ಬೆಂಗಳೂರು; ಎಬಿವಿಪಿ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವ ಎಬಿವಿಪಿ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ. ನಾನು ದಾರಿಯಲ್ಲಿ ಬರುವಾಗ ರಾಣಿ ಅಬ್ಬಕ್ಕ ಮೆರವಣಿಗೆ ಬರ್ತಾ ಇತ್ತು. ಸ್ಥಳೀಯ ಶಾಸಕ ಷಡಕ್ಷರಿ ನಾನು ಒಟ್ಟಿಗೆ ಇದ್ವಿ. ರಾಣಿ ಅಬ್ಬಕ್ಕ ಪ್ರೊಸೆಷನ್ ಹೋಗುವಾಗ ಹೂ ಹಾಕಿ ಬಂದಿದ್ದೇವೆ ಅಷ್ಟೇ .ನಾನು ಎಬಿವಿಪಿ ಕಾರ್ಯಕ್ರಮ ಮತ್ತೊಂದು ಏನು ಅಟೆಂಡ್ ಮಾಡಿಲ್ಲ . ಇದಕ್ಕೂ ಮೇಲೆ ಯಾರಾದ್ರೂ ಕಾಂಟ್ರವರ್ಸಿ ಮಾಡಿದ್ರೆ ಮಾಡಿಕೊಳ್ಳಲಿ . ನನಗೇನು ತೊಂದರೆ ಇಲ್ಲ ಎಂದಿದ್ದಾರೆ.
ನನ್ನ ಐಡಿಯಾಲಜಿ ಕಮಿಟ್ಮೆಂಟ್ ಅನ್ನು ಯಾರು ಪ್ರಶ್ನೆ ಮಾಡೋ ಹಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್. ಐ ಆಮ್ ಎ ಡೈ ಆಸ್ ಎ ಕಾಂಗ್ರೆಸ್ ಮೆನ್. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ,ಅವರು ಮಾಡುತ್ತಿರಬಹುದು . ಪಕ್ಷದ ಒಳಗೂ ಇರಬಹುದು ಹೊರಗೂ ಇರಬಹುದು.ಇಂತಹ ಚೀಪ್ ಟ್ರಿಕ್ಸ್ ಎಲ್ಲಾ ಜನಕ್ಕೆ ಗೊತ್ತಾಗುತ್ತೆ . ಪರಮೇಶ್ವರ್ ಏನು ಅಂತ ಇಡೀ ರಾಜ್ಯದಲ್ಲಿ ಜನರಿಗೆ ಗೊತ್ತಿದೆ . ಕಳೆದ 35 ವರ್ಷಗಳಿಂದ ನನ್ನ ರಾಜಕೀಯ ಏನು ಅನ್ನೋದು ಗೊತ್ತಿದೆ .ನಾನು ಅದನ್ನ ಪದೇ ಪದೇ ಸಾಬೀತು ಮಾಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಸಿಟಿ ರವಿ ಮೇಲೆ ಎಫ್‌ಐಆರ್ ದಾಖಲಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ದ್ವೇಷ ಭಾಷಣ ಮಾಡಿದ್ದಾರೆ ಅಂತ ಎಫ್ ಐ ಆರ್ ದಾಖಲಿಸಲಾಗಿದೆ. ಅದರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಪೊಲೀಸರು ತೆಗೆದುಕೊಳ್ಳುತ್ತಾರೆ ಎಂದರು. ಮೀಸಲಾತಿ ವಿಚಾರಕ್ಕೆ ಬೆಂಗಳೂರಲ್ಲಿ ಪ್ರತಿಭಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಎಲ್ಲಾ ರೀತಿಯ ಲೆಕ್ಕಾಚಾರ ಹಾಕಿ ಜಾತಿ ಸಂಖ್ಯೆ ಆಧಾರದ ಮೇಲೆ ವರ್ಗೀಕರಣವನ್ನು ಮಾಡಲಾಗಿದೆ. ಆಧಾರದ ಮೇಲೆ ಕ್ಯಾಬಿನೆಟ್ ನಿರ್ಧಾರ ಮಾಡಿದೆ . 6, 6, 5 ಅಂತ ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಇದಕ್ಕೆ ಒಪ್ಪಿಗೆ ಆಗಿಲ್ಲ ಅಂತ ಅವರು ಪ್ರತಿಭಟನೆ ಮಾಡಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೆ ಹೋಗಿದೆ. ಮುಖ್ಯಮಂತ್ರಿ ಅವರನ್ನು ಕೂಡ ಭೇಟಿಯಾಗಿರಬಹುದು ಅಂತ ಅಂದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ನಾವು ಯಾರು ಒಬ್ಬೊಬ್ಬರೇ ಅದನ್ನ ತೀರ್ಮಾನ ಮಾಡುವ ಹಾಗಿಲ್ಲ ಎಂದರು.
ಬ್ಯಾಲೆಟ್ ಮೂಲಕ ಚುನಾವಣೆ ನಡೆಸಲು ಸುಗ್ರೀವಾಜ್ಞೆ ತರುವ ವಿಚಾರದ ಬಗ್ಗೆ ಮಾತನಾಡಿದ ಅವರು ಇವತ್ತು ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಲಿದೆ. ಅದಾದ್ಮೇಲೆ ನೋಡೋಣ ಎಂದ ಅವರು ಮದ್ದೂರು ಕಲ್ಲು ತೂರಾಟ ತನಿಖೆ ಬಗ್ಗೆ ಮಾತನಾಡಿ ಮದ್ದೂರು ಈಗ ಶಾಂತಿಯಿಂದ ಇದೆ. ಯಾರನ್ನ ಬಂದಿಸಿದ್ವಿ ಅವರ ಮೇಲೆ ಕ್ರಮ ತಗೊಂಡಿದ್ದೇವೆ. ಅವರ ಮೇಲೆ ಕೇಸ್ ಬುಕ್ ಆಗಿದೆ.ಮಾರನೇ ದಿನ ಆದಂತ ಪ್ರತಿಭಟನೆ ದೃಶ್ಯಗಳನ್ನು ಕೂಡ ಕ್ಯಾಪ್ಚರ್ ಮಾಡಿದ್ದಾರೆ.ಯಾರು ಪ್ರತಿಭಟನೆಯಲ್ಲಿ ಪ್ರಚೋದನೆ ಮಾಡಿದ್ರು ಅವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.











