸಿದ್ದೇವೆ. ವರ್ಗಾವಣೆ ದಂಧೆ ಇಲ್ಲಿ ಎಲ್ಲಿಂದ ಸಾಧ್ಯ. ಇಲ್ಲಿ ಯಾವ ದಂಧೆ ನಡೆದಿದೆ ಎಂದು ಪ್ರಶ್ನೆ ಮಾಡಿದ್ದಾರೆ.
48 ಗಂಟೆಯಲ್ಲೇ ನವೀರಕಣದ ಸನ್ನದ್ದು ಮಾಡ್ದೆ. ಪ್ರತಿವರ್ಷ ಇದ್ದ ನವೀಕರಣ 5 ವರ್ಷ ಮಾಡ್ದೆ. 17 ಲಾಗಿನ್ ತೆಗೆದು 7 ಲಾಗಿನ್ ಇಟ್ಟಿದ್ದೇವೆ. ನಾನು ಇದನ್ನ ಸರಳೀಕರಣ ಮಾಡಿದ್ದು ಯಾಕೆ?. ಅಧಿಕಾರಿಗಳ ಲೆವೆಲ್ ನಲ್ಲಿ ಇಲ್ಲ ಅಂತ ಹೇಳಲ್ಲ. ಆದರೆ ಬದಲಾವಣೆ ತರಬೇಕಲ್ಲ .41 ಆನ್ಲೈನ್ ಸೇವೆಗಳನ್ನ ತಂದಿದ್ದೇನೆ. ಈ ಹರಾಜು ಪ್ರಕ್ರಿಯೆ ತಂದಿದ್ದೇವೆ. ಹಿಂದುಳಿದವರಿಗೆ ಅವಕಾಶ ಸಿಗಬೇಕಲ್ಲ. ಬೇರೆಯವರು ಸನ್ನದು ಪಡೆಯಬಾರದಾ?. ಕೇಂದ್ರದ ಸಂಸ್ಥೆ ಈ ಹರಾಜು ಮಾಡೋದು. ಇದರಲ್ಲಿ ಎಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಪ್ರಶ್ನೆ ಮಾಡಿದ್ದಾರೆ.











