ಬೆಂಗಳೂರು; ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಿಲ್ಲ ಎಂಬ ಟ್ವೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಿಲ್ಲ ಎಂದು ಟ್ವೀಟ್ ಮಾಡಿದ್ದೆ. ಆದರೂ ನೀವೆಲ್ಲಾ ನಾನಾ ರೀತಿಯಲ್ಲಿ ವ್ಯಾಖ್ಯಾನಿಸಿದ್ದೀರಿ. ನನ್ನ ಕಾವೇರಿ ಆರತಿ, ನ್ಯಾಯಾಲಯದಿಂದ ಹೊಸ ರೂಪ ತಂದಿದೆ.
ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿದೆ. ಇದು ನೀವೇ ತೆಗೆದುಕೊಳ್ಳಬೇಕಾದ ತೀರ್ಮಾನ, ಇದೊಂದು ಟೆಕ್ನಿಕಲ್ ವಿಚಾರ. ನೀವೇ ತೀರ್ಮಾನ ಮಾಡಬೇಕು ಎಂದು ಕೋರ್ಟ್ ಕೇಂದ್ರ ಕ್ಕೆ ಮಾರ್ಗದರ್ಶನ ಮಾಡಿದೆ. ಅದಕ್ಕೆ ನಾನು ಶುಭ ಘಳಿಗೆಯಲ್ಲಿ ಫಲ ನೀಡಿದ್ದಾನೆ ಎಂದು ನಾನು ಟ್ವೀಟ್ ಮಾಡಿದ್ದೆ. ಇದು ನೀವು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡೋದು ಅರ್ಥ ಇಲ್ಲ, ಆದರೂ ಚಿಂತೆ ಇಲ್ಲ ಎಂದಿದ್ದಾರೆ.
ಹಳ್ಳಿ ಸುಗ್ಗಿ, ಅವರ ಬದುಕು ಸುಖವಾಗಿರಲಿ. ನಾನು ಪಕ್ಷದ, ಸರ್ಕಾರದ ಪರವಾಗಿ ಶುಭಾ ಹಾರೈಸುತ್ತೇನೆ ಎಂದ ಅವರು ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಅವರು ಪ್ರತೀ ಸಲ ಬಂದಾಗಲೂ ಭೇಟಿ ಮಾಡುತ್ತೇನೆ.ಭೇಟಿ ಮಾಡೋದು ಅವರನ್ನ ಸ್ವಾಗತ ಮಾಡೋದು ನಮ್ಮ ಕರ್ತವ್ಯ. ಎಲ್ಲಾ ಪ್ರೋಟೋಕಾಲ್ ಇದೆ, ನಮ್ಮ ಕೆಲಸ ಅದು ಎಂದಿದ್ದಾರೆ. ಮೈಸೂರಲ್ಲಿ ರಾಹುಲ್ ಗಾಂಧಿ ಭೇಟಿಯಾಗಿ ಚರ್ಚೆ ನಡೆಸಿದ ವಿಚಾರದ ಬಗ್ಗೆ ಮಾತನಾಡಿ ಅದೆಲ್ಲಾ ನಾನು ಡಿಸ್ಕ್ಲೋಸ್ ( ಬಹಿರಂಗ) ಪಡಿಸೋದಕ್ಕೆ ಆಗಲ್ಲ. ನಾನು ಮಾತಾಡಿಲ್ಲ ಅಂತ ಹೇಳಲ್ಲ, ಮಾತಾಡಿದ್ದೇನೆ. ಅದು ನನಗೆ ಹಾಗೂ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ನಾಳೆ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುತ್ತಿದ್ದೇನೆ. ಅಸ್ಸಾಂ ವಿಚಾರವಾಗಿ ನಾನು ಭೇಟಿ ಮಾಡುತ್ತೇನೆ. ನಾಳೆ ಸಭೆ ಇದೆ, ಮಧ್ಯಾಹ್ನ ಇದೆ, ನಾನು ನಾಳೆ ಹೋಗ್ತಿದ್ದೇನೆ ಎಂದಿದ್ದಾರೆ. ರಾಹುಲ್ ಭೇಟಿ ಬಳಿಕ ಸಂದೇಶ ರವಾನೆಯಾಗಿದೆ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿ
ನನಗೆ ಗೊತ್ತಿಲ್ಲ ರೀ, ಅದೇನೂ ಹೊಸತಾ?. ರಾಹುಲ್ ಗಾಂಧಿಭೇಟಿ ಮಾಡೋದು, ಫೋನ್ ಮಾಡೋದು ಪಬ್ಲಿಕ್ ನಲ್ಲಿ ಚರ್ಚೆ ಮಾಡೋದು ಅಲ್ಲ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಮುಂದೆ ನಿಮ್ಮ ಬಯಕೆ ಇಡುತ್ತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಮ್ಮ ಬಯಕೆಯನ್ನೂ ನಾನು ಇಡುತ್ತೇನೆ ಎಂದಷ್ಟೇ ಹೇಳಿ ಡಿಕೆಶಿ ತೆರಳಿದ್ದಾರೆ,











