ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ಎಪಿಎಲ್ಗೆ ವರ್ಗಾವಣೆ ಮಾಡುವುದು ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆಯ
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ಎಪಿಎಲ್ಗೆ ವರ್ಗಾವಣೆ ಮಾಡುವುದು. ಅರ್ಹ ಪಿಪಿಎಸ್ ಕಾರ್ಡ್ ಬದಲಾವಣೆ ಮಾಡುವ ಹಾಗೆ ಇಲ್ಲ. 3,96,000 ಕಾರ್ಡುಗಳು ಪೆಂಡಿಂಗ್ ಇವೆ . ಮೊದಲು ಪೆಂಡಿಂಗ್ ಇದ್ದಿದ್ದು 2,95 ಕಾರ್ಡ್ ಗಳು. 3.96 ಸಾವಿದ ಅರ್ಜಿದಾರರು ಬಂದಿದ್ದಾರೆ. ಅದರ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ . ಒಂದು ತಿಂಗಳಲ್ಲಿ ಕಾರ್ಡ್ ವಿಲೇವಾರಿ ಮಾಡಬೇಕು. ಯಾರು ಬಿಪಿಎಲ್ ಇರುತ್ತಾರೆ ಅವರಿಗೆ ಕಾರ್ಡ್ಗಳನ್ನು ಕೊಡಬೇಕು. ಹೊಸದಾಗಿ ಬಂದಿರುವ ಎಪಿಎಲ್ ಕಾರ್ಡ್ಗಳನ್ನ ರಿಜೆಕ್ಟ್ ಮಾಡಬೇಕು ಎಂದು ಹೇಳಿದ್ದೇವೆ. ಎಪಿಎಲ್ ಕಾರ್ಡ್ನವರು 10% ಅಷ್ಟು ಅಕ್ಕಿ ತೆಗೆದುಕೊಳ್ಳತ್ತಿಲ್ಲ. ನಮ್ಮಲ್ಲಿ 25 ಲಕ್ಷ ಎಪಿಎಲ್ ಕಾರ್ಡ್ ಇದೆ. ಆದರೆ ಅವರು ಅಕ್ಕಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
6ಲಕ್ಷ ಮೆಟ್ರಿಕ್ ಟನ್ ರಾಗಿಯನ್ನ ಪ್ರೆಕ್ಯೂರ್ ಮಾಡಲು ಕೇಂದ್ರ ಸರ್ಕಾರ ಹೇಳಿದೆ. ಪ್ರತಿ ಕ್ವಿಂಟಾಲ್ ಗೆ 4886 ರೂಪಾಯಿಯನ್ನು ರೈತರಿಗೆ ಕೊಡುತ್ತೇವೆ. ಜೋಳ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ್ವಿ. ಬೆಳಗಾವಿ ಕಲಬುರಗಿ ವಿಭಾಗದಲ್ಲಿ 71 ಸಕ್ಕರೆ ಕಾರ್ಖಾನೆ ತಪಾಸಣೆ ಮಾಡಿದೆ ವರದಿ ಬಂದಿಲ್ಲ.ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಆತಂಕ ಇಲ್ಲದ ಹಾಗೆ ಅನುಕೂಲ ಮಾಡುತಿದ್ದೇವೆ. ಪೆನಾಲ್ಟಿ ಎಷ್ಟು ವಸೂಲಿ ಮಾಡುತ್ತಿವೋ ಅದು ರೈತರಿಗೆ ಅನುಕೂಲವಾಗುತ್ತದೆ. ಜನಸಂಖ್ಯೆ ಆಧಾರದಲ್ಲಿ ಎಸ್ ಸಿ ಎಸ್ ಟಿ ಗಳಿಗೆ ನ್ಯಾಯಬೆಲೆ ಅಂಗಡಿ ಕೊಡಬೇಕೆಂದು ಸಿಎಂ ಡಿಸಿಎಂ ಮಾತನಾಡಿದ್ದಾರೆ. ಎಸ್ಸಿ ಎಸ್ಟಿ ಗಳಿಗೆ 3715 ನ್ಯಾಯ ಬೆಲೆ ಅಂಗಡಿ ಹೊಸದಾಗಿ ಕೊಡುತ್ತೇವೆ. ಈಗಾಗಲೇ ನಾಲ್ಕೈದು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿ ಕೊಡುವ ಕೆಲಸ ಆರಂಭವಾಗಿದೆ. ಒಳ ಮೀಸಲಾತಿ ಆಧರಿಸಿ ನ್ಯಾಯಬೆಲೆ ಅಂಗಡಿಗಳನ್ನು ಕೊಡಲಾಗುತ್ತದೆ. ಈ ಕಾರ್ಯಕ್ರಮ ರಾಷ್ಟ್ರದಲ್ಲೆ ಮೊಟ್ಟ ಮೊದಲು ಎಂದಿದ್ದಾರೆ.











