ಬೆಂಗಳೂರು: ನಾನಂತೂ ಗುಂಪುಗಾರಿಕೆ ಮಾಡಲ್ಲ, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿ ಕೈ ಪಡೆಯಲ್ಲಿ ಅಲೆನಾ ಎಂಬ ಪ್ರಶ್ನೆ ಉತ್ತರಿಸಿದ ಅವರು ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನಂತೂ ಗುಂಪುಗಾರಿಕೆ ಮಾಡಲ್ಲ. ಶಾಸಕರನ್ನ ಕರೆದುಕೊಂಡು ದೆಹಲಿಗೆ ಹೋಗೋದು ದೊಡ್ಡ ಕೆಲಸ ಅಲ್ಲ. ಏಳೆಂಟು ಶಾಸಕರನ್ನ ಕರೆದುಕೊಂಡು ಹೋಗೋದು ದೊಡ್ಡ ಕೆಲಸ ಅಲ್ಲ. ಅದರಿಂದ ಏನು ಪ್ರಯೋಜನ ಇಲ್ಲ. ನಾನು ಒಂದು ಸ್ಥಾನದಲ್ಲಿ ಇರೋನು, ಪಾರ್ಟಿ ಪ್ರೆಸಿಡೆಂಟ್ ಅಂದರೆ ಫಾದರ್ ಇದ್ದಂಗೆ .ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. 140 ಜನರನ್ನ ತೆಗೆದುಕೊಂಡು ಹೋಗುವವನು. ನನ್ನ ಅವರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ನನಗೆ, ದೇವರಿಗೆ ಮಾತ್ರ ಗೊತ್ತು ಎಂದಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಇದ್ದಾಗಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ಒಪ್ಪದೆ ಇರಬಹುದು .ಕುಮಾರಸ್ವಾಮಿ ಅವರಿಗೂ ಲಾಯಲ್ ಆಗಿ ಇದ್ದೆ . ಸರ್ಕಾರ ಉಳಿಸಬೇಕು ಎಂದು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದು ಅವರ ತಂದೆ ಅವರಿಗೂ ಗೊತ್ತಿದೆ. ಈಗ ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ, ಅದಕ್ಕೆ ನನಗೆ ಬೇಸರ ಇಲ್ಲ. ನನ್ನ ಬದುಕು ಆ ರೀತಿಯಾಗಿದೆ ಅಂದಿದ್ದಾರೆ. ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇನ್ನೂ ಎಷ್ಟು ದಿನ ಹೇಳುತ್ತಿಯಾ ಅದನ್ನ. ಅದಕ್ಕೊಂದು ಟ್ವಿಸ್ಟ್ ಮಾಡ್ತೀರಾ ಎಂದ ಡಿಕೆಶಿ ಪ್ರಶ್ನಿಸಿದ್ದಾರೆ.
ಸ್ವಾಮೀಜಿಗಳ ನಡೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ಷೇಪ ವಿಚಾರದ ಬಗ್ಗೆ ಮಾತನಾಡಿದ ಅವರು ಹೌದಾ, ಪಾಪ ಕುಮಾರಣ್ಣನಿಗೆ ಎರಡನೇ ಮಠ ಹೇಗಾಯ್ತು.?. ಸ್ವಾಮೀಜಿಗಳು ಇಲ್ಲದೆ ಹೋಗಿದ್ರೆ ಸಿಎಂ ಆಗ್ತಿದ್ರಾ ದೇವೇಗೌಡ್ರು.?.ಅವತ್ತು ಸ್ವಾಮೀಜಿ ರಸ್ತೆಗಿಳಿಲಿಲ್ವ.?. ಸದಾನಂದಗೌಡರಿಗೆ ತೊಂದರೆಯಾದಾಗ ಸ್ವಾಮೀಜಿ ಸುಮ್ನೆ ಕುಳಿತಿದ್ರಾ.?. ಕೆಲವು ಸಂದರ್ಭದಲ್ಲಿ ಕೆಲವರು ಮಾತನಾಡ್ತಾರೆ. ಬೇರೆ ಸ್ವಾಮೀಜಿಗಳು ಮಾತನಾಡಿದ್ದಾರೆ.ನಾನು ಬೇಜಾರ್ ಮಾಡಿಕೊಳ್ತೀನಾ ಎಂದಿದ್ದಾರೆ.
ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಸೂಪರ್ ಸಿಎಂ ಎಂಬ ಬಿಜೆಪಿ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಅವರು ಪಾಪ ಅವರಿಗೆನಾದ್ರೂ ಬೇಕಲ್ವಾ?. ಅವರು ಒಂದು ವಿರೋಧ ಪಕ್ಷ. ನಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳಬೇಕು ಅಲ್ವಾ. ಏನೋ ಒಂದು ಮಾಡ್ತಾರೆ. ಬಿಜೆಪಿ ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳೊಕೆ ಆಗುತ್ತಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಸ್ವಾಮೀಜಿಗಳ ಬೆಂಬಲ ನಾನು ಯಾವತ್ತೂ ಕೇಳಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ನಾನು ಕೇಳಿದ್ದೀನಾ?. ನಾನು ಯಾವ ಸ್ವಾಮೀಜಿಯ ಬೆಂಬಲ ಕೇಳಿಲ್ಲ. ನಾನು ಜಾತಿಯಲ್ಲಿ ಹುಟ್ಟಿರಬಹುದು. ಆದ್ರೆ ಎಲ್ಲಅ ಜಾತಿನೂ ನಾನು ಪ್ರೀತಿ ಮಾಡ್ತೀನಿ. ಬಾಳೆಹೊನ್ನುರು ಸ್ವಾಮೀಜಿಗಳು, ಶ್ರೀಶೈಲ ಸ್ವಾಮೀಜಿಗಳು ಸೇರಿದಂತೆ ಬೇಕಾದಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ರು. ನಾನು ಅವರನ್ನ ಕೇಳಿದ್ನಾ?. ಅವರಿಗೆ ನನ್ನ ಬಗ್ಗೆ ಒಂದು ವಿಶ್ವಾಸ ಅಷ್ಟೇ. ಪ್ರೀತಿ, ಗೌರವವಿದೆ ಅದನ್ನು ತಪ್ಪು ಅಂತ ಹೇಳೊಕೆ ಆಗುತ್ತಾ.?. ಜೈನ ಸ್ವಾಮೀಜಿಗಳು ಬಹಿರಂಗ ಸಭೆಯಲ್ಲೇ ಆಶೀರ್ವಾದ ಮಾಡಿ ಹೇಳಿದ್ರು. ಧರ್ಮಸ್ಥಳಕ್ಕೆ ಹೋದಾಗ ಯಾವುದೋ ಪ್ರೋಗ್ರಾಂನಲ್ಲಿ ಮಾತನಾಡಿದ್ರು. ಅವರಿಗೆ ನಾನು ಕೇಳಿದ್ನಾ?. ಅವರವರ ಪ್ರೀತಿ ವಿಶ್ವಾಸವನ್ನ ವ್ಯಕ್ತಪಡಿಸ್ತಾರೆ. ಅದನ್ನು ತಪ್ಪು ಅಂತ ಹೇಳೋಕೆ ಆಗುತ್ತಾ.?. ಇವರು(ಕುಮಾರಸ್ವಾಮಿ) ಬಿಡಿ ವಿಶ್ವಮಾನವರು, ದೊಡ್ಡವರು. ಪಾಪ ಅವರಿಗೆ ಯಾರ ಆಶೀರ್ವಾದನೂ ಬೇಡ. ಅವರು ಮಠವನ್ನ ಯಾವತ್ತೂ ಉಪಯೋಗಿಸಿಕೊಂಡಿಲ್ಲ.ಒಕ್ಕಲಿಗ ಸಂಘ ಮತ್ತು ಜಾತಿಯನ್ನ ಉಪಯೋಗಿಸಿಕೊಂಡಿಲ್ಲ. ಬಿಡಿ ಅವರೆಲ್ಲ ಬಹಳ ದೊಡ್ಡವರು ಎಂದ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ಹೋಗುವ ವಿಚಾರದ ಬಗ್ಗೆ ಮಾತನಾಡಿದ ಅವರು ನೋಡಬೇಕು. ನಾನು ಸಿಎಂ ಮತ್ತೆ ಮಾತನಾಡುತ್ತೇವೆ. ನಿನ್ನೆಯೂ ಮಾತನಾಡಿದ್ದೇವೆ, ಮುಂದಕ್ಕೂ ಮಾತನಾಡುತ್ತೇವೆ. ನಾವು ಅಲ್ ಪಾರ್ಟಿ ಮೀಟಿಂಗ್ ಪಾರ್ಟಿ ಕರೆಯಬೇಕು. ಅದನ್ನು ದೆಹಲಿಯಲ್ಲೇ ಕರೆಯಬೇಕು ಅನ್ನೋದು ನನ್ನ ಅಭಿಪ್ರಾಯ. ಕೆಲವು ಇಶ್ಯೂಸ್ ಇದೆ. ಸಿಎಂ ಏನ್ ಹೇಳ್ತಾರೆ ಕೇಳ್ತೀನಿ. ನಾನು ಹೋಗಿ ಸಭೆ ಮಾಡೋದು ಸರಿ ಇರಲ್ಲ. ಸಿಎಂ ಸೇರಿದಂತೆ ಬೇರೆ ಬೇರೆ ಸಚಿವರು ಬರಬೇಕು. ಕೃಷ್ಣಭೈರೇಗೌಡ ಎಲ್ಲರೂ ಆ ಸಭೆ ಬೇಕಾಗ್ತಾರೆ. ಕೇಳ್ಬಿಟ್ಟು ತೀರ್ಮಾನ ಮಾಡುತ್ತೇವೆ ಎಂದ ಡಿ ಕೆ ಶಿವಕುಮಾರ್ ಅಂದಿದ್ದಾರೆ.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಅಪ್ಪ- ಮಕ್ಕಳು ಭೇಟಿ ಮಾಡೋದಕ್ಕೆ ಅರ್ಜಿ ಹಾಕಿಕೊಳ್ಳಬೇಕಾ?. ಪಾರ್ಟಿಯ ಇಂಪಾರ್ಟೆಂಟ್ ಲೀಡರ್. ರಾಹುಲ್ ಗಾಂಧಿಯವರು ನಮ್ಮ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಒಂದು AI instrument ತಯಾರಿ ಮಾಡಿದ್ದಾರೆ.ಬಹಳ ಕಡಿಮೆ ದರದಲ್ಲಿ ಬೆಂಗಳೂರಿನವರು ತಯಾರಿ ಮಾಡಿದ್ದಾರೆ. ಅದು ಗ್ಲೋಬಲ್ ಲೆವೆಲ್ ಗೆ ಅನುಕೂಲವಾಗುತ್ತೆ. ಆದ್ರ ಬಗ್ಗೆ ಅವರಿಗೆ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ತಿಳಿದು, ನಾನು ನೋಡಬೇಕು ಅಂತ ಅವರನ್ನ ಶರತ್ ಬಚ್ಚೇಗೌಡರನ್ನ ಕರೆಸಿಕೊಂಡು ಅರ್ಧಗಂಟೆ ಚರ್ಚೆ ಮಾಡಿದ್ದಾರೆ. ನಿಮ್ಮ ಕರ್ನಾಟಕದಲ್ಲಿ ಒಳ್ಳೆಯ ಕೆಲಸ ಆಗಿದೆ ಅಂತ ಐಟಿ ಪೀಪಲ್ಸ್ ತಿಳಿಸಿದ್ದಾರೆ. ಅದಕ್ಕೆ ಅವರನ್ನ ಕರೆದು ತಿಳಿದುಕೊಂಡಿದ್ದಾರೆ.ಹೋದ ತಕ್ಷಣ ರಾಜಕೀಯ ಮಾತನಾಡೋದು ಅಂತನಾ.?. ಅಪ್ಪ ಮತ್ತು ಮಕ್ಕಳು, ಅಣ್ಣ- ತಮ್ಮ ಸೇರಿದಾಗೆಲ್ಲ ರಾಜಕೀಯನಾ?.ಬೇರೆ ಅವರದೆಲ್ಲ ನಿಮಗೆ ಲೆಕ್ಕ ಇಲ್ಲ, ನಮ್ಮದು ಮಾತ್ರ ನಿಮಗೆ ಲೆಕ್ಕ ಎಂದು ಹೇಳಿದ್ದಾರೆ.











