ಬೆಂಗಳೂರು; ಇನ್ನು ಮುಂದೆ ಆನ್ಲೈನ್ ಮೂಲಕ ಲ್ಯಾಂಡ್ ಅಕ್ವೇಜೇಷನ್ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಏಕೀಕೃತ ಭೂಸ್ವಾಧೀನ ತಂತ್ರಾಂಶ ವ್ಯವಸ್ಥೆ ಲೋಕಾರ್ಪಣೆ ಮಾಡ್ತಿದ್ದೇವೆ. ಲ್ಯಾಂಡ್ ಅಕ್ವೇಜೇಷನ್ ಆನ್ಲೈನ್ ಸಿಸ್ಟಮ್ ತಂದಿದ್ದೇವೆ. ಇನ್ನು ಮುಂದೆ ಆಗುವ ಲ್ಯಾಂಡ್ ಅಕ್ವೇಜೇಷನ್ ಆನ್ಲೈನ್ ಮೂಲಕ ಆಗುತ್ತದೆ. ಕೋರ್ಟ್ ನಲ್ಲಿ ಪೆಂಡ್ಡಿಂಗ್ ಇದ್ದ ಕೇಸ್ ಕೂಡ ಇದರಡಿ ಬರುತ್ತವೆ. ಬೆಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ವರ್ಕ್‌ಶಾಫ್ ಮಾಡುತ್ತಿದ್ದೇವೆ. ಈಗಾಗಲೇ ಹತ್ತು ಜನರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಕೆಲವೊಂದಿಷ್ಟು ಬದಲಾವಣೆ ಬೇಕಾದ್ರೂ ಕೂಡ ಮಾಡುವುದಕ್ಕೆ ಅವಕಾಶ ಇದೆ. ನಮ್ಮ ಇ ಗವರ್ನರ್ಸ್ ನವರು ಪ್ರಾಯೋಗಿಕ ಪ್ರದರ್ಶನ ಮಾಡ್ತೇವೆ ಎಂದಿದ್ದಾರೆ.
ಇಲ್ಲಿಯವರೆಗೂ ಭೂಸ್ವಾಧೀನ ಪ್ರಕ್ರಿಯೆ ನಾನಾ ನೂನ್ಯತೆಯಿಂದ ಕೂಡಿದೆ. ಕಾನೂನಿನಲ್ಲಿ ಯಾವುದೇ ಗೊಂದಲ ಇಲ್ಲ. ಆದ್ರೆ ಕಾನೂನು ಬದಿಗಿಟ್ಟು ಭೂಸ್ವಾಧೀನ ಮಾಡಿಕೊಂಡು ಬಂದಿದ್ದಾರೆ. ಯಾರದ್ದೋ ಜಮೀನಿಗೆ ಯಾರದ್ದೋ ಹೆಸರುಗಳಿವೆ. ಭೂ ಮಾಲೀಕರು ವ್ಯಾಜ್ಯ ಇದ್ದರೂ ಭೂಮಿ ನೀಡಿ ಪೇಮೆಂಟ್ ಮಾಡಿರೋದು ಇದೆ. ಹೀಗಾಗಿ ಭೂ ಅಕ್ರಮಕ್ಕೂ ಇದು ಕಾರಣವಾಗುತ್ತಿದೆ. ಪೇಪರ್ ನಲ್ಲಿ ವ್ಯವಹಾರ ಮಾಡಿದ್ರೆ, ತಿರುಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಆನ್ಲೈನ್ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಪಾರದರ್ಶಕತೆ ಬೇಕು, ಆಡಳಿತ ಸರಳೀಕೃತ, ಡಿಜಿಟಲೀಕೃತ ಆಗಬೇಕು ಅನ್ನೋದು ಇದರ ಉದ್ದೇಶ. ನೂನ್ಯತೆಗಳನ್ನ ನೋಡೋದಾದ್ರೆ ಮುನ್ಸಿಪಲ್ ಆಸ್ತಿ ಇದೆ ಅಂತಾರೆ.ಆದ್ರೆ ಅಲ್ಲಿ ದಾಖಲೆ ಇರಲ್ಲ. ಆ ಭೂಮಿ ಬೇಕು ಅಂದ್ರೆ ಖಾತೆಯಾದ್ರೂ ಇರಬೇಕು. ಗ್ರಾಮ ಪಂಚಾಯತಿ ದಾಖಲೆಗಳನ್ನು ಕಾವೇರಿ ವೆಬ್ ನಲ್ಲಿ ತರುವ ವ್ಯವಸ್ಥೆ ಮಾಡುತ್ತಿದ್ದೇವೆ. ಏಳೆಂಟು ರೂಪದ ಹಗರಣ ಆಗುತ್ತಿದೆ. ನೀರಾವರಿ, ನ್ಯಾಷನಲ್ ಹೈವೆ ಇಷ್ಟು ಜಾಗ ಬೇಕು ಅಂತ ನಮಗೆ ಕೊಡುತ್ತಾರೆ. ಇದರಲ್ಲಿ ರಸ್ತೆ ಎಲ್ಲಿ ಬರುತ್ತದೆ ಅನ್ನೋ ಮಾಹಿತಿ ಇರುತ್ತದೆ.ಪ್ರಿಲಿನರಿ ದಾಖಲೆ ನೀಡಿ ಅಧಿಕಾರಿಗಳು ಜಮೀನು ಖರೀದಿ ಮಾಡುತ್ತಾರೆ. ಕೆಲವು ಅಧಿಕಾರಿಗಳು, ಅವರ ಸಂಬಂಧಿಕರು ಕಡಿಮೆ ದರಕ್ಕೆ ಖರೀದಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಳಂಬ ಮಾಡಿ, ತಮ್ಮ ಜಮೀನಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳು ಈಗಾಗಲೇ ಮಾಡಿದ್ದಾರೆ, ನಮ್ಮ ಬಳಿ ದಾಖಲೆ ಇದೆ. ಅಧಿಕಾರಿಗಳೇ ಮಾಹಿತಿ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ. ಹೆಚ್ಚಿನ ಪರಿಹಾರಕ್ಕಾಗಿ ಈ ರೀತಿ ಅಧಿಕಾರಿಗಳೇ ಮಾಡುತ್ತಿದ್ದಾರೆ. ಅಡ್ವಾನ್ಸ್ ಖರೀದಿ ಮಾಡಿ, ಕನ್ವರ್ಸನ್ ಮಾಡುವ ಕೆಲಸ ಆಗ್ತಿದೆ. ನೋಟಿಫಿಕೇಷನ್ ಆದ ಜಮೀನಿನಲ್ಲಿ ನಿವೇಶನ ಕಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಪರಿಹಾರ ತೆಗೆದುಕೊಳ್ಳುವ ಕೆಲಸ ಆಗ್ತಿತ್ತು. ಇದು ಆದ್ಮೇಲೆ ಸ್ಯಾಟಲೈಟ್ ಮೂಲಕ ನೋಟಿಫೀಕೇಷನ್ ಆಗುತ್ತಿದೆ.ಇನ್ನು ಮುಂದೆ ಈ ರೀತಿ ಆಗುವುದಕ್ಕೆ ಅವಕಾಶ ಇಲ್ಲ. ನೋಟಿಫೀಕೇಷನ್ ಆದಾಗ ಜಮೀನಿನಲ್ಲಿ ಮರಗಳು, ಬೆಳೆ ಇರೋದಿಲ್ಲ.ಆದ್ರೆ ಲ್ಯಾಂಡ್ ಅಕ್ವೇಜೇಷನ್ ಹೋದಾಗ ಬೇರೆ ಸ್ಥಳದಿಂದ ಮರಗಳನ್ನ ತಂದು ಹಾಕುತ್ತಿದ್ದಾರೆ.ಬೇರೆ ಬೆಳೆಗಳನ್ನು ತೋರಿಸಿ ಕೋಟಿ ಕೋಟಿ ಪರಿಹಾರ ಪಡೆಯುತ್ತಿದ್ದಾರೆ.ಹೀಗಾಗಿ ಇದನ್ನ ತಪ್ಪಿಸೋದಕ್ಕೆ ಸ್ಯಾಟಲೈಟ್ ಮೂಲಕ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು ಹಲವು ಕಡೆ ವಾಡಿಕೆಗಿಂತ ನಾಲ್ಕು ಪರ್ಸೆಂಟ್ ಹೆಚ್ಚು ಮಳೆಯಾಗಿದೆ.ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ .ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿದೆ. ಭೀಮಾನದಿಯಲ್ಲಿ ಹರಿವು ಹೆಚ್ಚಾಗಿದೆ. ಸೀತಾ ಉಪನದಿಯಲ್ಲೂ ಅಸಾಧಾರಣ ನೀರು ಬರುತ್ತಿದೆ. ಭೀಮಾ ಪಾತ್ರದಲ್ಲಿ ಹೆಚ್ಚು ನೆರೆ ಸೃಷ್ಟಿಯಾಗಿದೆ.ಎರಡು ಹಂತದಲ್ಲಿ ರೈತರಿಗೆ ಬೆಳೆಹಾನಿಯಾಗಿದೆ.ಪ್ರಾಣಹಾನಿ ಸಂಭವಿಸಿಲ್ಲ, ಅದೇ ತೃಪ್ತಿದಾಯಕ. 8.60 ಲಕ್ಷ ಹೆಕ್ಟರ್ ನಲ್ಲಿ ಬೆಳೆಹಾನಿಯಾಗಿದೆ.ಜಿಲ್ಲಾ ಮಂತ್ರಿಗಳು ಕಾರ್ಯೋನ್ಮೂಕರಾಗಿ . 75 ನೆರವು ಕೇಂದ್ರಗಳನ್ನು ತೆರದಿದ್ದೇವೆ. ಸುಮಾರು 8,900 ಜನರು ಸೌಲಭ್ಯ ಪಡೆದಿದ್ದಾರೆ.ಜಿಲ್ಲಾಧಿಕಾರಿಗಳಿಗೆ ಹಣಕಾಸಿನ ಸೌಲಭ್ಯ ನೀಡಿದ್ದೇವೆ. ನೆರೆ ಪರಿಹಾರಕ್ಕೆ ಬಳಸಲು ಸಿಎಂ ಒಪ್ಪಿಗೆ ಕೊಟ್ಟಿದ್ದಾರೆ.ಪರಿಹಾರ ಕೊಡೊಕೆ ಸರಕಾರ ಸಿದ್ಧವಾಗಿದೆ. ಪರಿಹಾರ ನೀಡಲು ಹಣದ ಕೊರತೆ ಇಲ್ಲ.ನಾಳೆ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದಿದ್ದಾರೆ.
ವಿರೋಧ ಪಕ್ಷಗಳ ನಾಯಕರಿಂದ ನೆರೆ ಪ್ರದೇಶಗಳಿಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ವಿರೋಧ ಪಕ್ಷಗಳು ಈಗ ಎದ್ದಿದ್ದಾರೆ.ಇಲ್ಲಿಯ ತನಕ ಬೆಂಕಿ ಇಡ್ತಿದ್ರು.ಈಗಲಾದರೂ ಎಚ್ಚೆತ್ತುಕೊಂಡಿದ್ದಾರೆ. ವಿರೋಧದ ನಾಯಕರು ಹೋಗುವ ಮೊದಲೆ ಸಚಿವರ ಫೀಲ್ಡ್ ನಲ್ಲಿದ್ದಾರೆ ಎಂದು ಹೇಳಿದ್ದಾರೆ.











