ಮನೆ Latest News ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ; ಬಸವರಾಜ ಬೊಮ್ಮಾಯಿ ಹೇಳಿಕೆ

ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ; ಬಸವರಾಜ ಬೊಮ್ಮಾಯಿ ಹೇಳಿಕೆ

0

ಬೆಂಗಳೂರು: ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಗಣತಿ ಕಾಯಿದೆ ಇದೆ, ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ಸರ್ವೆ ಮಾಡಬಹುದು. ಮನೆ ಮನೆಗೆ ಹೋಗುವುದು ಕಾಯಿದೆಯ ವಿರುದ್ದ ಇದೆ.ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಟು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಕಾಂತರಾಜ ವರದಿ ಯಾಕೆ ಮಾಡಿದ್ದರು ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಜನರಿಗೆ ತಿಳಿಸಬೇಕು. ಸಂವಿಧಾನದ ಕಾಲಂನಲ್ಲಿ ಆರು ಧರ್ಮ ಇರೊದು ಅದರಲ್ಲಿ ಇತರರು, ನಾಸ್ತಿಕರು ಅಂತ ಸೇರಿಸಿದ್ದಾರೆ. ನಾಸ್ತಿಕರಿಗೆ ಧರ್ಮ ಇಲ್ಲ. ಕ್ರಿಶ್ಚಿಯನ್ ಭ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ..?. ಸಂವಿಧಾನದ ಬಗ್ಗೆ ಮಾತನಾಡುತ್ತಾ ಸಂವಿದಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಲೋಪಗಳಿವೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿತ್ತು.ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. 2018 ರಲ್ಲಿ ಜನರಿಗೆ ಒಮ್ಮೆ ಪಾಠ ಕಲಿಸಿದ್ದಾರೆ. ಸಮಾಜ ಒಡೆದು ರಾಜಕೀಯ ರೊಟ್ಡಿ ಸುಟ್ಡುಕೊಳ್ಳುವ ಕೆಲಸ ಮಾಡುತ್ತಿರುವುದು ಜನರಿಗೆ ಗೊತ್ತಿದೆ. ಕರ್ನಾಟಕದ ಎಲ್ಲ ಸಮುದಾಯಗಳಲ್ಲಿ ಒಗ್ಗಟ್ಟು ಇರಬೇಕು. ವೀರಶೈವ ಲಿಂಗಾಯತ, ಒಕ್ಕಲಿಗ ಬ್ರಾಹ್ಮಣ ಎಲ್ಲರೂ ಒಗ್ಗಟ್ಟಾಗಿರಬೇಕು. ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಕೇಂದ್ರ ಸರ್ಕಾರ ಗಣತಿ ಮಾಡಲುವ ತೀರ್ಮಾನಿಸಿದೆ. ಒಂದೂವರೆ ಕೋಟಿ ಮನೆಗಳನ್ನು ಹದಿನೈದು ದಿನಗಳಲ್ಲಿ ಮಾಡಲು ಸಾಧ್ಯವಿಲ್ಲ.ಮತ್ತೆ ಕಾಂತರಾಜ ವರದಿಯನ್ನು ಕಟ್ ಆಂಡ್ ಪೇಸ್ಟ್ ಮಾಡುತ್ತಾರೆ. ಹಿಂದುಳಿದ ವರ್ಗದ ಆಯೋಕ್ಕೆ ಎಲ್ಲ ಜನಾಂಗದ ಗಣತಿ ಮಾಡಲು ಅಧಿಕಾರ ಇಲ್ಲ.ಕೇವಲ ರಾಜಕಿಯ ಮೂಲ ಉದ್ದೇಶಕ್ಕೆ ಸಮಿಕ್ಷೆ ಮಾಡುತ್ತಿದ್ದಾರೆ. ಈಗಲು ಸರಿಪಡಿಸಲು ಅವಕಾಶ ಇದೆ ಎಂದಿದ್ದಾರೆ.

ಇನ್ನು  ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಇದೇ ವೇಳೆ ಮಾತನಾಡಿ ಸಿದ್ದರಾಮಯ್ಯನವರಿಗೆ ವೀರಶೈವ ಲಿಂಗಾಯತ ಇತಿಹಾಸದ ಬಗ್ಗೆ ಗೊತ್ತಿದೆ. ಆದರೂ ಕೂಡ ದೊಡ್ಡ ಷಡ್ಯಂತ್ರ ಮಾಡಿ ನಮ್ಮ ಸಮಾಜವನ್ನು ಕಾವಲು ದಾರಿ ಯಾಗಿ ಮಾಡಿದ್ದಾರೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಂಸ್ಕಾರದ ಜೀವನ ನಡೆಸಲು ಸಾಕಷ್ಟು ಒತ್ತು ಕೊಟ್ಟಿದೆ ನಮ್ಮ ಸಮಾಜ. ಹೀಗಾಗಿ ಇದೆಲ್ಲದರ ಬಗ್ಗೆ ಇಂದು ನಾವು ಚರ್ಚೆ ಮಾಡಿದ್ದೇವೆ.ಏನು ನಿರ್ಧಾರ ಎಂಬುದನ್ನು ನಮ್ಮ ರಾಜ್ಯಾಧ್ಯಕ್ಷರು ಹೇಳ್ತಾರೆ ಎಂದಷ್ಟೇ ಹೇಳಿ ಸೋಮಣ್ಣ ತೆರಳಿದ್ದಾರೆ.